Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಮೆಡಿಕಲ್ ಕಾಲೇಜುಗಳಲ್ಲಿ ಗುಣಮಟ್ಟ ಕೊರತೆ

ಮೆಡಿಕಲ್ ಕಾಲೇಜುಗಳಲ್ಲಿ ಗುಣಮಟ್ಟ ಕೊರತೆ

ವಾರ್ತಾಭಾರತಿವಾರ್ತಾಭಾರತಿ22 April 2016 11:54 PM IST
share

ಭಾರತ ವೈದ್ಯರ ಕಾರಣದಿಂದ ಜಗದ್ವಿಖ್ಯಾತ. ವಿಶ್ವದ ಅತ್ಯುತ್ತಮ ವೈದ್ಯರನ್ನು ಭಾರತ ದೇಶೀಯ ಹಾಗೂ ದೇಶದ ಹೊರಗಿನ ಸಂಸ್ಥೆಗಳಲ್ಲಿ ರೂಪುಗೊಳಿಸಿದೆ. ವಿಶ್ವದ ಯಾವುದೇ ದೇಶಗಳಲ್ಲಿಲ್ಲದಷ್ಟು ವೈದ್ಯಕೀಯ ಕಾಲೇಜುಗಳು ಹಾಗೂ ಬೋಧನಾ ಆಸ್ಪತ್ರೆಗಳು ಭಾರತದಲ್ಲಿವೆ. ನಿಖರವಾಗಿ ಹೇಳಬೇಕೆಂದರೆ ದೇಶದಲ್ಲಿರುವ ವೈದ್ಯಕೀಯ ಶಿಕ್ಷಣ ಕಾಲೇಜುಗಳ ಸಂಖ್ಯೆ 579. ಆದರೆ ಇತ್ತೀಚಿನ ಹಲವು ಅಧ್ಯಯನಗಳು ಹಾಗೂ ವರದಿಗಳು ದೇಶದ ವಿಸ್ತತವಾದ ವೈದ್ಯಕೀಯ ಶಿಕ್ಷಣ ವ್ಯವಸ್ಥೆಯ ಗುಣಮಟ್ಟ ಹಾಗೂ ನೈತಿಕತೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಅಂಥ ಇತ್ತೀಚಿನ ವರದಿಯೊಂದರ ಪ್ರಕಾರ 579 ಕಾಲೇಜುಗಳ ಪೈಕಿ ಅರ್ಧದಷ್ಟು ವೈದ್ಯಕೀಯ ಶಿಕ್ಷಣ ಕಾಲೇಜುಗಳು ಕಳೆದ ಒಂದು ದಶಕದಲ್ಲಿ (2005-2014) ಮೌಲಿಕ ಎನ್ನುವಂಥ ಒಂದು ಸಂಶೋಧನಾ ಪ್ರಬಂಧಗಳನ್ನೂ ಪ್ರಕಟಿಸಿಲ್ಲ ಹಾಗೂ ಭಾರತದಲ್ಲಿ ಸಿದ್ಧವಾದ ಮೌಲಿಕ ಸಂಶೋಧನಾ ಪ್ರಬಂಧಗಳಲ್ಲಿ ಅರ್ಧದಷ್ಟು ಕೇವಲ 25 ಸಂಸ್ಥೆಗಳಿಂದಲೇ ಬಂದಿವೆ.
ಸಂಶೋಧನಾ ಪ್ರಬಂಧಗಳನ್ನು ಸಿದ್ಧಪಡಿಸುವುದು, ಆ ಸಂಸ್ಥೆಯ ಶಿಕ್ಷಣದ ಗುಣಮಟ್ಟದ ಅಥವಾ ಅಲ್ಲಿ ಒದಗಿಸುವ ವೈದ್ಯಕೀಯ ಸೇವೆಗಳ ಗುಣಮಟ್ಟದ ಸೂಚಕವಲ್ಲ ಎನ್ನುವುದು ನಿರ್ವಿವಾದ. ಆದರೆ ಇಂಥ ಒಂದು ಅಧ್ಯಯನ ನಡೆಸಿದ ದಿಲ್ಲಿ ಮೂಲದ ಹಿರಿಯ ಕರುಳು ಶಸ್ತ್ರಚಿಕಿತ್ಸಾ ತಜ್ಞ ಸಮೀರನ್ ನಂದಿ ಹೇಳುವಂತೆ, ‘‘ದೇಶದಲ್ಲಿ ಹಲವು ಖಾಸಗಿ ಕಾಲೇಜುಗಳು ವೈದ್ಯಕೀಯ ಶಿಕ್ಷಣವನ್ನು ವ್ಯಾಪಾರವಾಗಿ ಮಾಡಿಕೊಂಡಿವೆಯೇ ಎಂಬ ಸಂಶಯಕ್ಕೆ ಈ ಅಧ್ಯಯನ ವರದಿ ಪುಷ್ಟಿ ನೀಡಿದೆ’’. ಇಂಥ ಒಂದು ಸಂದೇಹ ಇತರ ತನಿಖೆಗಳಿಗೂ ಒತ್ತು ನೀಡುತ್ತದೆ. ರಾಯ್ಟರ್ಸ್‌ ಸುದ್ದಿಸಂಸ್ಥೆ ನಾಲ್ಕು ತಿಂಗಳ ಕಾಲ ನಡೆಸಿದ ತನಿಖೆಯಿಂದ ಬಹಿರಂಗವಾಗಿರುವ ಅಂಶವೆಂದರೆ, ‘‘2010ರ ಬಳಿಕ ಭಾರತದ ಕನಿಷ್ಠ 69 ವೈದ್ಯಕೀಯ ಶಿಕ್ಷಣ ಕಾಲೇಜುಗಳು ಹಾಗೂ ಬೋಧನಾ ಆಸ್ಪತ್ರೆಗಳು ನಿಯಮಗಳ ಉಲ್ಲಂಘನೆ ಅಥವಾ ನಿಯಮಗಳನ್ನು ಅನುಸರಿಸುವಲ್ಲಿ ವಿಫಲವಾಗಿರುವುದು’’ ಬಹಿರಂಗವಾಗಿದೆ. ಪ್ರವೇಶ ಪರೀಕ್ಷೆಯಲ್ಲಿ ರಿಗ್ಗಿಂಗ್, ವಿದ್ಯಾರ್ಥಿಗಳ ಪ್ರವೇಶಕ್ಕೆ ಲಂಚ ಪಡೆಯುವುದು ಕೂಡಾ ತನಿಖೆ ವೇಳೆ ಬಯಲಾಗಿದೆ. ದೇಶದ ವೈದ್ಯಕೀಯ ಶಿಕ್ಷಣ ಕಾಲೇಜುಗಳ ಪೈಕಿ ಪ್ರತಿ ಆರರಲ್ಲಿ ಒಂದು ಕಾಲೇಜುಗಳ ವಿರುದ್ಧ ವಂಚನೆ ಆರೋಪಗಳಿವೆ ಎನ್ನುವುದು ಭಾರತ ಸರಕಾರದ ದಾಖಲೆಗಳು ಹಾಗೂ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳಿಂದ ತಿಳಿದುಬರುತ್ತದೆ.
ವಿಶ್ವದಲ್ಲೇ ಅತಿದೊಡ್ಡ ಆರೋಗ್ಯ ಹೊರೆಯನ್ನು ಹೊಂದಿರುವ ಭಾರತದಂಥ ದೇಶದಲ್ಲಿ, ಚಿಕಿತ್ಸೆ ನೀಡಬಹುದಾದ ಕಾಯಿಲೆಗಳಾದ ಅತಿಸಾರ, ಕ್ಷಯ ಹಾಗೂ ನ್ಯುಮೋನಿಯಾದಿಂದ ಜನ ಸಾವಿಗೀಡಾಗುವ ಪ್ರಮಾಣವೂ ಅತ್ಯಧಿಕವಾಗಿದ್ದು, ಇಂಥ ಪರಿಸ್ಥಿತಿಯಲ್ಲಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಲಂಚಾವತಾರ ತಾಂಡವವಾಡುತ್ತಿರುವುದು ತೀರಾ ಗಂಭೀರ ವಿಚಾರ. ಭಾರತೀಯ ವೈದ್ಯಕೀಯ ಸಂಘದ ಅಂದಾಜಿನ ಪ್ರಕಾರ, ದೇಶದಲ್ಲಿ ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿರುವ ಕನಿಷ್ಠ ಅರ್ಧದಷ್ಟು ಮಂದಿಗೆ ಔಪಚಾರಿಕ ತರಬೇತಿ ಇಲ್ಲ. ಬಹುತೇಕ ಮಂದಿ ತಮಗೆ ಪದವಿ ಇದೆ ಎಂದು ಹೇಳಿಕೊಳ್ಳುತ್ತಿದ್ದರೂ ವಾಸ್ತವವಾಗಿ ಅವರಿಗೆ ಶೈಕ್ಷಣಿಕ ಅರ್ಹತೆ ಇಲ್ಲ.
ಬಲವಂತ್ ಅರೋರಾ ಎಂಬವರ ವಿರುದ್ಧ 2011ರಲ್ಲಿ ದಾಖಲಾಗಿರುವ ಪ್ರಕರಣವು ದೊಡ್ಡ ಮಟ್ಟದ ವಂಚನೆಯ ಸುಳಿವನ್ನು ನೀಡುತ್ತದೆ. ಅರೋರಾ ಸುಮಾರು 50 ಸಾವಿರ ಮಂದಿಗೆ ನಕಲಿ ವೈದ್ಯಕೀಯ ಪ್ರಮಾಣ ಪತ್ರ ನೀಡಿದ್ದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಕೇವಲ 5 ಸಾವಿರ ರೂಪಾಯಿಗೆ ಒಂದರಂತೆ ಮನೆಯಿಂದಲೇ ಇದನ್ನು ವಿತರಿಸಿದ್ದಾಗಿ ಒಪ್ಪಿಕೊಂಡಿದ್ದಾರೆ. ಎಲ್ಲರಿಗೂ ಸ್ವಲ್ಪಮಟ್ಟಿನ ವೈದ್ಯಕೀಯ ಅನುಭವ ಇದೆ. ನಾನು ಈ ದೇಶಕ್ಕೆ ಸೇವೆ ಮಾಡುತ್ತಿದ್ದೇನೆ. ಭಾರತಕ್ಕೆ ವಾಸ್ತವವಾಗಿ ಅಧಿಕ ವೈದ್ಯರ ಅಗತ್ಯತೆ ಇದೆ ಎನ್ನುವುದು ಅವರ ಸಮರ್ಥನೆ. ಇಂಥದ್ದೇ ಅಪರಾಧಕ್ಕೆ 2010ರಲ್ಲಿ ಅವರು ನಾಲ್ಕು ತಿಂಗಳ ಜೈಲುವಾಸ ಅನುಭವಿಸಿದ್ದರು.
ಭಾರತದಲ್ಲಿ ಖಾಸಗಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಕ್ಷಿಪ್ರವಾಗಿ ತಲೆ ಎತ್ತುತ್ತಿವೆ. 1980ರ ಸುಮಾರಿಗೆ ದೇಶದಲ್ಲಿ 100 ಸರಕಾರಿ ಕಾಲೇಜುಗಳು ಹಾಗೂ 11 ಖಾಸಗಿ ಕಾಲೇಜುಗಳಿದ್ದವು. ಇದೀಗ ಸರಕಾರಿ ಕಾಲೇಜುಗಳ ಸಂಖ್ಯೆ 215ಕ್ಕೆ ಹೆಚ್ಚಿದ್ದರೆ, ಖಾಸಗಿ ಕಾಲೇಜುಗಳು 183 ಇವೆ. ಇದರಲ್ಲಿ ಬಹುತೇಕ ಕಾಲೇಜುಗಳು ಉದ್ಯಮಿಗಳಿಗೆ ಸೇರಿದ್ದಾಗಿದ್ದು, ಯಾವ ವೈದ್ಯಕೀಯ ಅನುಭವವೂ ಅವರಿಗೆ ಇಲ್ಲ. ಕಳೆದ ಜನವರಿಯಲ್ಲಿ ಬ್ರಿಟಿಷ್ ಮೆಡಿಕಲ್ ಜರ್ನಲ್ ಕಂಡುಕೊಂಡಂತೆ, ಬಹುತೇಕ ಎಲ್ಲ ಖಾಸಗಿ ವೈದ್ಯಕೀಯ ಕಾಲೇಜುಗಳು ಕ್ಯಾಪಿಟೇಷನ್ ಶುಲ್ಕ ವಿಧಿಸುತ್ತವೆ. ಇಲ್ಲಿ ಪ್ರವೇಶ ಪಡೆಯಲು ಕಡ್ಡಾಯವಾಗಿ ಈ ದೇಣಿಗೆ ನೀಡಲೇಬೇಕಾಗಿದೆ. ಈ ವರದಿಯನ್ನು ಸಿದ್ಧಪಡಿಸಿದ್ದ ಜೀತಾ ಡಿಸಿಲ್ವಾ ಹೇಳುವಂತೆ, ‘‘ದೇಶದ ಅತ್ಯುನ್ನತ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಿಗೆ ಕೆಲವು ಮಂದಿ ಪ್ರತಿಭೆಗೆ ಅನುಗುಣವಾಗಿ ಸೇರ್ಪಡೆಯಾಗುವುದನ್ನು ಹೊರತುಪಡಿಸಿದರೆ, ಹಲವು ಮಂದಿ ವಿದ್ಯಾರ್ಥಿಗಳು ಪ್ರವೇಶ ಪಡೆಯಲು ದುಬಾರಿ ಕ್ಯಾಪಿಟೇಶನ್ ಶುಲ್ಕ ಭರಿಸಬೇಕು ಅಥವಾ ವೈದ್ಯಕೀಯ ಪದವಿ ಪಡೆಯುವ ಕನಸು ಬಿಟ್ಟುಬಿಡಬೇಕು’’.
ಬಹುತೇಕ ಉತ್ತಮ ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶಾವಕಾಶ ತೀರಾ ಕಡಿಮೆ. ಈ ಕಾಲೇಜುಗಳಿಂದ ಅತ್ಯಧಿಕ ಸಂಶೋಧನಾ ಪ್ರಬಂಧಗಳು ಕೂಡಾ ಹೊರಬರುತ್ತಿವೆ. ಇವು ನಿರ್ವಹಿಸುವ ರೋಗಿಗಳ ಸಂಖ್ಯೆ ಕೂಡಾ ಅತ್ಯಧಿಕ. ಇದರಿಂದಾಗಿ ಖಾಸಗಿ ಕಾಲೇಜು ಆಸ್ಪತ್ರೆಗಳಿಗೆ ಅತ್ಯಧಿಕ ರೋಗಿಗಳ ಒತ್ತಡ ಇರುವುದರಿಂದ ಮೌಲಿಕವಾದ ಸಂಶೋಧನಾ ಪ್ರಬಂಧಗಳನ್ನು ಸಿದ್ಧಪಡಿಸಲು ಸಾಧ್ಯವಾಗುತ್ತಿಲ್ಲ ಎನ್ನುವ ನೆಪ ಹೇಳಲು ಕೂಡಾ ಅವಕಾಶ ಇಲ್ಲ.
ಭಾರತದಲ್ಲಿ ಅತ್ಯಧಿಕ ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸುವ ಸಂಸ್ಥೆ ಎಂದರೆ ಸರಕಾರಿ ಸ್ವಾಮ್ಯದ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಥವಾ ಎಐಐಎಂಎಸ್. ಸಿಮಿರಾನ್ ನಂದಿ ಮತ್ತು ಸಹೋದ್ಯೋಗಿಗಳು ಅಧ್ಯಯನ ನಡೆಸಿದ ಹತ್ತು ವರ್ಷಗಳ ಅವಧಿಯಲ್ಲಿ ಎಐಐಎಂಎಸ್ 11,300 ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದೆ. ಇದು ಮೆಸೆಚುಸೆಟ್ಸ್ ಜನರಲ್ ಹಾಸ್ಪಿಟಲ್ ಈ ಅವಧಿಯಲ್ಲಿ ಪ್ರಕಟಿಸಿದ ಸಂಶೋಧನಾ ಪ್ರಬಂಧಗಳ ನಾಲ್ಕನೆ ಒಂದರಷ್ಟು.
(ಕೃಪೆ: ದಿ ವಾಷಿಂಗ್ಟನ್ ಪೋಸ್ಟ್)


ಬಹುತೇಕ ಉತ್ತಮ ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶಾವಕಾಶ ತೀರಾ ಕಡಿಮೆ. ಈ ಕಾಲೇಜುಗಳಿಂದ ಅತ್ಯಧಿಕ ಸಂಶೋಧನಾ ಪ್ರಬಂಧಗಳು ಕೂಡಾ ಹೊರಬರುತ್ತಿವೆ. ಇವು ನಿರ್ವಹಿಸುವ ರೋಗಿಗಳ ಸಂಖ್ಯೆ ಕೂಡಾ ಅತ್ಯಧಿಕ. ಇದರಿಂದಾಗಿ ಖಾಸಗಿ ಕಾಲೇಜು ಆಸ್ಪತ್ರೆಗಳಿಗೆ ಅತ್ಯಧಿಕ ರೋಗಿಗಳ ಒತ್ತಡ ಇರುವುದರಿಂದ ಮೌಲಿಕವಾದ ಸಂಶೋಧನಾ ಪ್ರಬಂಧಗಳನ್ನು ಸಿದ್ಧಪಡಿಸಲು ಸಾಧ್ಯವಾಗುತ್ತಿಲ್ಲ ಎನ್ನುವ ನೆಪ ಹೇಳಲು ಕೂಡಾ ಅವಕಾಶ ಇಲ್ಲ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X