ಉಪ್ಪಳ: ಸತ್ಯಮೇವ ಜಯತೇ ಯಿಂದ ಕುಡಿಯುವ ನೀರು ಉದ್ಘಾಟನೆ

ಮಂಜೇಶ್ವರ: ಆಧುನಿಕ ಸಂಪರ್ಕ ಮಾಧ್ಯಮಗಳ ಮೂಲಕ ಸೇವಾ ಚಟುವಟಿಕೆಯಂತಹ ನೂತನ ಪರಿಕಲ್ಪನೆಗೆ ಯುವ ಜನರು ಮನಮಾಡಿರುವುದು ಸ್ತುತ್ಯರ್ಹ ಬೆಳವಣಿಗೆ.ವಾಟ್ಸ್‌ಫ್ ಗುಂಪೊಂದು ಟ್ರಸ್ಟ್ ಆಗಿ ಕಾರ್ಯಾಚರಿಸುತ್ತ ಸಾಮಾಜಿಕ ಶ್ರೇಯಸ್ಸಿಗೆ ಪ್ರಯತ್ನಿಸುತ್ತಿರುವುದು ಸ್ತುತ್ಯರ್ಹವೆಂದು ರಹಿಮಾನ್ ಪಳ್ಳೆಕೂಡೆಲ್ ಅಭಿಪ್ರಾಯ ವ್ಯಕ್ತಪಡಿಸಿದರು.
ಸತ್ಯಮೇವ ಜಯತೇ ಚಾರಿಟೇಬಲ್ ಟ್ರಸ್ಟ್‌ನ ಮಂಜೇಶ್ವರ ವಲಯದ ವತಿಯಿಂದ ಪೈವಳಿಕೆ ಸಮೀಪದ ಕಾಯರ್‌ಕಟ್ಟೆ ಲಾಲ್‌ಬಾಘ್ ಪರಿಸರದ ಬೊಳಂಗಳ ಮತ್ತು ಕಂಡತ್ತಾಡ್ ಎಂಬಲ್ಲಿಯ ಹಲವು ಕುಟುಂಬಗಳಿಗೆ ಕುಡಿಯುವ ನೀರಿನ ಸರಬರಾಜನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಈ ಸಂದಭರ್ ಟ್ರಸ್ಟಿನ ಪದಾಧಿಕಾರಿಗಳಾದ ಅಜಿತ್ ಎಂ.ಸಿ, ಆರಿಫ್ ಬೆದ್ರೋಡಿ, ರಿಚರ್ಡ್ ಡಿಸೋಜ, ಪೂವಪ್ಪ ಲಾಲ್‌ಬಾಘ್, ಜಯ ಕಜೆ, ವೆಂಕಪ್ಪ ಲಾಲ್‌ಬಾಘ್, ಉಮ್ಮರ್ ಮಸಿಕುಮ್ಮೇರಿ, ಅಲಿ ಕಡೆಂಕೋಡಿ, ಮೊದು ಕಡೆಂಕೋಡಿ ಉಪಸ್ಥಿತರಿದ್ದರು.
ಅಶ್ವಥ್ ಲಾಲ್‌ಬಾಘ್ ಸ್ವಾಗತಿಸಿ, ಕಲೀಲ್ ಚಿಪ್ಪಾರು ವಂದಿಸಿದರು.
Next Story





