ಅರುಣಾಚಲದ ತವಾಂಗ್‌ನಲ್ಲಿ ಮಣ್ಣಿನಡಿಗೆ ಬಿದ್ದು 15 ಮಂದಿ ಮೃತ್ಯು!

ತವಾಂಗ್, ಎಪ್ರಿಲ್ 22: ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ಮಣ್ಣುಜರಿದು ಹದಿನೈದು ಮಂದಿ ಮೃತರಾಗಿದ್ದಾರೆಂದು ವರದಿಯಾಗಿದೆ. ತವಾಂಗ್ ಜಿಲ್ಲೆಯ ಫಾಂಲ ಗ್ರಾಮದಲ್ಲಿ ಗುರುವಾರ ರಾತ್ರೆ ಈ ಘಟನೆ ನಡೆದಿದೆ ಎಂದು ವರದಿಗಳು ತಿಳಿಸಿವೆ.
ವೈಫೈ ಸ್ಟಾರ್ ಹೊಟೇಲ್‌ನ ಕಟ್ಟಡ ನಿರ್ಮಾಣಕ್ಕಾಗಿ ಹೊರರಾಜ್ಯಗಳಿಂದ ಬಂದ ಕಾರ್ಮಿಕರು ಅವಗಢದಲ್ಲಿ ಮೃತರಾದವರೆಂದು ತಿಳಿದು ಬಂದಿದೆ. ರಕ್ಷಣಾ ಕಾರ್ಯ ಮುಂದುವರಿಯುತ್ತಿದ್ದು ತವಾಂಗ್‌ನ ಬೇರೆ ಕಡೆಗಳಲ್ಲಿಯೂ ಭೂ ಕುಸಿತವಾಗಿತ್ತು ಎಂದು ವರದಿಯಾಗಿವೆ. ಪ್ರದೇಶದ ವಿದ್ಯತ್ ಸಂಪರ್ಕ ತಾರಮಾರಾಗಿದ್ದು ಮುಖ್ಯಮಂತ್ರಿ ಕಾಲಿಫುಲ್ ಡೆಪ್ಯುಟಿ ಕಮಿಶನರರಿಂದ ಘಟನೆಯ ಕುರಿತು ವರದಿ ನೀಡುವಂತೆ ಆದೇಶಿಸಿರುವುದಾಗಿ ವರದಿಗಳು ತಿಳಿಸಿವೆ.

Next Story





