ಬ್ರಿಟನ್:ಎಲಿಝಬೆತ್ ರಾಣಿಗೆ ತೊಂಬತ್ತನೆ ಹುಟ್ಟು ಹಬ್ಬ

ಕವೆಂಟ್ರಿ, ಎಪ್ರಿಲ್ 22: ಬ್ರಿಟಿಷ್ ಮಹಾರಾಣಿ ಎಲಿಝಬೆತ್‌ರಿಗೆ ತೊಂಬತ್ತು ವರ್ಷ. ಇಂಗ್ಲೆಂಡ್‌ನಾದ್ಯಂತ 90ವರ್ಷ ತುಂಬಿದ್ದರ ಆಚರಣೆಗಳು ನಡೆಯುತ್ತಿವೆ. ಹಳೆಯ ಪ್ರತಿಷ್ಠೆ ಇಂದಿಲ್ಲದಿದ್ದರೂ ಇಂದಿಗೂ ಬ್ರಿಟಿಷ್ ಜನತೆಗೆ ರಾಜಕುಟುಂಬದಲ್ಲಿ ಮಮತೆ ಇದೆ. ಆದ್ದರಿಂದ ರಾಜಕುಟುಂಬಕ್ಕೆ ಸಂಬಂಧಿಸಿದ ಯಾವುದೇ ವಿಷಯವೂ ಸುದ್ದಿಯಾಗುವುದು ಅಲ್ಲಿ ರೂಢಿ. ರಾಣಿ ಹುಟ್ಟುಹಬ್ಬ ಆಚರಿಸಲು ಸಿದ್ಧರಾದ್ದರಿಂದ ರಾಣಿಯ ವಿಶೇಷತೆಗಳನ್ನು ಹೆಕ್ಕಿ ತೆಗೆಯುವಲ್ಲಿ ಬ್ರಿಟಿಷ್ ಮಾಧ್ಯಮ ಲೋಕ ಬಿಝಿಯಾಗಿದೆ. ಈ ಸಾಲಿನಲ್ಲಿ ಜನಸಾಮಾನ್ಯರಿಗೆ ಗೊತ್ತಿಲ್ಲದ ಅನೇಕ ವಿಷಯಗಳನ್ನು ಅವು ಪ್ರಕಟಿಸುತ್ತಿವೆ. ರಾಣಿಯ ಜೀವನ ನಿಗೂಢವಲ್ಲ ಎಂದು ಮಾಧ್ಯಮಗಳು ಹೇಳುತ್ತವೆ ಆದರೆ ಈಗಲೂ ಕೆಲವು ವಿಷಯಗಳು ರಹಸ್ಯವಾಗಿಯೇ ಇವೆ.
ಅವರಿಗೆ ಬ್ಯಾಗ್ ಒಂದು ಅಲಂಕಾರ ಎಂಬುದಕ್ಕಿಂತ ಸಂದೇಶ ಹಸ್ತಾಂತರಿಸುವ ಪ್ರಧಾನ ಸಂಕೇತವಂತೆ. ಅವರ ಬಳಿ 200 ಬ್ಯಾಗ್‌ಗಳಿವೆ. ವಸ್ತ್ರಕ್ಕೆ ಸೂಕ್ತ ಬ್ಯಾಗ್‌ಗಳನ್ನು ಧರಿಸುವುದು ಅವರ ಅಭ್ಯಾಸ. ಬ್ಯಾಗ್‌ನಲ್ಲಿ ಅಂತಹ ರಹಸ್ಯವೇನೂ ಇಲ್ಲ ಆದರೆ ತನ್ನೊಂದಿಗಿರುವವರಿಗೆ ತನ್ನ ಮನಸ್ಸಿನಲ್ಲಿರುವುದು ಹೇಳಲು ರಾಣಿ ಬ್ಯಾಗ್‌ನ್ನು ಉಪಯೋಗಿಸುತ್ತಾರೆ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅಧಿಕೃತ ಸಮಯದಲ್ಲಿ ಬ್ಯಾಗ್ ಇಲ್ಲದೆ ಅವರಿರುವುದಿಲ್ಲ. ಕುಟುಂಬದೊಂದಿಗೆ ಸಮಯ ಕಳೆಯುವಾಗ ಈ ಬ್ಯಾಗ್ ಇರುವುದಿಲ್ಲ. ಬ್ಯಾಗ್‌ನಲ್ಲಿ ಕುಟುಂಬ ಫೋಟೊ, ಮಿಂಟ್ ಚಾಕ್ಲೆಟ್ ಇಂತಹವು ಬ್ಯಾಗ್‌ನಲ್ಲಿರುತ್ತವಂತೆ.
ಏನೂ ಗೊತ್ತಿಲ್ಲದ ಮರಿಮಕ್ಕಳಾದ ಜಾರ್ಜ್‌ಮತ್ತುಒಂದು ವರ್ಷವೂ ಆಗದ ಶೆರ್ಲೆಟ್ ಕೂಡಾ ರಾಣಿಯನ್ನು ನೋಡುವಾಗ ತಲೆ ಬಗ್ಗಿಸಿ ವಂದಿಸುತ್ತಾರಂತೆ. ತನ್ನ ನಾಲ್ಕನೆ ತಲೆಮಾರು ಇವರಾದರೂ ಹೆಚ್ಚು ಸಲಿಗೆ ನೀಡುವುದಿಲ್ಲ ಎಂದು ಅರಮನೆ ಮೂಲಗಳು ಹೇಳುತ್ತವೆ. ಬ್ರಿಟನ್‌ನ ಎಲ್ಲ ಪಾಸ್‌ಪೋರ್ಟ್‌ಗಳಲ್ಲಿ ರಾಣಿಯ ಹೆಸರಿವೆ. ರಾಣಿಗೆ ಪಾಸ್‌ಪೋರ್ಟ್ ಇಲ್ಲದೆ ತನಗೆ ಬೇಕಾದಲ್ಲಿಗೆ ಪ್ರಯಾಣಿಸಲು ಸಾಧ್ಯವಿದೆ. ಇಮಿಗ್ರೇಶನ್ ಇಲ್ಲ ಡ್ರೈವಿಂಗ್ ಲೈಸನ್ಸ್ ಬೇಕಿಲ್ಲ. ನಂಬರ್ ಪ್ಲೇಟ್ ಇಲ್ಲದ ಕಾರಿನಲ್ಲಿಯೂ ಅವರು ಪ್ರಯಾಣಿಸಲು ಅನುಮತಿಯಿದೆ.
ಇಂಗ್ಲಿಷ್ ಮತ್ತು ಫ್ರೆಂಚ್ ಭಾಷೆಯನ್ನು ಉತ್ತಮವಾಗಿ ರಾಣಿಮಾತಾಡುತ್ತಾರೆ. ಅಧಿಕೃತ ಭೇಟಿ ವೇಳೆ ತರ್ಜುಮೆ ಸಹಾಯಕರ ನೆರವಿಲ್ಲದೆ ರಾಣಿ ಸಂಬಾಷಣೆ ನಡೆಸಬಲ್ಲರು. ಎರಡನೆ ಜಾಗತಿಕ ಯುದ್ಧದ ಸಮಯದಲ್ಲಿಬ್ರಿಟಿಷ್ ಸೈನ್ಯದಲ್ಲಿಮೆಕ್ಯಾನಿಕ್ ಫುಲ್ ಟೈಂ ಕೆಲಸ ಮಾಡಿದ ಅನುಭವ ರಾಣಿಗಿದೆ. ಒಮ್ಮೆ ಅಂದು ಅವರ ಅಮ್ಮರಾಣಿ ಮತ್ತು ಅಪ್ಪ ರಾಜ ಬರುತ್ತಿದ್ದಾಗ ಎಲಿಝಬೆತ್ ಲಾರಿ ದುರಸ್ತಿ ಮಾಡುತ್ತಿದ್ದರು. ಅರಮನೆಯ ಸದಸ್ಯರಲ್ಲಿ ಟಯರ್ ಬದಲಿಸುವ ಸ್ಪಾರ್ಕಫ್ಲಗ್ ಬದಲಿಸಿಡುವುದು ತಿಳಿಯುವುದು ರಾಣಿಗೊಬ್ಬರಿಗೇ ಎಂಬ ತಮಾಶೆಯೂ ಪ್ರಚಲಿತದಲ್ಲಿದೆ.







