ಅಲಿಘಡ ವಿವಿಯಲ್ಲಿ ಗುಂಪು ಘರ್ಷಣೆ; ಪೊಲೀಸರ ಗುಂಡಿಗೆ ಓರ್ವ ವಿದ್ಯಾರ್ಥಿ ಬಲಿ

ಹೊಸದಿಲ್ಲಿ, ಎ.24: ಅಲಿಘಡ ಮುಸ್ಲಿಂ ವಿವಿಯಲ್ಲಿ ಶನಿವಾರ ತಡ ರಾತ್ರಿ ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಹಾರಿಸಿದ ಗುಂಡಿಗೆ ಓರ್ವ ವಿದ್ಯಾರ್ಥಿ ಬಲಿಯಾಗಿದ್ದಾನೆ. ಇಬ್ಬರಿಗೆ ಗಾಯವಾಗಿದೆ.
ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿದ್ದು, ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸುವ ಯತ್ನ ನಡೆಸಿದರು. ಆದರೆ ಹಿಂಸಾಚಾರಕ್ಕೆ ಇಳಿದ ಗುಂಪು ವಿವಿಯ ಕಟ್ಟವೊಂದಕ್ಕೆ ಬೆಂಕಿ ಹಚ್ಚಿತು. ವಾಹನಗಳಿಗೂ ಬೆಂಕಿ ಇಟ್ಟು ಧಾಂದಲೆ ನಡೆಸಿತು. ಪೊಲೀಸರು ಲಾಠಿ ಚಾರ್ಜ್ ನಡೆಸಿ ವಿದ್ಯಾರ್ಥಿಗಳನ್ನು ಚದುರಿಸುವ ಯತ್ನ ನಡೆಸಿದರು.
ವಿದ್ಯಾರ್ಥಿಗಳ ಘರ್ಷಣೆಗೆ ಕಾರಣ ತಿಳಿದು ಬಂದಿಲ್ಲ. ಪರಿಸ್ಥಿತಿ ಪೊಲೀಸರ ನಿಯಂತ್ರಣದಲ್ಲಿದ್ದು, ಸ್ಥಳದಲ್ಲಿ ಭಾರೀ ಸಂಖ್ಯೆಯಲ್ಲಿ ಪೊಲೀಸರು ಜಮಾಯಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
Next Story





