ಇರಾನ್ ಆಸ್ತಿಯನ್ನು ಅಮೆರಿಕನ್ ಸೈನಿಕರಿಗೆ ನೀಡಲು ಅಮೆರಿಕ ಸುಪ್ರೀಂ ಕೋರ್ಟ್ ತೀರ್ಪು

ವಾಷಿಂಗ್ಟನ್, ಎಪ್ರಿಲ್ 22: ಅಮೆರಿಕ ಸ್ತಂಭನಗೊಳಿಸಿದ 13,000 ಕೋಟಿಯ ಆಸ್ತಿಗಳು 1983ರಲ್ಲಿ ಬೈರೂತ್ ಸ್ಫೋಟದಲ್ಲಿ ಮೃತರಾದ ಅಮೆರಿಕನ್ ಸೈನಿಕರ ಕುಟುಂಬಗಳಿಗೆ ನೀಡಬೇಕೆಂದು ಅಮೆರಿಕನ್ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. 2014ರಲ್ಲಿ ನ್ಯೂಯಾರ್ಕ್ ಕೋರ್ಟ್ ತೀರ್ಪನ್ನು ಅನುಮೋದಿಸಿ ಬುಧವಾರ ಸುಪ್ರೀಂಕೋರ್ಟ್ ತೀರ್ಪು ನೀಡಿದೆ ಎಂದು ವರದಿಯಾಗಿದೆ.
1983ರಲ್ಲಿ ಹಿಸ್ಬುಲ್ಲಾ ನಡೆಸಿದ್ದ ದಾಳಿಯಲ್ಲಿ 241 ಅಮೆರಿಕನ್ ಸೈನಿಕರು ಹತರಾಗಿದ್ದರು. ಶಿಯಾ ಸಂಘನೆ ಹಿಸ್ಬುಲ್ಲಾ ಸೌಕರ್ಯಒದಗಿಸುತ್ತಿರುವುದು ಇರಾನ್ ಆಗಿದೆ ಎಂದು ಬಲಿಪಶುಗಳು ಆರೋಪಿಸಿದ್ದರು. 1996ರಲ್ಲಿ ಸೌದಿ ಅರೇಬಿಯದಲ್ಲಿ ಸಂಭವಿಸಿದ ಬಾಂಬ್ ಆಕ್ರಮಣದಲ್ಲಿ ಕೊಲ್ಲಲ್ಪಟ್ಟ ಸೈನಿಕರ ಸಂಬಂಧಿಕರಿಗೂ ನಷ್ಟ ಪರಿಹಾರ ನೀಡಬೇಕೆಂದು ಸೈನಿಕರ ಸಂಬಂಧಿಕರು ವಾದಿಸಿದ್ದರು.
ಸ್ತಂಭನಗೊಳಿಸಿದ ಆಸ್ತಿಗಳು ಕುಟುಂಬಗಳಿಗೆ ನೀಡಬೇಕೆಂಬ ಕಾನೂನನ್ನು ಅಮೆರಿಕನ್ ಕಾಂಗ್ರೆಸ್ 2012ರಲ್ಲಿ ಪಾಸು ಮಾಡಿತ್ತು. ತೀರ್ಪಿನಲ್ಲಿ ಸೈನಿಕರ ಬಂಧುಗಳು ಸಂತೋಷ ವ್ಯಕ್ತಪಡಿಸಿದ್ದಾರೆ. ಆದರೆ ಈವರೆಗೂ ತೀರ್ಪಿನ ಕುರಿತು ಪ್ರತಿಕ್ರಿಯೆ ವ್ಯಕ್ತಪಡಿಸಿಲ್ಲ ಎಂದು ವರದಿಯಾಗಿದೆ.





