ಅತ್ಯಾಚಾರ ಪ್ರಯತ್ನ: ಆದಿವಾಸಿ ಮಹಿಳೆ ಯುವಕನನ್ನು ಅಂಗ ಕತ್ತರಿಸಿ,ಕೊಂದು ಹಾಕಿ ನಿರ್ಜನ ಪ್ರದೇಶದಲ್ಲಿ ಹೂತು ಹಾಕಿದಳು!

ಹೊಸದಿಲ್ಲಿ, ಮಾರ್ಚ್ 23: ಅಸ್ಸಾಮ್ ಗುಹಾವಟಿ ಬಾರಾಜುಲಿ ಜಿಲ್ಲೆಯ ಒಂದು ಗ್ರಾಮದಲ್ಲಿ ಆಘಾತಕಾರಿ ಘಟನೆಯೊಂದು ವರದಿಯಾಗಿದೆ. ಆದಿವಾಸಿ ಮಹಿಳೆಯೊಬ್ಬಳು ಅತ್ಯಾಚಾರಕ್ಕೆ ಯತ್ನಿಸಿದ ಯುವಕನ ಅಂಗವನ್ನು ಚೂರಿಯಿಂದ ತುಂಡರಿಸಿ ಆನಂತರ ಅವನ ಹತ್ಯೆಗೈದು ಹೂತು ಹಾಕಿರುವುದಾಗಿ ವರದಿಗಳು ತಿಳಿಸಿವೆ.
ಘಟನೆಯ ಹದಿನೈದು ದಿನಗಳಷ್ಟು ಹಿಂದಿನದ್ದಾಗಿದೆ. ಮಹಿಳೆಯನ್ನು ಅತ್ಯಾಚಾರಗೈಯಲು ಬಂದ ಯುವಕ ಕಿಸ್ನಾ ಭೂಮಿಜ್ ಎಂದು ಗುರುತಿಸಲಾಗಿದೆ. ಭೂಮಿಜ್‌ನ ಮನೆಯವರು ಯುವಕ ನಾಪತ್ತೆ ಎಂದು ಪೊಲೀಸರಿಗೆ ದೂರು ನೀಡಿದ ಬಳಿಕ ಈ ಆಘಾತ ಕಾರಿ ನಡೆದ ಕುರಿತು ಬಹಿರಂಗವಾಗಿದೆ.
ಪೊಲೀಸರು ತನಿಖೆ ನಡೆಸಿದಾಗ ಅವನನ್ನು ಕೊಂದು ಹೂಳಲಾಗಿದೆ ಎಂದು ಪತ್ತೆಯಾಗಿತ್ತು. ಯುವಕ ತನ್ನನ್ನು ಅತ್ಯಾಚಾರಕ್ಕೆಳಸಿದ್ದರಿಂದ ಕೊಂದೆ ಎಂದು ಆದಿವಾಸಿ ಮಹಿಳೆ ಹೇಳಿದ್ದಾಳೆ. ಶವವನ್ನು ಹೂತಲ್ಲಿಂದ ಎತ್ತಿ ಪೊಲೀಸರು ಪೋಸ್ಟ್‌ಮಾರ್ಟಂ ಕಳುಹಿಸಿಕೊಟ್ಟಿದ್ದಾರೆ. ಯುವಕ ಕಿಸ್ನಾ ಓರ್ವ ಅಪರಾಧಿ ಹಾಗೂ ಎರಡು ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿದ್ದ ವ್ಯಕ್ತಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಯುವಕನನ್ನು ಹತ್ಯೆಗೈದ ಮಹಿಳೆ ರೀತಾ ಅವಳ ಮನೆಗೆ ಆತ ನುಗ್ಗಿ ಅವಳ ಮಗಳನ್ನು ಅತ್ಯಾಚಾರಕ್ಕೆ ಪ್ರಯತ್ನಸಿದಾಗ ಸೀದಾ ಮಲಗಿದ ಮಹಿಳೆ ಆತನ ಅಂಗವನ್ನು ಕತ್ತರಿಸಿ ನಂತರ ತಾಯಿ ಮಗಳು ಸೇರಿ ಆತನನ್ನು ಕೊಂದು ಹಾಕಿದ್ದಾರೆ ಎಂದು ತಿಳಿಸಿದ್ದಾಳೆ. ಆನಂತರ ನೆರೆಯವರ ನೆರವಿನಿಂದ ಯುವಕನ ಶವವನ್ನು ನಿರ್ಜನ ಸ್ಥಳದಲ್ಲಿ ಹೂತು ಹಾಕಿದ್ದರು ಎಂಬುದಾಗಿ ವರದಿಗಳು ತಿಳಿಸಿವೆ.







