ಮೇ 1, 2ರಂದು ಪುಣೆಯಲ್ಲಿ ರಾಜ್ಯ ಮಟ್ಟದ ಆಯ್ಕೆ ಶಿಬಿರ
2020 ಒಲಿಂಪಿಕ್ಸ್
ಮಡಿಕೇರಿ, ಎ.23: ಆಲ್ ಇಂಡಿಯನ್ ಸ್ವೀಡ್ ಸ್ಟಾರ್‌ನಿಂದ 2020 ಒಲಿಂಪಿ ಕ್ಸ್‌ಗೆ ಕೊಡಗು ಜಿಲ್ಲೆಯಿಂದ ಆಯ್ಕೆಯಾದ ಕ್ರೀಡಾಳುಗಳಿಗೆ ಮೇ 1 ಮತ್ತು 2ರಂದು ಪುಣೆಯಲ್ಲಿ ರಾಜ್ಯಮಟ್ಟದ ಆಯ್ಕೆ ಶಿಬಿರ ನಡೆಯಲಿದೆ.
ಈಗಾಗಲೇ ಕೊಡಗು ಜಿಲ್ಲೆಯಿಂದ 17 ವರ್ಷ ದೊಳಗಿನ ಹುಡುಗರ 100 ಮೀ. ಮತ್ತು 200 ಮೀ. ಹಾಗೂ 800 ಮೀ.ಗೆ ಶರತ್.ಆರ್.ವೈ, ವಿನ್ಸೆೆಂಟ್ ಕ್ರಿಶ್ಚಿಯನ್, ಗೌತಮ, ಆಕಾಶ.ಕೆ.ಸಿ, ಮಣಿಕಂಠ, ರಾಕೇಶ್.ಎನ್.ಪಿ, ಗಣಪತಿ.ಕೆ.ಎಸ್, ತಸ್ವೀನ್ ದೇವಯ್ಯ ಮಣೀಶ್ ಬೋಪಯ್ಯ, ಗ್ಲೇನ್ ಗಪ್ಪಣ್ಣ, ನಿಕೀಲ್.ಬಿಸಿ, ದನಂಜಯ.ಡಿ, ಮೊಕ್ಷಿತ್.ಎಸ್, ಮನೋಜ್.ಎಮ್, ತೇಜಸ್.ಕೆ. ಆಯ್ಕೆಯಾಗಿದ್ದಾರೆ. 17 ವರ್ಷದೊಳಗಿನ ಹುಡುಗಿಯರ 200 ಮೀ.ಓಟದಲ್ಲಿ ಕವನಾ ಕೆ.ಯು ಆಯ್ಕೆಯಾಗಿದ್ದು, 14 ವರ್ಷದೊಳಗಿನ ಹುಡುಗಿಯರ 100ಮೀ., 200ಮೀ. ಮತ್ತು ಓಟದಲ್ಲಿ ನೀತಾ.ಪಿ.ಕೆ, ಸಾದನಾ.ಎಚ್.ವಿ ಆಯ್ಕೆಯಾಗಿದ್ದರೆ. 14 ವರ್ಷದೊಳಗಿನ ಹುಡುಗರ 100ಮಿ ಓಟದಲ್ಲಿ ಇರ್ಫಾನ್ ಅಮರ್‌ಖಾನ್, ಸಚಿನ್.ಡಿ, ಹರೀಶ್.ವೈ.ಕೆ, ಕ್ರಷ್ಣ. ವೈ.ಬಿ, ರಾಜೇಶ್ ಸುಬ್ರಮಣಿ ಆಯ್ಕೆಯಾಗಿದ್ದಾರೆ. ಇವರು ಎ. 29ರಂದು ಮಂಗಳೂರು ಜಂಕ್ಷನ್‌ನಿಂದ ಪುಣೆಗೆ ಬೆಳಗ್ಗೆ 11ಗಂಟೆಗೆ ರೈಲಿನ ಮೂಲಕ ಪ್ರಯಾಣಿಸಲಿದ್ದಾರೆ. ಮಾಹಿತಿ ಸಿಗದ ಓಟಗಾರರು ಮಡಿಕೇರಿಯ ಶ್ರೀನಿವಾಸ್ ಅವರ ಮೊಬೈಲ್ ಸಂಖ್ಯೆ- 9448504636 ಗೆ ಸಂಪರ್ಕಿಸಬಹುದಾಗಿದೆ.





