ಲಂಡನ್, ಎ. 22: ಐರೋಪ್ಯ ಒಕ್ಕೂಟದಲ್ಲಿ ಉಳಿಯುವಂತೆ ಬ್ರಿಟನ್‌ಗೆ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಶುಕ್ರವಾರ ಭಾವಪೂರ್ಣ ಮನವಿ ಮಾಡಿದ್ದಾರೆ.
ಐರೋಪ್ಯ ಒಕ್ಕೂಟದ ಸದಸ್ಯತ್ವದಿಂದಾಗಿ ಜಗತ್ತಿನಲ್ಲಿ ಬ್ರಿಟನ್‌ನ ಪ್ರಭಾವ ಹೆಚ್ಚಿದೆ ಹಾಗೂ ಒಕ್ಕೂಟವೂ ಪ್ರಬಲಗೊಂಡಿದೆ ಎಂದು ಇಂಗ್ಲೆಂಡ್ ಭೇಟಿಗಾಗಿ ಇಲ್ಲಿಗೆ ಆಗಮಿಸಿದ ಅವರು ಅಭಿಪ್ರಾಯಪಟ್ಟರು.