ಕರಾಚಿಯಲ್ಲಿ ದಾವೂದ್ ಫೋಟೊ ಬಹಿರಂಗ!

ಮುಂಬೈ, ಎಪ್ರಿಲ್ 23: ಅಂಡರ್‌ವರ್ಲ್ಡ್ ಡಾನ್ ದಾವೂದ್ ಇಬ್ರಾಹೀಂ ಕರಾಚಿಯಲ್ಲಿದ್ದಾನೆ. ಇಂಡಿಯ ಟುಡೆ ಈ ಬಾರಿ ಡಾನ್ ಇಬ್ರಾಹೀಂನ ಫೋಟೊ ಪ್ರಕಟಿಸಿ ಹೀಗೆ ಹೇಳಿಕೊಂಡಿದೆ. 1993ರ ಮುಂಬೈ ಸೀರಿಯಲ್ ಬಾಂಬ್ ಸ್ಫೋಟದ ನಂತರ ಇದು ದಾವೂದ್‌ನ ಮೊದಲ ಫುಲ್‌ಲೆಂತ್ ಫೋಟೊ ಇದಾಗಿದೆ. ಇಂಡಿಯ ಟುಡೆಯ ವರದಿಯನ್ನು ನಂಬುವುದಾದರೆ ಭಾರತೀಯ ಪತ್ರಕರ್ತ ವಿವೇಕ್ ಅಗ್ರವಾಲ್ ಈ ಫೋಟೊ ತೆಗೆದವರೆಂದು ವರದಿಯಾಗಿದೆ. ಕೆಲವು ವರ್ಷದ ಮೊದಲು ಅವರು ಕರಾಚಿಗೆ ಹೋಗಿದ್ದರು ಎಂದು ವರದಿಗಳು ತಿಳಿಸಿವೆ.
ದಾವೂದ್ ಭಾರತದಲ್ಲಿ ಭಯೋತ್ಪಾದಕರೊಂದಿಗೆ ಸೇರಿಸುವ ಹೆಸರು. 90ರ ದಶದಕದಲ್ಲಿ ಸರಣಿ ಬಾಂಬ್‌ಸ್ಫೋಟದ ಮೂಲಕ ನಡುಗಿಸಿದ್ದನ್ನು ಮುಂಬೈ ಜನರು ಮರೆಯಲು ಸಾಧ್ಯವಿಲ್ಲ. ಇಂಡಿಯ ಟುಡೆ ವರದಿಯ ಜಾಗದಲ್ಲಿ ನೀಡಿರುವ ಫೋಟೊ 1985ರ ನಂತರ ಸಿಕ್ಕಿರುವ ದೊಡ್ಡ ಫೋಟೊ ಆಗಿದೆ. ಇದರಲ್ಲಿ ಮೀಸೆ ಇಲ್ಲ. ಇಡೀ ದೇಹ ಕಾಣಿಸುತ್ತಿದೆ. ಯಾವುದೇ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಲ್ಲ. ಫೋಟೊದಲ್ಲಿ ಕಪ್ಪು ಮತ್ತು ಬಿಳಿ ಬಣ್ಣದ ಕುರ್ತಾ ಧರಿಸಿದ್ದಾನೆ.
ದಾವೂದ್ ನನ್ನು ಭಾರತ ಸರಕಾರ ಹುಡುಕುತ್ತಿದೆ. ಇದು ಇಂಟರ್‌ಫೋಲ್‌ಗೆ ತಲೆನೋವಾಗಿರುವ ವಿಷಯವೂ ಆಗಿದೆ. ದಾವೂದ್ ಬೇರೆಲ್ಲಿಯೂ ಅಲ್ಲ ನೆರೆಯ ಪಾಕಿಸ್ತಾನದಲ್ಲಿ ಕೂತಿದ್ದಾನೆ. ಇಂಡಿಯಾ ಟುಡೆಯಲ್ಲಿ ಪ್ರಕಟವಾದ ಫೋಟೊ ಕರಾಚಿಯಲ್ಲಿ ತೆಗೆದದ್ದಾಗಿದೆ. ದಾವೂದ್ ನಮ್ಮಲ್ಲಿಲ್ಲ ಎಂದು ಹೇಳುವ ಪಾಕಿಸ್ತಾನ ಈ ಫೋಟೊ ಬಹಿರಂಗವಾದ್ದರಿಂದ ಪಾಕಿಸ್ತಾನ ಸುಳ್ಳು ಹೇಳುತ್ತಿದೆ ಎಂಬುದೂ ಬಹಿರಂಗವಾಗಿದೆ ಎಂದು ವರದಿಗಳು ತಿಳಿಸಿವೆ.





