ಉದ್ಯಾವರ ಅರಸು ದೈವಗಳ ಸಾವಿರ ಜಮಾಅತ್ ಭೇಟಿ

ಮಂಜೇಶ್ವರ : ಉದ್ಯಾವರ ಅರಸು ದೈವಗಳ ವರ್ಷಾವಧಿ ಉತ್ಸವದ ಅಂಗವಾಗಿ ನಡೆಯುವ ಸಾವಿರ ಜಮಾಅತ್ ಭೇಟಿಯು ಶುಕ್ರವಾರ ನಡೆಯಿತು. ಉದ್ಯಾವರ ಮಾಡ ಅರಸು ಮಂಜೀಷ್ಣಾರ್ ಉತ್ಸವ ದ ಸಲುವಾಗಿ ಕಳೆದ 800 ವರ್ಷಗಳಿಂದ ಉದ್ಯಾವರ ಸಾವಿರ ಜಮಾಅತ್ ಗೆ ಅರಸು ದೈವಗಳು ಭೇಟಿ ನೀಡುವುದು ವಾಡಿಕೆಯಾಗಿದೆ. ಇದರಂತೆ ಚೆಂಡೆ ವಾಧ್ಯಗಳೊಂದಿಗೆ ಅರಸು ದೈವಗಳು , ಅರಸು ಕ್ಷೇತ್ರ ಸಮಿತಿ ಪದಾಧಿಕಾರಿಗಳು ಶುಕ್ರವಾರ ಜುಮ ನಮಾಝು ಮುಗಿಯುತ್ತಿದ್ದಂತೆ ಸಾವಿರ ಜಮಾಅತ್ ಗೆ ಭೇಟಿ ನೀಡಿದರು. ಇವರನ್ನು ಜಮಾಅತ್ ಪ್ರತಿನಿಧಿಗಳು ಸ್ವಾಗತಿಸಿದರು. ಉದ್ಯಾವರ ಮಾಡ ಅರಸು ಮಂಜೀಷ್ಣಾರ್ ಕ್ಷೇತ್ರದ ಉತ್ಸವವು ಮೇ 8 ರಿಂದ 11 ರ ತನಕ ನಡೆಯಲಿದೆ. ಇಲ್ಲಿನ ಉತ್ಸವದಲ್ಲಿ ಮುಸ್ಲಿಂ ಭಾಂದವರು ಭಾಗವಹಿಸುತ್ತಿದ್ದು ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿ ಎನ್ನಬಹುದು.
Next Story





