ಮಸ್ಕತ್ : ಪಿಕಪ್ ಪಲ್ಟಿ - ಕೇರಳದ ವ್ಯಕ್ತಿ ಮೃತ್ಯು

ಮಸ್ಕತ್, ಎಪ್ರಿಲ್ 23: ಪಿಕ್‌ಅಪ್ ವಾಹನ ಪಲ್ಟಿಯಾಗಿ ಕೇರಳದವ್ಯಕ್ತಿಯೊಬ್ಬರು ಮೃತರಾದರೆಂದು ವರದಿಯಾಗಿದೆ. ಕೊಲ್ಲಂಕುಂಡರದ ಬಿಜು ವರ್ಗೀಸ್ ಮೃತವ್ಯಕ್ತಿ(26)ಎಂದು ಗುರುತಿಸಲಾಗಿದೆ. ಶುಕ್ರವಾರ ಮಧ್ಯಾಹ್ನ ಒಂದೂವರೆಗಂಟೆಗೆ ಅಪಘಾತ ಸಂಭವಿಸಿತ್ತು.
ವಾದಿತ್ತೈನಿಯಿಂದ ವಾದಿನಾಮಿಗೆ ನಿರ್ಮಾಣವಾಗುತ್ತಿರುವ ಹೊಸ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ. ಅಲ್ಯೂಮಿನಿಯಂ ಫ್ಯಾಬ್ರಿಕೇಶನ್ ಕೆಲಸಗಾರನಾದ ಬಿಜು ಮತ್ತು ಗೆಳೆಯನು ಕೆಲಸದ ಅಗತ್ಯಾರ್ಥ ಹೋಗುತ್ತಿರುವಾಗ ದುರಂತ ಸಂಭವಿಸಿದೆ.
ಓವರ್ ಸ್ಪೀಡ್ನಲ್ಲಿದ್ದು ಪಿಕ್‌ಅಪ್ ಡಿವೈಡರ್‌ಗೆ ಢಿಕ್ಕಿಯಾಗಿ ಮಗುಚಿಬಿದ್ದಿತ್ತು. ಗೆಳೆಯ ಶಿಬು ಕೆಲವು ದಿವಸಗಳ ಮುಂಚೆ ಒಮನ್‌ಗೆ ಬಂದಿದ್ದರು. ಶುಕ್ರವಾರ ಕೆಲಸಕ್ಕೆ ರಜೆಯಾದ್ದರಿಂದ ಬಿಜುವಿನೊಂದಿಗೆ ಶಿಬು ಹೋಗಿದ್ದರು. ಮೃತ ಶಿಜು ನಾಲ್ಕು ವರ್ಷಗಳಿಂದ ಒಮನ್‌ನಲ್ಲಿಸಂಬಂಧಿಕರೊಬ್ಬರ ಸಂಸ್ಥೆಯನ್ನು ವಹಿಸಿಕೊಂಡಿದ್ದರು. ಅಪಘಾತದಲ್ಲಿ ಪಿಕಪ್ ವ್ಯಾನ್ ಸಂಪೂರ್ಣ ನುಜ್ಜುಗುಜ್ಜಾಗಿದೆ ಎಂದು ವರದಿಯಾಗಿದೆ.
Next Story





