ಶಿರಾಲಿ ಚಿತ್ರಾಪುರ ಮಠದಲ್ಲಿ ಭವಾನಿಶಂಕರ್‌ದೇವರ 155ನೇ ಮಹಾರಥೋತ್ಸವ

ಭಟ್ಕಳ: ಶಿರಾಲಿಯ ಚಿತ್ರಾಪುರ ಮಠ ಸಂಸ್ಥಾನದ ಶ್ರೀ ಭವಾನಿಶಂಕರದೇವರ 155ನೇ ಮಹಾ ರಥೋತ್ಸವವು ಶ್ರೀ ಮಠದ ಪಕ್ಕದಲ್ಲಿರುವರಥೋತ್ಸವದಗದ್ದೆಯಲ್ಲಿಚಿತ್ರಾಪುರದಲ್ಲಿ ಭಾರೀಜಯಘೋಷದೊಂದಿಗೆಚಿತ್ರಾಪುರ ಮಠಾಧೀಶ ಶ್ರೀ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ನೆರವೇರಿತು.
ರಥೋತ್ಸವದ ಅಂಗವಾಗಿ ವಿವಿಧಧಾರ್ಮಿಕ ಕಾರ್ಯಕ್ರಮಗಳು ಎ.17ರಂದು ಧ್ವಜಾರೋಹಣದೊಂದಿಗೆಆರಂಭವಾಗಿದ್ದವು.ನಂತರ ದಿನಾಲೂ ಉತ್ಸವಾದಿಗಳು ನಡೆದು ಎ.22ರಂದು ಮಧ್ಯಾಹ್ನ 12 ಗಂಟೆಗೆರಥಾರೋಹಣಕಾರ್ಯಕ್ರಮ ನಡೆದು ಸಂಜೆ 5 ಗಂಟೆಗೆ ಶ್ರೀ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ರಥೋತ್ಸವಕಾರ್ಯಕ್ರಮ ಸಾವಿರಾರುಜನರಜಯಘೋಷದೊಂದಿಗೆ ನಡೆಯಿತು.
ರಥೋತ್ಸವದ ನಿಮಿತ್ತ ಭಕ್ತರು ಬೆಳಿಗ್ಗೆಯಿಂದಲೇ ಶ್ರೀ ಮಠಕ್ಕೆ ಆಗಮಿಸಿ ಶ್ರೀ ದೇವರ ಹಾಗೂ ಶ್ರೀಗಳ ದರ್ಶನವನ್ನು ಪಡೆದು ನಂತರರಥಕಾಣಿಕೆ ಸಲ್ಲಿಸಿದರು.
ಸಂಜೆ ನಡೆದರಥೋತ್ಸವಕಾರ್ಯಕ್ರಮದಲ್ಲಿ ಶ್ರೀ ಮಠದ ಆಡಳಿತ ಮಂಡಳಿಯ ಅಧ್ಯಕ್ಷ ವಿನೋದಎಣ್ಣೆಮಡಿ, ಉಪಾಧ್ಯಕ್ಷ ಪ್ರವೀಣಕಡ್ಲೆ, ಪ್ರಧಾನ ವ್ಯವಸ್ಥಾಪಕ ನಾರಾಯಣ ಮಲ್ಲಾಪುರ, ಕಾರ್ಯದರ್ಶಿ ಜಿ. ವಿ. ಭಟ್, ಭವಾನಿಶಂಕರಕೈಲಾಜೆ, ಅರುಣ ನಾಡಕರ್ಣಿ, ಎನ್. ಜೈವಂತರಾವ್, ಸುಭಾಸ್‌ಕೊಪ್ಪಿಕರ್ ಸೇರಿದಂತೆಹಲವು ಗಣ್ಯರು ಉಪಸ್ಥಿತರಿದ್ದರು.
ಸಂಜೆ 6 ಗಂಟೆಗೆ ಶ್ರೀ ಮಠದ ಸಭಾಂಗಣದಲ್ಲಿ ನಡೆದಧರ್ಮ ಸಭೆಯಲ್ಲಿ ಶ್ರೀಗಳು ನೆರೆದ ಭಕ್ತರಿಗೆ ಆಶೀರ್ವಚನ ನೀಡಿದರು.
ಎ.23ರಂದು ಮಧ್ಯಾಹ್ನಅನ್ನ ಸಂತರ್ಪಣೆ, ರಾತ್ರಿ ಮೃಗ ಭೇಟೆಉತ್ಸವಕಾರ್ಯಕ್ರಮವಿದ್ದು ಎ.24ರಂದು ಅವಭೃತ ಸ್ನಾನ (ಓಕುಳಿ) ಧ್ವಜಾವರೋಹಣ, ದೀಪ ನಮಸ್ಕಾರ, ಅಷ್ಟಾವಧಾನ ಸೇವೆಯೊಂದಿಗೆರಥೋತ್ಸವದಧಾರ್ಮಿಕ ಕಾರ್ಯಕ್ರಮಗಳು ಮುಕ್ತಾಯಗೊಳ್ಳಲಿವೆ.







