ಸಿರಿಯದಲ್ಲಿ ಮರುಕಳಿಸಿದ ಸಂಘರ್ಷ : ಭಾರೀ ಪ್ರಮಾಣದಲ್ಲಿ ನಾಗರಿಕರ ಸಾವು

ಅಲೆಪ್ಪೊ (ಸಿರಿಯ), ಎ. 23: ಯುದ್ಧಗ್ರಸ್ತ ಸಿರಿಯದ ಅಲೆಪ್ಪೊ ನಗರದ ಬಂಡುಕೋರರ ಪ್ರಾಬಲ್ಯದ ಉಪನಗರವೊಂದರ ಮೇಲೆ ಶನಿವಾರ ಸರಕಾರಿ ಪಡೆಗಳು ನಡೆಸಿದ ವಾಯು ದಾಳಿಯಲ್ಲಿ 12 ನಾಗರಿಕರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ನಾಗರಿಕ ರಕ್ಷಣಾ ಕೂಟವೊಂದು ತಿಳಿಸಿದೆ.
ಸಿರಿಯದ ಮಾಜಿ ಆರ್ಥಿಕ ಕೇಂದ್ರದ ಮೇಲೆ ಸರಕಾರಿ ಪಡೆಗಳು ನಡೆಸುತ್ತಿರುವ ದಾಳಿ ಇಂದು ಎರಡನೆ ದಿನಕ್ಕೆ ಕಾಲಿರಿಸಿದೆ.
ಅದೇ ವೇಳೆ, ಡಮಾಸ್ಕಸ್‌ನ ಪೂರ್ವದಲ್ಲಿರುವ ಬಂಡುಕೋರ ನಿಯಂತ್ರಣದ ಪಟ್ಟಣ ಡೌಮದ ಮೇಲೆ ನಡೆದ ಬಾಂಬ್ ದಾಳಿಯಲ್ಲಿ 13 ಮಂದಿ ಮೃತಪಟ್ಟಿದ್ದಾರೆ ಎಂದು ಸಿರಿಯ ಮಾನವಹಕ್ಕುಗಳ ವೀಕ್ಷಣಾಲಯ ಹೇಳಿದೆ.
ಅಲೆಪ್ಪೊದ ಬಂಡುಕೋರ ನಿಯಂತ್ರಣದ ಭಾಗಗಳ ಮೇಲೆ ಶುಕ್ರವಾರ ನಡೆದ ವಾಯು ದಾಳಿಯಲ್ಲಿ 25 ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ.
Next Story





