ಕೋಟೆಬಾಗಿಲು ವೀರಮಾರುತಿ ದೇವಸ್ಥಾನದಲ್ಲಿ ಹನುಮ ಜಯಂತಿ ಆಚರಣೆ

ಮೂಡುಬಿದಿರೆ: ಶ್ರೀ ವೀರಮಾರುತಿ ದೇವಸ್ಥಾನನ ಕೋಟೆಬಾಗಿಲು ಇಲ್ಲಿ ಶುಕ್ರವಾರ ಹನುಮ ಜಯಂತಿ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಿತು.
ಎಡಪದವು ಕುದ್ರೆಬೆಟ್ಟು ಶ್ರೀ ಸುಬ್ರಹ್ಮಣ್ಯ ತಂತ್ರಿಗಳ ನೇತ್ರತ್ವದಲ್ಲಿ ಪೂರ್ವಾಹ್ನ ಗಂಟೆ 8ಕ್ಕೆ ಕ್ಷೇತ್ರದಲ್ಲಿ ಪವಮಾನ ಹೋಮ, ವೀರಮಾರುತಿಗೆ ಕಲಶಾಭಿಷೇಕ ನಡೆಯಿತು. ಮಧ್ಯಾಹ್ನ 12 ಗಂಟೆಗೆ ಕ್ಷೇತ್ರದ ಪ್ರಧಾನ ಅರ್ಚಕ ದತ್ತಾತ್ರೇಯ ಭಟ್ ಮಹಾಪೂಜೆ ನಡೆಸಿಕೊಟ್ಟರು. ಹನುಮಜಯಂತಿ ಪ್ರಯುಕ್ತ ನಡೆದ ವಿಶೇಷ ಪೂಜೆಯ ಸೇವಾಕರ್ತರಾದ ಮಂಗಳೂರಿನ ದೇವದಾಸ ಎಸ್. ಹೆಗ್ಡೆ ದಂಪತಿಯನ್ನು ದೇವಸ್ಥಾನದ ಪರವಾಗಿ ಸುಬ್ರಹ್ಮಣ್ಯ ತಂತ್ರಿಗಳು ಹಾಗೂ ಭಕ್ತಿಗಾನ ವೈಭವವನ್ನು ನಡೆಸಿಕೊಟ್ಟ ವಿದ್ವಾನ್ ಅನಂತರಾಮ್ ಹೊಳ್ಳ ಬಳಗದವರನ್ನು ಸದಾಶಿವ ಹೆಗ್ಡೆ ಮಂಗಳೂರು ಗೌರವಿಸಿದರು. ಸಂಜೆ ರಂಗಪೂಜೆ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ದೇವಸ್ಥಾನದ ಆಡಳಿತ ಮೊಕ್ತೇಸರ ದೇವೇಂದ್ರ ಹೆಗ್ಡೆ ಹಾಗೂ ಮೊಕ್ತೇಸರರು, ದ.ಕ ಜಿಲ್ಲಾ ಹೆಗ್ಗಡೆ ಸಮಾಜ ಸಂಘದ ಅಧ್ಯಕ್ಷ ಉದಯ ಕುಮಾರ್ ಹೆಗ್ಡೆ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.





