ಸಂತ ಜೋಸೆಫರ ಕಾಲೇಜು ಜೆಪ್ಪು, ಮಂಗಳೂರು ಮತ್ತು ಯೋನಪೋಯ ಅಸ್ಪತ್ರೆ ಬ್ಲಡ್ ಬ್ಯಾಂಕ್ ಸಹಯೋಗದಲ್ಲಿ ರಕ್ತದಾನ ಶಿಬಿರ
.jpg)
ಮಂಗಳೂರು,ಎ.23: ಸಂತ ಜೋಸೆಫರ ಕಾಲೇಜು ಜೆಪ್ಪು, ಮಂಗಳೂರು ಮತ್ತು ಯೋನಪೋಯ ಅಸ್ಪತ್ರೆ ಬ್ಲಡ್ ಬ್ಯಾಂಕ್ ಸಹಯೋಗದಲ್ಲಿ ಜೆಪ್ಪು ಸಂತ ಜೋಸೆಫರ ಕಾಲೇಜಿನ ಸಭಾಂಗಣದಲಿ ರಕ್ತದಾನ ಶಿಬಿರವನ್ನು ಇಂದು ಅಯೋಜಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಲಯನ್ಸ್ ಕ್ಲಬ್ ಮಂಗಳೂರು-ನೇತ್ರಾವತಿ ಅಧ್ಯಕ್ಷ ಮಂದಾಕಿನಿ ಎಸ್. ಉಪಾಧ್ಯಾಯ ಅವರು ರಕ್ತದಾನವು ಒಂದು ಸಾಮಾಜಿಕ ಸೇವೆ, ರಕ್ತದಾನ ಮಾಡುವುದು ನಮ್ಮ ಜೀವನವನ್ನು ಸಾರ್ಥಕತೆ ಮಾಡುವಂತ ಉಡುಗೊರೆ, ಮಹಿಳೆಯರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರತ್ನಾಕರ್ ಇಂದ್ರಾಳಿ, ಬ್ಲಡ್ ಬ್ಯಾಂಕ್ ನಿರ್ವಾಹಕ ಡಾ. ಎಮ್. ಎಚ್. ಷರೀಫ್, ಸಂತ ಜೋಸೆಫ್ ಕಾಲೇಜು, ಜೆಪ್ಪುಇದರ ಪ್ರಾಂಶುಪಾಲ ಫಾ. ವಿಲ್ಫೆಡ್ ಪ್ರಕಾಶ್ ಡಿಸೋಜ , ಡಾ. ಬಾಲಕೃಷ್ಣ ಭಟ್ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಜೆ.ಸಿ.ಐ. ಮಂಗಳೂರು, ಲಾಲ್‌ಭಾಗ್ ಅಧ್ಯಕ್ಷ ನಿತಿನ್ ಎನ್ ಶೆಟ್ಟಿ , ಕಾರ್ಯ ನಿರ್ದೇಶಕ ಡಾ. ದಿನತ್ ಡೆಸಾ.ಕಾರ್ಯದರ್ಶಿ ಡಾ. ರವಿಚಂದ್ರ ಕಾರ್ಕಳ, ಸಂತ ಜೋಸೆಫರ ಕಾಲೇಜು ಜೆಪ್ಪು ಎನ್.ಎಸ್.ಎಸ್ ನಿರ್ವಾಹಕ ನೆಲ್ಸನ್ ಪಿರೇರಾ .ಜೆ.ಜೆ.ಸಿ. ವಿಂಗ್, ಮಂಗಳೂರು ಅಧ್ಯಕ್ಷೆ ದಿವ್ಯ ಜ್ಯೋತಿ, ರೆಡ್ ಕ್ರಾಸ್ ಮಂಡಳಿ ವಿದ್ಯಾರ್ಥಿ ಅಧ್ಯಕ್ಷ ರಿಝ್ವನ್, ಎನ್.ಎಸ್.ಎಸ್, ವಿದ್ಯಾರ್ಥಿ, ಅಧ್ಯಕ್ಷೆ.







