ರಿಯಾದ್ ನಿಂದ ಬಂದವನಲ್ಲಿ ಕೋಟಿ ಮೌಲ್ಯದ ಚಿನ್ನ !

ಕ್ಯಾಲಿಕಟ್ , ಎ. 22: ಇಲ್ಲಿನ ಕರಿಪುರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರಿಯಾದ್ ನಿಂದ ಬಂದ ಪ್ರಯಾಣಿಕ ನೊಬ್ಬನಿಂದ ಕಂದಾಯ ಬೇಹು ಅಧಿಕಾರಿಗಳು (Directorate of Revenue Intelligence) 98 ಲಕ್ಷ ರೂಪಾಯಿಯ ಚಿನ್ನದ ಬಾರ್ ಗಳನ್ನು ವಶ ಪಡಿಸಿಕೊಂಡಿದ್ದಾರೆ.
ಇತಿಹಾದ್ ಏರ್ ಲೈನ್ಸ್ ನ ವಿಮಾನದಲ್ಲಿ ರಿಯಾದ್ ನಿಂದ ಬಂದ ರಫೀಕ್ (32) ಎಂಬಾತನಿಂದ ತಲಾ 116.7 ಗ್ರಾಂ ತೂಕದ 28 ಚಿನ್ನದ ಬಾರ್ ಗಳನ್ನು ವಶಪಡಿಸಿ ಕೊಲ್ಲಲಾಗಿದೆ ಎಂದು ಬೇಹು ಅಧಿಕಾರಿ ಸಲೀಂ ತಿಳಿಸಿದ್ದಾರೆ.
ಆತನ ಲಗೇಜ್ ನಲ್ಲಿದ್ದ ಎಮರ್ಜೆನ್ಸಿ ದೀಪದ ಬ್ಯಾಟರಿ ಇರುವ ಜಾಗದಲ್ಲಿ ಚಿನ್ನವನ್ನು ಅಡಗಿಸಿಡ ಲಾಗಿತ್ತು. ಆತನನ್ನು ಕರೆದುಕೊಂಡು ಹೋಗಲು ವಿಮಾನ ನಿಲ್ದಾಣಕ್ಕೆ ಬಂದಿದ್ದ ಇಬ್ಬರನ್ನೂ ವಶಕ್ಕೆ ಪಡೆಯಲಾಗಿದ್ದು ಅವರ ಕಾರಿನಿಂದ ನಾಲ್ಕು ಲಕ್ಷ ರೂಪಾಯಿ ಸಿಕ್ಕಿದೆ.
Next Story





