ಅಸಾರಾಂ ಬಾಪು ಅಕ್ರಮ ಆಸ್ತಿ ಮೌಲ್ಯ 2500 ಕೋಟಿ !
ಖಾವಿಯ ಹಿಂದೆ ಪತ್ತೆಯಾದ ಸಂಪತ್ತಿನ ಬೃಹತ್ ಸಾಮ್ರಾಜ್ಯ

ಸೂರತ್, ಎ. 23: ವಿವಾದಾತ್ಮಕ ದೇವಮಾನವ ಅಸಾರಾಂ ಬಾಪು ಹಾಗೂ ಅವರ ಪುತ್ರ ನಾರಾಯಣ ಸಾಯಿ ಅವರಿಗೆ ಸಂಬಂಧಿಸಿದ 2500 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಆಸ್ತಿಯನ್ನು ಬಯಲಿಗೆಳೆಯುವಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಅಸಾರಾಂ ಆಶ್ರಮದಿಂದ ಕಳೆದ ವರ್ಷ ವಶಪಡಿಸಿಕೊಂಡಿದ್ದ 42 ಬ್ಯಾಗ್ ದಾಖಲೆಗಳನ್ನು ಪರಿಶೀಲಿಸಿದಾಗ ಈ ಮಹತ್ವದ ಅಂಶ ಬೆಳಕಿಗೆ ಬಂದಿದೆ. ಈ ದಾಖಲೆಗಳಲ್ಲಿ ಭೂ ದಾಖಲೆಗಳು, ಸಿಡಿ, ಸಿಪಿಯು, ಹಾರ್ಡ್ ಡಿಸ್ಕ್, ಹೂಡಿಕೆಗೆ ಸಂಬಂಧಿಸಿದ ಇತರ ದಾಖಲೆಗಳು, ಬ್ಯಾಂಕ್ ಠೇವಣಿ, ಷೇರು ಹಾಗೂ ರಿಯಲ್ ಎಸ್ಟೇಟ್ ದಾಖಲೆ ಪತ್ರಗಳು ಲಭ್ಯವಾಗಿವೆ.
ಈ ಅಪ್ಪ-ಮಗನ ಕಳ್ಳ ವ್ಯವಹಾರದ ವಿವರಗಳನ್ನು ಅಹ್ಮದಾಬಾದ್‌ನ ಹಿರಿಯ ಅಧಿಕಾರಿಗಳಿಗೆ ತಲುಪಿಸಲಾಗಿದ್ದು, ಈ ತೆರಿಗೆಗಳ್ಳತನ ವ್ಯವಹಾರದ ಮೇಲೆ ಸುಮಾರು 750 ಕೋಟಿ ರೂಪಾಯಿ ತೆರಿಗೆ ವಿಧಿಸಬಹುದಾಗಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.
Next Story





