ಲಾರಿಯಡಿಗೆ ಸಿಲುಕಿದ ರಿಕ್ಷಾ: ಚಾಲಕನಿಗೆ ಗಾಯ

ಮಂಜೇಶ್ವರ, ಎ.22: ಎದುರಿನಲ್ಲಿ ಚಲಿ ಸುತ್ತಿದ್ದ ಲಾರಿಯ ಚಾಲಕ ದಿಢೀರ್ ಬ್ರೇಕ್ ಹಾಕಿದ ಪರಿಣಾಮ ಹಿಂದಿನಿಂದ ಬರುತ್ತಿದ್ದ ಆಟೊ ರಿಕ್ಷಾವೊಂದು ನಿಯಂ ತ್ರಣ ತಪ್ಪಿಲಾರಿಯಡಿಗೆ ನುಗ್ಗಿದ ಘಟನೆ ಮಂಜೇಶ್ವರ ಗೋವಿಂದ ಪೈ ಕಾಲೇಜು ಸಮೀಪ ಶುಕ್ರವಾರ ಬೆಳಗ್ಗೆ ಸಂಭವಿಸಿದೆ.
ಘಟನೆಯಲ್ಲಿ ಗಾಯಗೊಂಡ ರಿಕ್ಷಾ ಚಾಲಕ ಮಂಜೇಶ್ವರ ಪಾಂಡ್ಯಾಲ್ ನಿವಾಸಿ ಮುನ್ನಾ (25) ಎಂಬವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಎದುರಿನಿಂದ ಅತೀ ವೇಗವಾಗಿ ಆಗ ಮಿಸಿದ ಬೈಕ್‌ಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಲಾರಿ ಚಾಲಕ ದಿಢೀರ್ ಬ್ರೇಕ್ ಹಾಕಿದಾಗ ಅವಘಡ ಸಂಭ ವಿಸಿದೆ. ಆಟೊ ರಿಕ್ಷಾದಲ್ಲಿದ್ದ ಪ್ರಯಾ ಣಿಕರು ಅಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದ ಆಟೊ ರಿಕ್ಷಾದ ಮುಂಭಾಗ ಹಾನಿಗೀಡಾಗಿದೆ.
Next Story





