ಮಂಗಳೂರು : ಅಪಘಾತದಲ್ಲಿ ಆಸ್ಪತ್ರೆಯಲ್ಲಿ ದಾಖಲು – ಚಿಕಿತ್ಸೆಗೆ ನೆರವು ಯಾಚನೆ
ಮಂಗಳೂರು,ಎ.23: ಮುಲ್ಕಿ ಕೊಳ್ನಾಡ್‌ನ ಕೆ.ಎಸ್.ರಾವ್ ನಗರದ ಶಾಫಿ ಜುಮಾ ಮಸೀದಿ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಹಾಗೂ ಮಸೀದಿಯ ಸದಸ್ಯರಾಗಿರುವ ಸಲೀಂ ಎಂಬವರ ಮಗನಾದ ಅಬ್ದುಲ್ಲ ಅಮೀರ್ ಎಂಬ ಯುವಕ ಎ.12 ರಂದು ಸುರತ್ಕಲ್ ಸಮೀಪದ ಚೊಕ್ಕಬೆಟ್ಟುವಿನಲ್ಲಿ ಅಪಘಾತಕ್ಕೀಡಾಗಿ ನಗರದ ಎ.ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಪ್ರಸ್ತುತ ತೀವ್ರ ನಿಗಾ ಘಟಕದಲ್ಲಿ ಇರುತ್ತಾರೆ.
ಇವರು ಇನ್ನೂ ಕೂಡ ಚೇತರಿಸಿಕೊಂಡಿಲ್ಲ. ಈವರೆಗೆ ಸುಮಾರು 1.80 ಲಕ್ಷ ಖರ್ಚಾಗಿದ್ದು ಮುಂದೆ ಇನ್ನು ಹೆಚ್ಚಿನ ಹಣದ ಅವಶ್ಯಕತೆ ಆಸ್ಪತ್ರೆ ಖರ್ಚಿಗೆ ಬೇಕಾಗುತ್ತದೆ. ಯುವಕನ ತಂದೆ ಕೂಲಿಕಾರ್ಮಿಕರಾಗಿದ್ದು ಚಿಕಿತ್ಸೆಯ ಮೊಬಲಗನ್ನು ಭರಿಸಲು ಅಸಮರ್ಥರಾದ ಹಿನ್ನೆಲೆಯಲ್ಲಿ ದಾನಿಗಳ ಸಹಾಯ ಸಹಕಾರವನ್ನು ನಿರೀಕ್ಷಿಸುತ್ತಿದ್ದಾರೆ. ದಾನಿಗಳು ಬ್ಯಾಂಕ್ ಆಫ್ ಬರೋಡದ ಸುರತ್ಕಲ್ ಶಾಖೆಯ ಖಾತೆ ಸಂಖ್ಯೆ 32530100007411 ಖಾತೆಗೆ ಹಣವನ್ನು ಹಾಕುವಂತೆ ದೂರವಾಣಿ ಸಂಖ್ಯೆ 7204753766 ಸಂಪರ್ಕಿಸುವಂತೆ ಮುಲ್ಕಿ ಕೊಳ್ನಾಡ್‌ನ ಕೆ.ಎಸ್.ರಾವ್ ನಗರದ ಶಾಫಿ ಜುಮಾ ಮಸೀದಿಯ ಪ್ರಕಟನೆ ತಿಳಿಸಿದೆ.





