ಪಿಯು ಪರೀಕ್ಷೆ: ಗಣಿತ ವಿಷಯಕ್ಕೆ 21 ರಿಯಾಯಿತಿ ಅಂಕಗಳು

ಬೆಂಗಳೂರು, ಎ. 22: ದ್ವಿತೀಯ ಪಿಯು ವಿದ್ಯಾರ್ಥಿಗಳ ಗಣಿತ ಪರೀಕ್ಷೆಯ ಪ್ರಶ್ನೆ ಸಂಖ್ಯೆ 3, 13, 16, 20, 24, 33, 45 ಮತ್ತು 49 ಬಿಗಳಿಗೆ ಉತ್ತರ ಸರಿ ಅಥವಾ ತಪ್ಪಾಗಿ ಬರೆದರೂ ಪೂರ್ಣ ಅಂಕಗಳನ್ನು ವಿದ್ಯಾರ್ಥಿಗಳು ಪಡೆಯಲಿದ್ದಾರೆ. ಅಲ್ಲದೆ ಗಣಿತ ಪತ್ರಿಕೆಗೆ 21 ರಿಯಾಯಿತಿ ಅಂಕಗಳನ್ನು ನೀಡಲು ಶಿಕ್ಷಣ ಇಲಾಖೆ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಗಣಿತ ಪರೀಕ್ಷೆಗೆ ಪಠ್ಯಕ್ರಮದಲ್ಲಿಲ್ಲದ ಪ್ರಶ್ನೆಗಳನ್ನು ಕೇಳಿದ್ದರಿಂದ ವಿದ್ಯಾರ್ಥಿಗಳಿಗೆ ರಿಯಾಯಿತಿ ಅಂಕಗಳನ್ನು ನೀಡಬೇಕೆಂದು ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರಿಗೆ ಬೇಡಿಕೆ ಸಲ್ಲಿಸಿದ್ದರಿಂದ ತಜ್ಞರ ಸಮಿತಿ ನೀಡಿದ ಶಿಫಾರಸಿನಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
Next Story





