ಕೊಹಿನೂರು ವಜ್ರ ತನ್ನದು ತನಗೆ ಅದನ್ನು ಕೊಡಿಸಿ ಎಂದು ಮೋದಿಗೆ ವಿನಂತಿಸಿದ ಬಾಬರ್ ವಂಶಸ್ಥ ಆಲಂಗೀರ್ ಬಖ್ತ್

ವಾರಣಾಸಿ, ಎಪ್ರಿಲ್ 22: ಕೊಹಿನೂರ್ ವಜ್ರಯಾರದ್ದು? ಈ ವಿಷಯದ ಕುರಿತು ಭಾರತಪಾಕಿಸ್ತಾನದ ನಡುವೇ ಜಂಗೀ ಕುಸ್ತಿ ನಡೆಯುತ್ತದೆ. ಹೀಗಿರುವಾಗಲೇ ಗುರುವಾರ ಮೊಗಲ್ ಬಾದಶಹಾ ಬಾಬರ್ ವಂಶಸ್ಥ ಮಿರ್ಜಾ ಆಲಂಗೀರ್ ಬಖ್ತ್ ಕೊಹಿನೂರ್ ವಜ್ರ ತಮ್ಮದೆಂದು ಹೇಳುತ್ತಾ ಹೊಸ ರಾಗವನ್ನು ಹಾಡಿದ್ದಾರೆ. ಕೊಹಿನೂರ್ ವಜ್ರದ ಕುರಿತು ತನ್ನ ಹಕ್ಕುವಾದವನ್ನು ಬಖ್ತ್ ಮಂಡಿಸಿದ್ದಾರೆಂದು ವರದಿಯಾಗಿದೆ.
ಕೊಹಿನೂರ್ ವಜ್ರವನ್ನು ಬ್ರಿಟಿಷರು ಬನಾರಸ್‌ಗೆ ಮರಳಿಸಬೇಕಾಗಿದೆ. ಯಾಕೆಂದರೆ ತಾನು ಮೊಗಲ್ ಮನೆತನದ ವಾರಸು ರೂಪದಲ್ಲಿ ಬನಾರಸ್‌ನಲ್ಲಿ ವಾಸಿಸುತ್ತಿದ್ದೇನೆ. ಕೊಹಿನೂರ್ ಮೊಗಲ್ ವಂಶದ ಗುರುತು ಎಂದು ಹೇಳಿದ ಆಲಂಗೀರ್ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಇದಕ್ಕಿಂತ ಮೊದಲು ಇವರ ತಾಯಿ ತೈಮೂರ್ ಬೇಗಮ್ ತಾಜ್‌ಮಹಲ್ ತಮ್ಮದೆಂದು ಹಕ್ಕುವಾದ ಮುಂದಿಟ್ಟು ಸುಪ್ರೀಂ ಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದ್ದರು.
ಗೋವಿಂದಪುರದಲ್ಲಿ ವಾಸಿಸುತ್ತಿರುವ ಆಲಂಗೀರ್ ಬಖ್ತ್ ಪ್ರಧಾನಿಗೆ ಬರೆದ ಪತ್ರದ ಜೊತೆಗೆ ಮೊಗಲ ವಂಶದ ಹದಿನೈದನೆ ಪೀಳಿಗೆ ಬ್ರಿಟಿಷ್ ಸರಕಾರದಿಂದ ಪ್ರಮಾಣಗೊಂಡ ವಂಶಾವಳಿಯನ್ನುಕೂಡಾ ಕಳುಹಿಸಿಕೊಟ್ಟಿದ್ದಾರೆ. ಮೊಗ್‌ಲ್ ವಂಶದ ದೇಶದಲ್ಲಿರುವ ಏಕೈಕ ವಾರಸುದಾರ ತಾನು ಮತ್ತು ಕೊಹಿನೂರ್ ನನ್ನ ಹಕ್ಕಾಗಿದೆ ಎಂದು ಪತ್ರದಲ್ಲಿ ಆಲಂಗೀರ್ ಬರೆದಿದ್ದಾರೆ. ಆಲಂಗೀರ್ ಪ್ರಧಾನಿಯೊಂದಿಗೆ ಮೊಗಲ್ ವಂಶಜರ ರೂಪದಲ್ಲಿ ತನ್ನ ಪೂರ್ವಜರು 220 ವರ್ಷದಿಂದ ಅಜ್ಞಾತ ಜೀವನ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಕೊಹಿನೂರ್ ಮಾತ್ರವಲ್ಲ ತಾಜ್‌ಮಹಲ್ ಕೂಡಾ ತನ್ನದೇ ಎಂದು ಆಲಂಗೀರ್ ಹೇಳಿದ್ದಾರೆ. ಇದಕ್ಕಾಗಿ ಸುಪ್ರೀಂ ಕೋರ್ಟ್‌ನಲ್ಲಿ ತನ್ನ ತಾಯಿ ತೈಮೂರ್ ಸುಲ್ತಾನಾ 2005ರಲ್ಲಿ ಮೊಕದ್ದಮೆ ದಾಖಲಿಸಿದ್ದರು. ತೈಮೂರ್ ಸುಲ್ತಾನಾ 2008ರಲ್ಲಿ ನಿಧನರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.







