ಹಿಂದಿ ಶಿಕ್ಷಕ್ ಟ್ರೈನಿಂಗ್ ಕೋರ್ಸ್‌ನ ಪರೀಕ್ಷೆ ಹಾಗೂ ಪ್ರವೇಶಕ್ಕಾಗಿ ಅರ್ಜಿ
ಮಂಗಳೂರುಎ.22: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷೆ ಮಂಡಳಿ, ಬೆಂಗಳೂರು ವತಿಯಿಂದ ಹಿಂದಿ ಶಿಕ್ಷಕ್ ಟ್ರೈನಿಂಗ್ ಕೋರ್ಸ್ ಪರೀಕ್ಷೆಯು ಮೇ 11 ರಿಂದ ಪ್ರಾರಂಭವಾಗಲಿದ್ದು, ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿ.ಯು.ಸಿ ಉತ್ತೀರ್ಣತೆಯೊಂದಿಗೆ ಹಿಂದಿ ರತ್ನ, ಪ್ರವೀಣ್, ವಿದ್ವಾನ್ ಪದವಿಯಲ್ಲಿ ಶೇ.50 ರಷ್ಟು ಉತ್ತೀರ್ಣತೆ ಹೊಂದಿದ್ದು, 18-40 ವರ್ಷ ವಯಸ್ಸಿನ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಪ್ರಾಂಶುಪಾಲರು, ಹಿಂದಿ ಶಿಕ್ಷಕ್ ಟ್ರೈನಿಂಗ್ ಕಾಲೇಜ್, ಹಿಂದಿ ಭವನ, ಜಿಲ್ಲಾ ಪಂಚಾಯತ್ ಕಛೇರಿ ಎದುರು, ಮಂಡ್ಯ, ದೂರವಾಣಿ ಸಂಖ್ಯೆ. 08232-226667/9448268114 ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.
Next Story





