ಎತ್ತಿನ ಹೊಳೆ ಯೋಜನೆ ಜನಕ ಯಡ್ಯೂರಪ್ಪ ವಿರುದ್ಧವೂ ಹೋರಾಟಗಾರರು ಪ್ರತಿಭಟನೆ ನಡೆಸಲಿ: ಸಚಿವ ರಮಾನಾಥ ರೈ
ಮಂಗಳೂರು, ಎ.22: 2011ರ ಫೆ.24 ರಂದು ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತನ್ನ ಬಜೆಟ್ ನಲ್ಲಿ ನೇತ್ರಾವತಿ ತಿರುವನ್ನು ಘೋಷಿಸಿ ಬೆನ್ನುತಟ್ಟಿಕೊಂಡಿದ್ದರು. ಎತ್ತಿನ ಹೊಳೆ ಯೋಜನೆಯ ಜನಕ ಬಿ.ಎಸ್.ಯಡ್ಯೂರಪ್ಪ ದ.ಕ. ಜಿಲ್ಲೆಗೆ ಆಗಮಿಸುವ ಸಂದರ್ಭದಲ್ಲಿ ಖಾಲಿ ಕೊಡ, ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ಮಾಡುವುದು ಒಳ್ಳೆಯದು. ಆ ಮೂಲಕ ತಮ್ಮದ್ದು ರಾಜಕೀಯ ಪ್ರೇರಿತ ಹೋರಾಟ ಅಲ್ಲ ಎಂದು ಹೋರಾಟಗಾರರು ಸಾಬೀತುಪಡಿಸಲಿ ಎಂದು ಅರಣ್ಯ ಹಾಗೂ ಜಿಲ್ಲಾ ಉಸುತಿವಾರಿ ಸಚಿವ ಬಿ. ರಮಾನಾಥ ರೈ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Next Story





