ನಾಳೆಯಿಂದ ಹೆಲಿಕಾಪ್ಟರ್ ಜಾಲಿರೈಡ್ ಪುನರಾರಂಭ
ಉಡುಪಿ, ಎ.21: ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಉಡುಪಿ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಫೆಬ್ರವರಿ ತಿಂಗಳಲ್ಲಿ ಪ್ರಾರಂಭಗೊಂಡ -ಹೆಲಿಟೂರಿಸಂ- ಹೆಲಿಕಾಪ್ಟರ್ನಲ್ಲಿ ಜಾಲಿ ರೈಡ್ ಎ.23ರಿಂದ ಪುನರಾರಂಭಗೊಳ್ಳಲಿದೆ ಎಂದು ಪ್ರವಾಸ ಸಂಯೋಜಕ ಸುದೇಶ್ ಶೆಟ್ಟಿ ತಿಳಿಸಿದ್ದಾರೆ.
ಉಡುಪಿ ಮತ್ತು ಮಣಿಪಾಲ ಪರಿಸರದ ಪ್ರಾಕೃತಿಕ ಸೌಂದರ್ಯವನ್ನು ಮೇಲಿನಿಂದ ನೋಡುವ ಅಪೂರ್ವ ಅವಕಾಶ ಇದರಲ್ಲಿ ಲಭ್ಯವಾಗಲಿದೆ. ಸಮುದ್ರ, ನದಿ, ಬೀಚ್, ಬೃಹತ್ ಕಟ್ಟಡಗಳು, ರಸ್ತೆ, ನಗರದ ಪ್ರಮುಖ ಸ್ಥಳಗಳನ್ನು ಮೇಲಿನಿಂದ ನೋಡುವ ಅವಕಾಶ ಇದಾಗಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಎ.23 ಮತ್ತು 24ರಂದು ಹೆಲಿಕಾಪ್ಟರ್ ಜಾಲಿರೈಡ್ಗೆ ಅವಕಾಶವಿದೆ. ಬೆಳಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ, ಅಪರಾಹ್ನ 3:30ರಿಂದ 5:30ರವರೆಗೆ ಮಣಿಪಾಲ-ಉಡುಪಿ ನಗರದ ಸುತ್ತಲೂ ವೀಕ್ಷಣೆಗೆ ಅವಕಾಶವಿದೆ. ಆದಿ ಉಡುಪಿಯಲ್ಲಿರುವ ಎನ್ಸಿಸಿ ಮೈದಾನದಿಂದ ಹಾರಾಟ ಪ್ರಾರಂಭಗೊಂಡು ಅಲ್ಲೇ ಮುಕ್ತಾಯಗೊಳ್ಳಲಿದೆ. ಆಸಕ್ತರು ಸುದೇಶ್ ಶೆಟ್ಟಿಯವರನ್ನು (9880052711, 9742507270) ಸಂಪರ್ಕಿಸುವಂತೆ ಕೋರಲಾಗಿದೆ.