ಬಹ್ರೈನ್: ಅಡುಗೆ ಸಿಲಿಂಡರ್ ಸ್ಫೋಟಕ್ಕೆ ಕೇರಳದ ಗಾಯಾಳು ವ್ಯಕ್ತಿ ಮೃತ್ಯು

ಮನಾಮ, ಎಪ್ರಿಲ್ 23: ಬಹ್ರೈನ್‌ನ ಹದ್‌ನಲ್ಲಿ ವಾಸಸ್ಥಳದಲ್ಲಿ ಅಡಿಗೆ ಮಾಡುವಾಗ ಗ್ಯಾಸ್ ಸಿಲಿಂಡರ್ ಸ್ಫೋಟವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಕೊಲ್ಲಂನ ಪರವೂರ್ ನಿವಾಸಿ ಅಂಬುಜಾಕ್ಷನ್(59)ಮೃತರಾಗಿರುವುದಾಗಿ ವರದಿಯಾಗಿದೆ. ಇದೇ ಘಟನೆಯಲ್ಲಿ ತಮಿಳ್ನಾಡು ತಿರುಚಿಯ ಶಿವನಾಥ್ ಕಾರ್ಮೇಘಂ(43) ಕಳೆದ ರವಿವಾರ ಮೃತರಾಗಿದ್ದರು.
ಅಲ್‌ಅಮೀನ್ ಕಾರ್ಗೋ ಕ್ಲಿಯರೆನ್ಸ್ ಕಂಪೆನಿಯ ಹೆವಿ ಡ್ರೈವರ್ ಆಗಿದ್ದ ಅಂಬುಜಾಕ್ಷನ್ ಮತ್ತು ಅಕೌಂಟೆಂಟ್ ಆಗಿದ್ದ ಶಿವನಾಥ್ ಸಣ್ಣ ಸಿಲಿಂಡರ್ ಬಳಸಿ ಅಡುಗೆ ಮಾಡುತ್ತಿದ್ದ ವೇಳೆ ಸಿಲಿಂಡರ್ ಸ್ಫೋಟವಾಗಿತ್ತು. ಅಂಬುಜಾಕ್ಷನ್‌ರ ಪತ್ನಿ ಮತ್ತು ನಾಲ್ವರುಮಕ್ಕಳು ಊರಲ್ಲಿದ್ದಾರೆ. ಎಪ್ರಿಲ್ ನಾಲ್ಕರಂದು ಇವರು ವಾಸ್ತವ್ಯ ಸ್ಥಳದಲ್ಲಿ ದುರ್ಘಟನೆ ನಡೆದಿತ್ತು. ಅಂಬೂಜಾಕ್ಷನ್ ಅಡುಗೆ ಮಾಡುತ್ತಿದ್ದರು. ಶಿವನಾಥನ್ ಹತ್ತಿರದಲ್ಲಿ ನಿಂತಿದ್ದರು.
ಅಂಬುಜಾಕ್ಷನ್‌ರ ಮೃತದೇಹವವನ್ನು ಊರಿಗೆ ಕಳುಹಿಸಲಾಗುವುದು ಮತ್ತು ಕುಟುಂಬಕ್ಕೆ ಎಲ್ಲ ಸಹಾಯವನ್ನು ನೀಡುವುದಾಗಿ ಕಂಪೆನಿ ಮಾಲಕ ಮುಹಮ್ಮದ್ ಅಲ್ ಅಮೀನ್ ಹೇಳಿದ್ದಾರೆ. ಇಷ್ಟರಲ್ಲೇ ತಮಿಳ್ನಾಡಿಗೆ ಶಿವನಾಥನ್‌ರ ಮೃತದೇಹವನ್ನು ಕಳುಹಿಸುವ ಕ್ರಮಕೈಗೊಳ್ಳಲಾಗುತ್ತಿದೆ ಎಂದೂ ವರದಿಯಾಗಿದೆ.





