ಏಷ್ಯನ್ ಸ್ನೂಕರ್ ಚಾಂಪಿಯನ್‌ಶಿಪ್:ಪಂಕಜ್ ಅಡ್ವಾಣಿ ಸೆಮಿ ಫೈನಲ್‌ಗೆ
ಕತರ್, ಎ.22: ಏಷ್ಯನ್ ಸ್ನೂಕರ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಸ್ನೂಕರ್ ಪಂಕಜ್ ಅಡ್ವಾಣಿ ಸೆಮಿ ಫೈನಲ್‌ಗೆ ತಲುಪಿದ್ದಾರೆ.
ದೋಹಾದಲ್ಲಿ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ ಸಿರಿಯಾದ ಆಟಗಾರ ಕರಮ್ ಫಾತಿಮಾರನ್ನು ಐದು ಫ್ರೇಮ್‌ಗಳ ಅಂತರದಿಂದ ಮಣಿಸಿರುವ ಅಡ್ವಾಣಿ ಅಂತಿಮ ನಾಲ್ಕರ ಹಂತವನ್ನು ತಲುಪಿದ್ದಾರೆ.
ಇದಕ್ಕೆ ಮೊದಲು ನಡೆದಿದ್ದ ಅಂತಿಮ 16ರ ಪಂದ್ಯದಲ್ಲಿ ಅಡ್ವಾಣಿ ಸಹ ಆಟಗಾರ ಐಶ್‌ಪ್ರೀತ್ ಚಾಢಾ ವಿರುದ್ಧ ವೀರೋಚಿತ ಗೆಲುವು ಸಾಧಿಸಿದರು. ಅತ್ಯಂತ ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ ಅಡ್ವಾಣಿ ಒಂದು ಹಂತದಲ್ಲಿ 3-1 ಅಂತರದಿಂದ ಮುನ್ನಡೆಯಲ್ಲಿದ್ದರು.
ಇದಕ್ಕೆ ಉತ್ತರವಾಗಿ ಐಶ್‌ಪ್ರೀತ್ 2 ಫ್ರೇಮ್‌ಗಳ ಮುನ್ನಡೆ ಸಾಧಿಸಿ ಪಂದ್ಯವನ್ನು ನಿರ್ಣಾಯಕ ಹಂತಕ್ಕೆ ತಲುಪಿಸಿದರು. ನಿರ್ಣಾಯಕ ಹಂತದಲ್ಲಿ ಸ್ಪರ್ಧೆ ಎದುರಿಸಿದ್ದ ಅಡ್ವಾಣಿ ಅಂತಿಮವಾಗಿ 66-43 ಅಂತರದಿಂದ ಗೆಲುವು ಸಾಧಿಸಿದರು.
ಅಡ್ವಾಣಿ ಸೆಮಿ ಫೈನಲ್‌ನಲ್ಲಿ ಥಾಯ್ಲೆಂಡ್‌ನ ಕ್ರಿಟ್‌ಸನಟ್‌ರನ್ನು ಎದುರಿಸಲಿದ್ದಾರೆ.
Next Story





