ಮಟ್ಕಾ ದಾಳಿ: ಐವರ ಸೆರೆ
ಮಂಜೇಶ್ವರ : ಮಟ್ಕಾ ಅಡ್ಡೆಗೆ ದಾಳಿ ನಡೆಸಿದ ಪೊಲೀಸರು ಆಟದಲ್ಲಿ ನಿರತರಾಗಿದ್ದ ಐದು ಮಂದಿಯನ್ನು ಸೆರೆ ಹಿಡಿದು ಆಟಕ್ಕೆ ಬಳಸಲಾಗಿದ್ದ ನಗದನ್ನು ವಶಪಡಿಸಿಕೊಂಡ ಘಟನೆ ಬದಿಯಡ್ಕ ಸಮೀಪದ ನೀರ್ಚಾಲು ಪರಿಸರದಲ್ಲಿ ನಡೆದಿದೆ.
ನೀರ್ಚಾಲು ಪ್ರದೇಶದ ಎರಡು ಕಡೆಗಳಲ್ಲಾಗಿ ಮಟ್ಕಾ ದಂಧೆಯಲ್ಲಿ ನಿರತರಾಗಿದ್ದ ಐದು ಮಂದಿಯನ್ನು ಬದಿಯಡ್ಕ ಪೊಲೀಸರು ಸೆರೆ ಹಿಡಿದಿದ್ದಾರೆ. ಮುಳ್ಳೇರಿಯ ನಿವಾಸಿ ಮಹಮ್ಮದ್ ರಶೀದ್ (41), ನೀರ್ಚಾಲು ನಿವಾಸಿ ಜಯೇಂದ್ರ (40) ಎಂಬಿವರನ್ನು ಬಂಧಿಸಿ ಆಟಕ್ಕೆ ಬಳಸಲಾದ 460 ರೂ. ವಶಪಡಿಸಲಾಗಿದೆ. ಆದೇ ರೀತಿ ಇನ್ನೊಂದೆಡೆಯಿಂದ ಆಂಟನಿ ಡಿ ಸೋಜ, ಕಿಶೋರ್, ಅಬ್ದುಲ್ ಅಝೀರ್ ಎಂಬಿವರನ್ನು ಸೆರೆ ಹಿಡಿದು ಅವರಿಂದ ಆಟಕ್ಕೆ ಬಳಸಲಾಗಿದ್ದ 2040 ರೂ. ವನ್ನು ವಶಪಡಿಸಲಾಗಿದೆ.
Next Story





