ತಾನು ಪ್ರೀತಿಸುತ್ತಿದ್ದ ಎನ್ನಾರೈ ಯುವಕನ ಮದುವೆಯಾಗಲು ಕಾನ್‌ಸ್ಟೇಬಲ್ ಪತಿಯನ್ನು ಸುಪಾರಿ ಹಂತಕರ ಮೂಲಕ ಮುಗಿಸಿದ ಪತ್ನಿ

ಚಂಡೀಗಢ, ಎ. 23: ಸಾಮಾಜಿಕ ತಾಣದ ಮೂಲಕ ಪರಿಚಯವಾದ ಅನಿವಾಸಿ ಭಾರತೀಯ ಯುವಕನೊಬ್ಬನನ್ನು ಪ್ರೀತಿಸಿ ಆತನನ್ನು ವಿವಾಹವಾಗ ಬಯಸಿದ್ದ ಪಂಜಾಬಿನ ಪೊಲೀಸ್ ಕಾನ್‌ಸ್ಟೇಬಲ್ ಓರ್ವನ ಪತ್ನಿ ಸುಪಾರಿ ಹಂತಕರಿಗೆ ರೂ. 5 ಲಕ್ಷ ನೀಡಿ ತನ್ನ ಪತಿಯ ಹತ್ಯೆ ಮಾಡಿಸಿದ ಅಘಾತಕಾರಿ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ. ಎಲ್ಲ ನಾಲ್ಕು ಮಂದಿ ಆರೋಪಿಗಳನ್ನೂ ಪೊಲೀಸರು ಬಂಧಿಸಿದ್ದಾರೆ.
ಹತ್ಯೆಗೀಡಾದ ಕಾನ್‌ಸ್ಟೇಬಲ್ ಜಸ್ವೀರ್ ಸಿಂಗ್ ನ ಕೊಳೆತು ಹೋದ ದೇಹ ಕರ್ನಾಲ್ ಸಮೀಪದ ಕಾಲುವೆಯಲ್ಲಿ ಎಪ್ರಿಲ್ 19ರಂದು ಪತ್ತೆಯಾಗಿತ್ತು. ಆತನ ಪತ್ನಿ ಸುಖ್ ದೀಪ್ ಕೌರ್, ಜಗ್ತಾರ್ ಸಿಂಗ್ (22), ಗುರ್ಜಿಂದರ್ ಸಿಂಗ್ ಆಲಿಯಾಸ್ ನೀತಾ (21) ಹಾಗೂ ಸಾಹಿಬ್ ಸಿಂಗ್ (20) ಬಂಧಿತರು.
ಬಂಧಿತರಲ್ಲಿ ಸಾಹಿಬ್ ಸಿಂಗ್ ಪಟಿಯಾಲದ ರಾಜ್ ಪುರದ ಪ್ರತಿಷ್ಠಿತ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಪ್ರಥಮ ವರ್ಷದ ಬಿ.ಸಿ.ಎ. ವಿದ್ಯಾರ್ಥಿಯಾಗಿದ್ದರೆ, ಗುರ್ಜಿಂದರ್ ಸಿಂಗ್ ಪಾಟಿಯಾಲದ ಥಾಪರ್ ಕಾಲೇಜಿನಲ್ಲಿ ಬಿಟೆಕ್ ವಿದ್ಯಾರ್ಥಿನಿಯಾಗಿದ್ದು, ಜಗ್ತಾರ್ ಸಿಂಗ್ ಹೊಟೇಲ್ ಮ್ಯಾನೇಜ್ಮೆಂಟ್ ಕೋರ್ಸ್ ಮುಗಿಸಿದ್ದಾನೆ.
ಸುಖ್ ದೀಪ್ ಕೌರ್ ಪ್ರೀತಿಸುತ್ತಿದ್ದ 29 ವರ್ಷದ ಅನಿವಾಸಿ ಭಾರತೀಯ ಹರ್ಜಿತ್ ಸಿಂಗ್ ಎಂದು ಭಂಟಿಡಾದವನಾಗಿದ್ದು, ಬಹ್ರೈನ್ ನಲ್ಲಿ ಕೆಲಸ ಮಾಡುತ್ತಿದ್ದು ಸುಖ್ ದೀಪ್ ಗೆ ಮದುವೆಯಾಗಿ 14 ವರ್ಷದ ಪುತ್ರನಿದ್ದಾನೆಂಬುದು ಆತನಿಗೆ ತಿಳಿದಿರಲಿಲ್ಲವೆಂದು ಪೊಲೀಸರು ಹೇಳಿದ್ದಾರೆ.
ಆರೋಪಿಗಳು ಜಸ್ವಿಂದರ್ ನ ಕುಡಿಯುವ ನೀರಿಗೆ ನಿದ್ದೆ ಮಾತ್ರೆಗಳನ್ನು ಸೇರಿಸಿ ಆತನ ಒಳ ಉಡುಪುಗಳನ್ನು ಹೊರತು ಪಡಿಸಿ ಆತ ಧರಿಸಿದ ಬೇರೆ ಬಟ್ಟೆಗಳನ್ನು ಬಿಚ್ಚಿ ಆತನನ್ನು ಭಾಕ್ರಾ ಕಾಲುವೆಗೆ ಫೆಬ್ರವರಿ 3ರಂದು ಎಸೆದಿದ್ದರು. ಕರ್ತವ್ಯಕ್ಕೆ ತೆರಳಿದ ತನ್ನ ಪತಿ ಮನೆಗೆ ಮರಳಿಲ್ಲವೆಂದು ಮಾರ್ಚ್ 3ರಂದು ಕೌರ್ ಪೊಲೀಸ್ ದೂರು ನೀಡಿದ್ದಳು.
ಆರೋಪಿಗಳಲ್ಲೊಬ್ಬನಾದ ಸಾಹಿಬ್ ಸಿಂಗ್‌ನನ್ನು ಪೊಲೀಸರ ತಂಡದ ಮೇಲೆ ಹಲ್ಲೆಗೈದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬಂಧಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿತ್ತು.







