Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ತಾಪಮಾನ ತಾಳದೆ ಕಾದ ಕಾವಲಿಯಾದ ಕರಾವಳಿ:...

ತಾಪಮಾನ ತಾಳದೆ ಕಾದ ಕಾವಲಿಯಾದ ಕರಾವಳಿ: ಸಮುದ್ರ, ನದಿ ಕಿನಾರೆಗೆ ಜನರ ದೌಡು

ಇಮ್ತಿಯಾಝ್ ಶಾ ತುಂಬೆಇಮ್ತಿಯಾಝ್ ಶಾ ತುಂಬೆ22 April 2016 11:54 PM IST
share
ತಾಪಮಾನ ತಾಳದೆ ಕಾದ ಕಾವಲಿಯಾದ ಕರಾವಳಿ: ಸಮುದ್ರ, ನದಿ ಕಿನಾರೆಗೆ ಜನರ ದೌಡು

ಬತ್ತಿಹೋಗುತ್ತಿರುವ ಜಲಮೂಲಗಳು: ಎಲ್ಲೆಲ್ಲೂ ಸೆಕೆಯದ್ದೇ ಸದ್ದು!

ಬಂಟ್ವಾಳ, ಎ.22: ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಿಸಿಲ ಝಳಕ್ಕೆ ಕರಾವಳಿ ಜಿಲ್ಲೆಗಳು ಕಾದ ಕಾವಲಿಯಂತಾಗಿದೆ. ಸೆಕೆಯಿಂದ ಒಂದಿಷ್ಟು ಪಾರಾಗಲು ಸಂಜೆಯಾಗುತ್ತಿದ್ದಂತೆ ಸಮುದ್ರ ಹಾಗೂ ನದಿ ಕಿನಾರೆಗೆ ಆಗಮಿಸುವವರ ಸಂಖ್ಯೆಯೂ ಹೆಚ್ಚುತ್ತಿದೆ. ನಗರ ಪ್ರದೇಶದ ಜನರು ಸಮುದ್ರ ಕಿನಾರೆಯತ್ತ ದೌಡಾಯಿಸಿದರೆ, ನದಿಬದಿ ಪ್ರದೇಶಗಳ ಜನರು ನದಿ ಕಿನಾರೆಗೆ ತೆರಳುತ್ತಿರುವ ದೃಶ್ಯ ಕಂಡುಬರುತ್ತಿವೆ. ಬೆಳಗ್ಗೆ 8 ಗಂಟೆಯಾಗುತ್ತಲೇ ಸುಡು ಬಿಸಿಲು ಆರಂಭ ವಾಗಿ ಮಧ್ಯಾಹ್ನವಂತೂ ಬಿಸಿಲ ಧಗೆಗೆ ಜನರು ಮನೆಯಿಂದ ಹೊರ ಹೋಗಲು ಹಿಂದೇಟು ಹಾಕುತ್ತಿದ್ದಾರೆ.

ಮಧ್ಯಾಹ್ನದ ಹೊತ್ತು ಫ್ಯಾನ್ ಹಾಕಿಯೂ ಮನೆ, ಕಚೇರಿಗಳಲ್ಲಿ ಕೂರಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿ ಜನರು ಚಡಪಡಿಸುವಂತಾಗಿದೆ. ಇನ್ನೊಂದೆಡೆ ಆಗಾಗ ಕೈಕೊಡುತ್ತಿರುವ ವಿದ್ಯುತ್‌ನಿಂದ ಜನರು ಇನ್ನಷ್ಟು ರೋಸಿ ಹೋಗುವಂತಾಗಿದೆ. ಕೂಲಿ, ಕಟ್ಟಡ ನಿರ್ಮಾಣ, ರಸ್ತೆ ಮೊದಲಾದ ಕೆಲಸ ನಿರ್ವಹಿ ಸುವ ಕಾರ್ಮಿಕರು ಬಿಸಿಲಿ ನಿಂದ ಬೆಂದು ಬೆಂಡಾಗಿದ್ದಾರೆ. ಬಿಸಿಲ ಧಗೆಗೆ ಮನೆಯಿಂದ ಹೊರ ಹೋಗುವುದೇ ಅಸಾಧ್ಯವಾಗಿ ದ್ದರೂ, ಕುಟುಂಬದ ನಿರ್ವಹಣೆಗಾಗಿ ಬಿಸಿಲಿಗೆ ಮೈಯೊಡ್ಡಿ ಕೆಲಸ ಮಾಡಲೇಬೇಕಾದ ಅನಿವಾರ್ಯತೆ, ಅಸಹಾಯಕತೆ ಬಡ ಕಾರ್ಮಿಕರದ್ದು. ಮನೆ, ಆಸ್ಪತ್ರೆಗಳಲ್ಲಿ ರೋಗಿಗಳ ಯಾತನೆ ಹೇಳತೀರದಂತಾಗಿದೆ.

ಈಗಾಗಲೇ ಕರಾವಳಿ ಜಿಲ್ಲೆಗಳಲ್ಲಿ 34 ಡಿಗ್ರಿ ಸೆಲ್ಸಿಯಸ್‌ಗೂ ಹೆಚ್ಚು ಉಷ್ಣಾಂಶ ದಾಖಲಾಗಿದ್ದು, ಸೆಕೆಯಿಂದಾಗಿ ಜನರು ಪರಿತಪಿಸುವಂತಾಗಿದೆ. ಮಳೆಗಾಗಿ ಎದುರು ನೋಡುತ್ತಿರುವ ಜನತೆ, ಬಿಸಿಲ ಧೆಗೆಯನ್ನು ಸಹಿಸಲಾಗದೆ ಸಂಜೆಯಾಗುತ್ತಿದ್ದಂತೆ ಸಮುದ್ರ, ನದಿ ಕಿನಾರೆಗೆ ದೌಡಾಯಿಸುತ್ತಿದ್ದಾರೆ. ಸುಮಾರು ಒಂದೆರಡು ಗಂಟೆಗಳ ಕಾಲ ಸಮುದ್ರ, ನದಿ ಕಿನಾರೆಯಲ್ಲಿ ತಂಗಾಳಿಗೆ ಮೈಯೊಡ್ಡಿ ಕಾಲ ಕಳೆಯುತ್ತಾರೆ. ಕೆಲವರು ಕುಟುಂಬ ಸಮೇತ ಆಗಮಿಸುತ್ತಿದ್ದಾರೆ. ಮಹಿಳೆಯರು, ಮಕ್ಕಳು ನೀರಿನಲ್ಲಿ ನಡೆಯುತ್ತಾ ವಿಹರಿಸುವ ದೃಶ್ಯಗಳು ಕಂಡು ಬರುತ್ತಿದೆ. ಜಿಲ್ಲೆಯ ನೇ್ರಾವತಿ ನದಿಬದಿಯ ಜನರು ಸಂಜೆಯಾಗುತ್ತಿದ್ದಂತೆ ನದಿ ಕಿನಾರೆಗೆ ಆಗಮಿಸಿ ವಿಹರಿಸುತ್ತಿದ್ದು, ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟವೂ ಕಡಿಮೆಯಾಗಿರುವುದು ಈಜಾಡಲು ಇನ್ನಷ್ಟು ಅನುಕೂಲವಾಗಿದೆ.

ಶಾಲಾ-ಕಾಲೇಜಿಗೆ ಬೇಸಿಗೆ ರಜೆ ಇರುವುದರಿಂದ ಮಕ್ಕಳು ಈಜಾಡಲು ಬೆಳಗ್ಗೆಯೇ ನದಿ ಕಿನಾರೆಗೆ ಆಗಮಿಸುತ್ತಿದ್ದಾರೆ. ಸಂಜೆ ಹೊತ್ತಿಗೆ ನದಿ ದಂಡೆಯಲ್ಲಿ ಬೀಸುವ ಗಾಳಿಯನ್ನು ಆಸ್ವಾದಿಸುವ ಜನರಿಗೆ ಇಡೀ ದಿನ ಅನುಭವಿಸಿದ ಸೆಕೆಯೇ ಮರೆತು ಹೋಗುತ್ತದೆ.

ವ್ಯಾಪಾರ ವಹಿವಾಟು ಜೋರು


ಬಿಸಿಲ ಝಳ ಹೆಚ್ಚಿದಂತೆ ಒಂದೆಡೆ ವ್ಯಾಪಾರ ವಹಿವಾಟು ಜೋರಾಗಿದೆ. ಸೆಕೆ ತಾಳಲಾಗದೆ ಜನರು ತಂಪು ಪಾನೀಯ, ಹಣ್ಣು ಹಂಪಲುಗಳ ಮೊರೆ ಹೋಗುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಗಳ ಬದಿಯಲ್ಲಿ ಜನರು ತಮ್ಮ ವಾಹನಗಳನ್ನು ನಿಲ್ಲಿಸಿ ತಂಪು ಪಾನೀಯ, ಕಬ್ಬು ರಸ, ಎಳನೀರು, ಹಣ್ಣು ಹಂಪಲುಗಳ ಜ್ಯೂಸ್ ಕುಡಿಯುವ ದೃಶ್ಯಗಳು ಅಲ್ಲಲ್ಲಿ ಕಾಣುತ್ತಿವೆ. ರಾಷ್ಟ್ರೀಯ ಹೆದ್ದಾರಿ ಬದಿಗಳಲ್ಲಿ ಲಘು ವಾಹನಗಳಲ್ಲಿ ಹಣ್ಣು ಹಂಪಲು ಮಾರಾಟವೂ ಜೋರಾಗಿ ನಡೆಯುತ್ತಿದೆ.

ಪ್ರವಾಸಿಗರು ಸೇರಿದಂತೆ ಪ್ರಯಾಣಿಕರು ಮುಗಿಬಿದ್ದು ಹಣ್ಣು ಹಂಪಲು ಖರೀದಿಸುತ್ತಿರುವ ದೃಶ್ಯಗಳು ಅಲ್ಲಲ್ಲಿ ಕಂಡು ಬರುತ್ತಿದೆ. ಇನ್ನೊಂದೆಡೆ ನೆತ್ತಿ ಸುಡುವ ಮಧ್ಯಾಹ್ನದ ಬಿಸಿಲಿಗೆ ಜನರು ನಡೆಯುವುದೇ ಕಷ್ಟಕರವಾಗಿ ಪರಿಣಮಿಸಿದ್ದು, ಸ್ವಂತ ವಾಹನವಿಲ್ಲದವರು ಒಂದಿಷ್ಟು ದೂರ ಹೋಗಲೂ ಆಟೊ ಗಳನ್ನು ಅವಲಂಬಿಸುತ್ತಿದ್ದಾರೆ. ಹೀಗಾಗಿ ಆಟೊ ಚಾಲಕರಿಗೆ ಸುಗ್ಗಿ ಕಾಲವಾಗಿದೆ.


ಸ್ವಚ್ಛತೆಗೆ ಆದ್ಯತೆ ನೀಡಬೇಕಿದೆ

ಸೆಕೆಯಿಂದ ಕಂಗಾಲಾಗಿರುವ ಜನರು ಒಂದಿಷ್ಟು ಮುಕ್ತಿ ಪಡೆಯಲೆಂದು ಸಂಜೆಯಾಗುತ್ತಿದ್ದಂತೆ ನದಿ ಕಿನಾರೆಗೆ ಆಗಮಿಸುವುದು ಸಾಮಾನ್ಯವಾಗಿದೆ. ಹೀಗೆ ಆಗಮಿಸುವ ಜನರು ತಂಪು ಪಾನೀಯ, ತಿಂಡಿ ತಿನಿಸುಗಳನ್ನು ಕೊಂಡೊಯ್ಯುತ್ತಾರೆ. ನದಿಬದಿಯಿಂದ ತೆರಳುವ ವೇಳೆ ಪ್ಲಾಸ್ಟಿಕ್ ಬಾಟ್ಲಿಗಳನ್ನು ಹಾಗೂ ತಿಂಡಿತಿನಿಸುಗಳ ಪೊಟ್ಟಣಗಳನ್ನು ನದಿಬದಿಯಲ್ಲಿ ಅಥವಾ ನೀರಿಗೆ ಎಸೆಯುತ್ತಾರೆ. ಇದು ಜಲಮಾಲಿನ್ಯಕ್ಕೆ ಕಾರಣವಾಗುತ್ತಿದೆ. ಆದ್ದರಿಂದ ನದಿಬದಿಗೆ ತೆರಳುವವರು ಸ್ವಚ್ಛತೆಗೆ ಆದ್ಯತೆ ನೀಡಬೇಕಿದೆ. -ಝಹೂರ್ ಅಹ್ಮದ್, ತುಂಬೆ ಗ್ರಾಪಂ ಸದಸ್ಯ

ಸುಳ್ಯ: ನೀರಿನ ಮಿತಬಳಕೆಗೆ ನಗರ ಪಂಚಾಯತ್ ಸೂಚನೆ
ಸುಳ್ಯ, ಎ.22: ಬಿಸಿಲ ಬೇಗೆಗೆ ನಾಡು ತತ್ತರಿಸಿದ್ದು, ಸುಳ್ಯ ತಾಲೂಕಿನಲ್ಲೂ ಜಲ ಕ್ಷಾಮ ತಲೆದೋರಿದೆ.
ಈ ಬಾರಿ ಮುಂಗಾರುಪೂರ್ವ ಮಳೆಯ ಕೊರತೆಯ ಕಾರಣ ತಾಲೂಕಿನೆಲ್ಲೆಡೆ ನೀರಿನ ಸಮಸ್ಯೆ ಎದುರಾಗಿದೆ. ಒಂದು ಮಳೆಯ ಹೊರತಾಗಿ ಇದುವರೆಗೆ ಭೂಮಿ ತಂಪಾಗಿಲ್ಲ. ಸೆಕೆ ತಡೆಯಲಾರದೆ ಜನ ಚಡಪಡಿಸುತ್ತಿದ್ದಾರೆ. ಹಳ್ಳ-ಕೊಳ್ಳಗಳೆಲ್ಲ ಬತ್ತಿ ಹೋಗಿದ್ದು, ಹಲವೆಡೆ ಬಾವಿಗಳೂ ಬತ್ತಿಹೋಗಿದೆ. ಬಹುತೇಕ ಕಡೆಗಳಲ್ಲಿ ನೀರಿಲ್ಲದೆ ಕೃಷಿ ತೋಟಗಳು ಒಣಗು ವಂತಾಗಿದೆ. ಪಯಸ್ವಿನಿ, ಕುಮಾರಧಾರಾ ನದಿಗಳೂ ಅಕ್ಷರಶಃ ಬತ್ತಿ ಹೋಗಿದೆ.
ಮುಂಜಾಗರೂಕತಾ ಕ್ರಮದ ಸಲುವಾಗಿ ಸುಳ್ಯ ನಗರದಲ್ಲಿ ನೀರನ್ನು ಮಿತವಾಗಿ ಬಳಸುವಂತೆ ನಪಂ ವತಿಯಿಂದ ಧ್ವನಿವರ್ಧಕದ ಮೂಲಕ ಪ್ರಚಾರ ಮಾಡಲಾಗುತ್ತಿದೆ.

share
ಇಮ್ತಿಯಾಝ್ ಶಾ ತುಂಬೆ
ಇಮ್ತಿಯಾಝ್ ಶಾ ತುಂಬೆ
Next Story
X