ವಿಶ್ವವಿದ್ಯಾನಿಲಯ ಕಾಲೇಜಿಗೆ ಮಾನ್ಯತೆ
ಮಂಗಳೂರು, ಎ.23: ಉನ್ನತ ಶಿಕ್ಷಣ ಒದಗಿಸುವ ದಿಸೆಯಲ್ಲಿ ನ್ಯಾಕ್ ಸಂಸ್ಥೆಯಿಂದ ‘ಎ’ ಗ್ರೇಡ್ ಪಡೆದಿರುವ ವಿಶ್ವವಿದ್ಯಾನಿಲಯ ಕಾಲೇಜಿಗೆ ವಿವಿ ಅನುದಾನ ಆಯೋಗವು (ಯುಜಿಸಿ) 12ನೆ ಪಂಚವಾರ್ಷಿಕ ಯೋಜನಾವಧಿಯಲ್ಲಿ ಶ್ರೇಷ್ಠತಾ ಸಾಮರ್ಥ್ಯ ವಿರುವ ಕಾಲೇಜು ಎಂದು ಮಾನ್ಯತೆ ನೀಡಿದೆ. ಈ ಮಾನ್ಯತೆಯಿಂದ ಕಾಲೇಜಿನಲ್ಲಿ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ, ಬೇಸಿಗೆ ತರಬೇತಿ ತರಗತಿಗಳು, ಉದ್ಯಮ ಶೀಲತಾ ಅಭಿವೃದ್ಧಿ, ಗ್ರಾಮ ದತ್ತು ಸ್ವೀಕಾರ, ವ್ಯವಹಾರ ನಿರ್ವಹಣಾ ತರಬೇತಿ ತರಗತಿಗಳನ್ನು ನಡೆಸಲು ಆರ್ಥಿಕ ಅನುದಾನ ದೊರೆಯಲಿದೆ. ಮಂಗಳೂರು ವಿವಿ ವ್ಯಾಪ್ತಿಯ ನಾಲ್ಕು ಕಾಲೇಜುಗಳಿಗೆ ಈ ಮಾನ್ಯತೆ ದೊರೆತಿದೆ ಎಂದು ವಿವಿ ಕಾಲೇಜಿನ ಪ್ರಾಂಶುಪಾಲರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story