ಲಾಲುರ ಫೇಸ್‌ಬುಕ್ ಹ್ಯಾಕ್ ಮಾಡಿ ಅಕ್ಷೇಪಾರ್ಹ ಪೋಸ್ಟ್‌ಹಾಕಿದ ಆರೋಪಿ ಗೋಲೂ ಪೊಲೀಸರ ಬಲೆಗೆ

ಪಾಟ್ನಾ, ಎಪ್ರಿಲ್ 22: ಹ್ಯಾಕರ್‌ಗಳ ಕಾರುಬಾರು ಈಗ ಭಾರೀ ಜೋರಾಗಿದೆ. ಯಾವುದೆ ಸೆಲೆಬ್ರಿಟಿ, ರಾಜಕಾರಣಿಗಳು ಈ ಹ್ಯಾಕರ್‌ಗಳಿಂದ ಸುರಕ್ಷಿತವಾಗಿರಲು ಪ್ರಯತ್ನಿಸುತ್ತಾರೆ. ತಾಜಾ ಪ್ರಕರಣವೊಂದರಲ್ಲಿ ರಾಷ್ಟ್ರೀಯ ಜನತಾ ದಳದ ಮುಖಂಡ ಲಾಲು ಪ್ರಸಾದ್ ಯಾದವ್‌ರ ಫೇಸ್‌ಬುಕ್ ಎರಡು ಬಾರಿ ಹ್ಯಾಕ್ ಆಗಿದೆ. ಈ ಪ್ರಕರಣದಲ್ಲಿ ಪೊಲೀಸರು ಒಬ್ಬ ಇಂಜಿನಿಯರಿಂಗ್ ವಿದ್ಯಾರ್ಥಿ ದಿವ್ಯಾಂಶು ಕುಮಾರ್ ಯಾನೆ ಗೋಲೂನನ್ನು ಬಂಧಿಸಿದ್ದಾರೆ.
ಯುವಕನಿಂದ ಎರಡು ಮೊಬೈಲ್‌ನ್ನು ಪೊಲೀಸರು ವಶಪಡಿಸಿಕೊಂಡಿದ್ದು ಈ ಮೊಬೈಲ್‌ನ್ನು ಬಳಸಿ ಆತ ಲಾಲುರ ಫೇಸ್‌ಬುಕ್ ಅಕೌಂಟ್‌ನ್ನು ಹ್ಯಾಕ್ ಮಾಡಿದ್ದಾರೆ. ದಿವ್ಯಾಂಶು ಪಾಟ್ನಾ ಸಾಹಿಬ್ ಇಂಜಿನಿಯರಿಂಗ್ ಕಾಲೇಜ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಈ ಹುಡುಗನಿಗೆ ಕಂಪ್ಯೂಟರ್ ಆಪರೇಶನ್ ಮತ್ತು ಸೋಶಿಯಲ್ ನೆಟ್‌ವರ್ಕಿಂಗ್ ಸೈಟ್ಸ್‌ನ ಕುರಿತು ಬಹಳಷ್ಟು ಉತ್ತಮ ಜ್ಞಾನವಿದೆ. ಆರೋಪಿ ಮಾರ್ಚ್ 8 ಮತ್ತು 11ರಂದು ಲಾಲು ಪ್ರಸಾದ್ ಯಾದವ್‌ರ ಫೇಸ್‌ಬುಕ್ ಖಾತೆಯನ್ನು ಹ್ಯಾಕ್ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮಾತ್ರವಲ್ಲ ಆತ ಕೆಲವು ಅಕ್ಷೇಪಾರ್ಹ ಪೋಸ್ಟ್‌ಗಳನ್ನು ಹಾಕಿದ್ದ ಎಂದೂ ಪೊಲೀಸರು ತಿಳಿಸಿದ್ದಾರೆಂದು ವರದಿಯಾಗಿವೆ





