ಸುರತ್ಕಲ್‌ಗೆ ಸುಸಜ್ಜಿತ ಸರಕಾರಿ ಆಸ್ಪತ್ರೆ: ಸಿಎಂ
ಸುರತ್ಕಲ್‌ನಲ್ಲಿ 9.30 ಕೋ.ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ

ಮಂಗಳೂರು, ಎ.21: ಸುರತ್ಕಲ್ ಪರಿಸರದಲ್ಲಿ ಸುಸಜ್ಜಿತ ಸರಕಾರಿ ಆಸ್ಪತ್ರೆಯಾಗಬೇಕು ಎನ್ನುವ ಬೇಡಿಕೆಯನ್ನು ಪರಿಗಣಿಸುವ ಇಂಗಿತವನ್ನು ಸರಕಾರ ಹೊಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸುರತ್ಕಲ್ ಕೇಂದ್ರ ಮೈದಾನದಲ್ಲಿ ಗುರುವಾರ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಸುರತ್ಕಲ್ ಪ್ರದೇಶದಲ್ಲಿ 9.30 ಕೋ.ರೂ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಸರಕಾರ ಈ ಬಾರಿ ಹೊಸ ಸರಕಾರಿ ಆಸ್ಪತ್ರೆಗಳನ್ನು ಆರಂಭಿಸುವ ಉದ್ದೇಶ ಹೊಂದಿಲ್ಲ. ಆದರೆ ಸುರತ್ಕಲ್ ಪ್ರದೇಶದ ಜನರ ಬೇಡಿಕೆ ಹಾಗೂ ಶಾಸಕರ ಆಗ್ರಹದ ಹಿನ್ನೆಲೆಯಲ್ಲಿ ಹೊಸ ಆಸ್ಪತ್ರೆ ಆರಂಭಿಸುವ ಬಗ್ಗೆ ಪರಿಶೀಲಿಸುವಂತೆ ಸ್ಥಳದಲ್ಲಿದ್ದ ಆರೋಗ್ಯ ಸಚಿವರಿಗೆ ಅವರು ಸೂಚಿಸಿದರು.
ಶಾಸಕ ಮೊಯ್ದಿನ್ ಬಾವ ತನ್ನ ಕ್ಷೇತ್ರದ ಬಗ್ಗೆ ಹೆಚ್ಚಿನ ಮುತುವರ್ಜಿಯಿಂದ ಕಾರ್ಯನಿರ್ವಹಿಸುತ್ತಿರುವುದು ಜನತೆಗೆ ಹೆಚ್ಚು ಅನುಕೂಲಕರವಾಗಿದೆ ಎಂದು ಅವರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಜನರ ನಡುವಿನ ಸಾಮರಸ್ಯಕ್ಕೆ ಅಡ್ಡಿಪಡಿಸುವ ಮೂಲಭೂತವಾದಿಗಳ ವಿರುದ್ಧ ಕಠಿಣ ಕ್ರಮ ಕೈಗೊ ಳ್ಳಲು ಸರಕಾರ ಹಿಂಜರಿಯುವುದಿಲ್ಲ ಎಂದು ಮುಖ್ಯಮಂತ್ರಿ ಇದೇ ಸಂದರ್ಭ ಎಚ್ಚರಿಕೆ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಬಿ.ಎ.ಮೊಯ್ದಿನ್ ಬಾವ, ಸುರತ್ಕಲ್ ಪರಿಸರ ದಲ್ಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇಲ್ಲಿ 40 ಹಾಸಿಗೆಯ ಸರಕಾರಿ ಆಸ್ಪತ್ರೆಯ ಕೊರತೆ ಇದೆ. ಇದಕ್ಕೆ ಅಗತ್ಯವಾದ 5 ಎಕ್ರೆ ಸ್ಥಳವು ಸಿದ್ಧವಿದೆ. ಇದಕ್ಕೆ ಎಂಆರ್‌ಪಿಎಲ್ ಆರ್ಥಿಕ ನೆರವು ನೀಡಲು ಮುಂದೆ ಬಂದಿದೆ. ಅದನ್ನು ಒದಗಿಸಿಕೊಟ್ಟರೆ ಇಲ್ಲಿನ ಜನರಿಗೆ ತುಂಬಾ ಅನುಕೂಲವಾಗಲಿದೆ ಎಂದು ುುಖ್ಯ ಮಂತ್ರಿಗೆ ಮನವಿ ಸಲ್ಲಿಸಿದರು. ಸುರತ್ಕಲ್ ಪ್ರದೇಶದ ಅಭಿವೃದ್ಧಿಗೆ ಸಹಕಾರ ನೀಡಿದ ಎಲ್ಲ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಅವರು ಕೃತಜ್ಞತೆ ಸಲ್ಲಿಸಿದರು.
ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಆರೋಗ್ಯ ಸಚಿವ ಯು.ಟಿ.ಖಾದರ್, ಮೀನುಗಾರಿಕಾ ಸಚಿವ ಅಭಯಚಂದ್ರ ಜೈನ್, ಶಾಸಕರಾದ ಜೆ.ಆರ್.ಲೋಬೊ, ಐವನ್ ಡಿಸೋಜ, ಮನಪಾ ಮೇಯರ್ ಕೆ.ಹರಿನಾಥ್, ಉಪ ಮೇಯರ್ ಸುಮಿತ್ರಾ ಕೆ., ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ, ಜಿಪಂ ಸಿಇಒ ಶ್ರೀವಿದ್ಯಾ, ಎಂಆರ್‌ಪಿಎಲ್ ಆಡಳಿತ ನಿರ್ದೇಶಕ ಕುಮಾರ್, ಮನಪಾ ಆಯುಕ್ತ ಡಾ.ಎಚ್.ಎನ್.ಗೋಪಾಲಕೃಷ್ಣ,ಉಪ ಆಯುಕ್ತ ಎನ್.ಶಿವಶಂಕರ ಸ್ವಾಮಿ, ಮನಪಾ ಸದಸ್ಯರಾದ ಅಶೋಕ್ ಶೆಟ್ಟಿ, ಪುರುಷೋತ್ರಮ ಚಿತ್ರಾಪುರ, ಪ್ರತಿಭಾ ಕುಳಾಯಿ, ಬಶೀರ್ ಅಹ್ಮದ್, ರೇವತಿ, ಗುಣಕರ ಶೆಟ್ಟಿ, ಮೀರಾ, ಕಾಂಗ್ರೆಸ್ ಮುಖಂಡರಾದ ಜಿ.ಎ.ಬಾವ, ಬಿ.ಎಂ.ಫಾರೂಕ್, ಮುಮ್ತಾಝ್ ಅಲಿ, ಶಶಿಧರ ಹೆಗ್ಡೆ, ಅಪ್ಪಿ, ಲ್ಯಾನ್ಸಿ ಲಾಟ್ ಪಿಂಟೊ ಮತ್ತಿತರರು ಉಪಸ್ಥಿತರಿದ್ದರು.
ಸಾಮಾಜಿಕ ಆರ್ಥಿಕ ಗಣತಿ ವರದಿ ಮೇ ತಿಂಗಳಲ್ಲಿ ಪ್ರಕಟ
ಸ್ವಾತಂತ್ರನಂತರ ರಾಜ್ಯದಲ್ಲಿ ಪ್ರಥ ಮವಾಗಿ ನಡೆಸಲಾದ ಸಾಮಾ ಜಿಕ ಆರ್ಥಿಕ ಜನಗಣತಿ ಸರಕಾರದ ಯೋಜನೆಗಳು ಎಷ್ಟರಮಟ್ಟಿಗೆ ಜನರನ್ನು ತಲು ಪಿವೆ ಎಂದು ತಿಳಿದುಕೊಳ್ಳಲು ನೆರವಾಗಲಿದೆ. ಮೇ ತಿಂಗಳಲ್ಲಿ ಈ ವರದಿಯನ್ನು ಸರಕಾರ ಪ್ರಕಟಿಸಲಿದೆ.
-ಸಿದ್ದರಾಮಯ್ಯ, ಮುಖ್ಯಮಂತ್ರಿ
ಸುರತ್ಕಲ್‌ನಲ್ಲಿ ಸಿಎಂ ಚಾಲನೆ ನೀಡಿದ ಯೋಜನೆಗಳು
130 ಕೋ.ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿ ರುವ ಮಾರುಕಟ್ಟೆ ಸಂಕೀರ್ಣದ 1.70 ಕೋ.ರೂ. ವೆಚ್ಚದ ಪೂರ್ವಭಾವಿ ಕಾಮಗಾರಿ.
ಸುರತ್ಕಲ್‌ನಲ್ಲಿ ಮನಪಾ ಪ್ರಾದೇಶಿಕ ಕಚೇರಿಗೆ 2.25 ಕೋ.ರೂ. ವೆಚ್ಚದ ನೂತನ ಕಟ್ಟಡ ನಿರ್ಮಾಣ
55 ಕೋ.ರೂ ವೆಚ್ಚದಲ್ಲಿ ನಿರ್ಮಾಣವಾಗಲಿ ರುವ ಸುರತ್ಕಲ್-ಎಂಆರ್‌ಪಿಎಲ್ ಷಟ್ಪಥ ರಸ್ತೆಯ ಮೊದಲ ಹಂತದ ಕಾಮಗಾರಿ.
ಒಂದು ಕೋ.ರೂ .ವೆಚ್ಚದಲ್ಲಿ ನಿರ್ಮಾಣವಾ ಗಲಿರುವ ಯು.ಶ್ರೀನಿವಾಸ ಮಲ್ಯ ಸ್ಮಾರಕ ಭವನದ ಮುಂದುವರಿದ ಕಾಮಗಾರಿ.
1.60 ಕೋ.ರೂ. ವೆಚ್ಚದ ಈಜುಕೊಳ ನಿರ್ಮಾಣ ಯೋಜನೆ







