ಭಟ್ಕಳ: ಚಿತ್ರಾಪುರದಲ್ಲಿ ಹಾಡಿ ರಂಜಿಸಿದ ಬಾಲಿವುಡ್ ಗಾಯಕ ಶಂಕರ್ ಮಹಾದೇವನ್

ಭಟ್ಕಳ: ಚಿತ್ರಾಪುರ ರಥೋತ್ಸವದ ಅಂಗವಾಗಿ ಎರ್ಪಡಿಸಲಾಗಿದ್ದ ಸಂಗೀತ ಕಾರ್ಯಕ್ರಮದಲ್ಲಿ ಖ್ಯಾತ ಸಂಗೀತಗಾರ ಹಾಗೂ ಹಿನ್ನೆಲೆಗಾಯಕ ಶಂಕರ ಮಹಾದೇವನ್ ಅವರ ಗಾಯನ ನೆರೆದಿರುವ ಸಾವಿರಾರು ಜನರ ಮನ ಣಿಸುವಲ್ಲಿ ಯಶಸ್ವೀಯಾಯಿತು.
ಗುರುವಿನ ಹಾಡಿನೊಂದಿಗೆ ತನ್ನ ಹಾಡುಗಾರಿಕೆಯನ್ನು ಆರಂಭಿಸಿದ ಶಂಕರ ಮಹದೇವನ್ ಶಣ್ಮುಖಪ್ರಿಯ ರಾಗದಲ್ಲಿ ಹಾಡಿರುವುದು ಪ್ರೇಕ್ಷಕರಿಂದ ಅತೀ ಹೆಚ್ಚು ಚಪ್ಪಾಳೆ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವೀಯಾಯಿತು. ಕನ್ನಡದ ಮಂಜುನಾಥನ ಹಾಡು ಮಹಾಪ್ರಾಣ ದೀಪಂ ಶಿವಂ.... ಶಿವಂ.... ಹಾಡು ಜನ ಮೆಚ್ಚುಗೆ ಗಳಿಸುವಲ್ಲಿ ಯಾಶಸ್ವೀಯಾಯಿತು. ಪ್ರೇಕ್ಷಕರ ಬೇಡಿಕೆಗಳ ಮಹಾಪೂರವೇ ಎದುರಾಗಿದ್ದು ಸಮಯದ ಅಭಾವದಿಂದ ನಯವಾಗಿ ತಿಸ್ಕರಿಸಿದ ಶಂಕರ ಮಹದೇವನ್ ಅವರನ್ನು ಶ್ರೀ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿಯವರು ಶಾಲು ಹೊದೆಸಿ, ನೆನಪಿ ಕಾಣಿಕೆಯನ್ನಿತ್ತು ಗೌರವಿಸಿದರು.
ಈ ಸಂದರ್ಭದಲ್ಲಿ ಆಶೀರ್ವಚನ ಪೂರ್ವಕವಾಗಿ ಹರಸಿದ ಶ್ರೀಗಳು ಚಿತ್ರಾಪುರ ಮಠದಲ್ಲಿ ರಥೋತ್ಸವವು ಅತ್ಯಂತ ಮಹತ್ವದ ಕಾರ್ಯಕ್ರಮವಾಗಿದೆ. ಒಮ್ಮೆ ನಿಂತು ಹೋದ ರಥೋತ್ಸವವನ್ನು ಶ್ರೀ ಪರಿಜ್ಞಾನಾಶ್ರಮ ಸ್ವಾಮೀಜಿಯವರು ಮತ್ತೆ ಪುನಹ ಆರಂಭಿಸಿದರು. ಅನೇಕ ಕಲಾವಿದರು, ಸಂಗೀತಕಾರರು ಇಲ್ಲಿಗೆ ಬಂದು ಹೋಗಿದ್ದಾರೆ. ಎಲ್ಲರಿಗೂ ಶ್ರೀ ದೇವರ ಕೃಪೆ ಇರಲಿ ಎನ್ನುವುದು ನಮ್ಮ ಹಾರೈಕೆ. ಸಂಗೀತಕ್ಕೆ ಎಲ್ಲರನ್ನು ತನ್ನತ್ತ ಸೆಳೆಯುವ ಶಕ್ತಿಯಿದೆ. ಸಂಗೀತದಲ್ಲಿ ಗಾನ, ವಾದ್ಯ, ನೃತ್ಯವೂ ಇದೆ. ಇಂದು ಗಾನ ಇತ್ತು, ವಾದ್ಯ ಇತ್ತು ನೃತ್ಯವಿಲ್ಲ ಆದರೆ ನಿಮ್ಮ ಗಾನಕ್ಕೆ ಪ್ರೇಕ್ಷಕರು ನೃತ್ಯ ಮಾಡಿರುವುದು ಗಾನದ ಶಕ್ತಿಯ ಅರಿವಾಗಿದೆ. ಇಂತಹ ವಿದ್ಯೆಯು ಜನ್ಮ ಜನ್ಮಾಂತರದ ಪ್ರತಿಫಲವಾಗಿದೆ. ಇಂದು ಶ್ರೀ ಮಠದಲ್ಲಿ ಅಭಿನವ ಸಮ್ಮೇಳನವನ್ನು ನಡೆಸಿದಂತಾಗಿದ್ದು ಸಂಸ್ಥಾನಕ್ಕೆ ಸಂತಸವಾಗಿದೆ ಎಂದರು.
ಶ್ರೀಗಳಿಂದ ಗೌರವ ಸ್ವೀಕರಿಸಿ ಮಾತನಾಡಿದ ಶಂಕರ ಮಹದೇವನ್ ಅವರು ಚಿತ್ರಾಪುರ ಹಾಗೂ ಶಿರಾಲಿಯ ಸುಂದರ ಪರಿಸರವನ್ನು ನೋಡಿ ಮನಸ್ಸಿಗೆ ನೆಮ್ಮದಿ, ಶಾಂತಿ ದೊರೆಯಿತು. ಶ್ರೀಗಳ ದರ್ಶನ ಮಾತ್ರದಿಂದ ತನ್ನ ಮನದಲ್ಲಿರುವ ದುಗುಡ, ಆತಂಕ ದೂರಾಗಿ ನೆಮ್ಮದಿಯು ನೆಲೆಯೂರಿತು. ಸುಂದರವಾದ ಪರಿಸರಕ್ಕಾಗಿ ನೆಮ್ಮದಿಯನ್ನು ಅರಸಿ ಅನೇಕರು ವಿದೇಶಗಳಿಗೆ ತೆರಳುತ್ತಾರೆ. ಆದರೆ ಇಲ್ಲಿಯ ನೆಮ್ಮದಿ, ಸುಂದರ ಪರಿಸರ ಜಗತ್ತಿನಲಿ್ಲ ಮತ್ತೆಲ್ಲೂ ಕಾಣಲಾರೆವು ಎಂದರು.
ಶಂಕರ ಮಹದೇವನ್ ಜೊತೆಗೆ ಸಹಗಾಯಕಿಯಾಗಿ ಯುವ ಪ್ರತಿಭೆ ಅಂಕಿತಾ ಜೋಷಿ ಹಾಗೂ ಸಹಾಯಕರಾಗಿ ಪ್ರಸಾದ್ ಎಂ., ಮುಕುಂದ, ಸೂರ್ಯಕಾಂತ, ಅಮಿತ್ ಚೌಗುಲೆ, ಅಮರ್‌ನಾತ್, ವಿಜಯ ಬೆನಗಲ್ ಮುಂತಾದವರಿದ್ದರು







