ಕಾಸರಗೋಡು : ಎ. 25ರಿಂದ ವಿದ್ಯುತ್ ವ್ಯತ್ಯಯ
ಕಾಸರಗೋಡು, ಎ. 24 : ನಗರ ಹೊರವಲಯದ ವಿದ್ಯಾನಗರ ಸಬ್ ಸ್ಟೇಶನ್ ನ ಸಾಮಾರ್ಥ್ಯ ಹೆಚ್ಚಳ ಮತ್ತು ದುರಸ್ತಿ ಹಿನ್ನೆಲೆಯಲ್ಲಿ ಎ. 25ರಿಂದ ಆರು ದಿನಗಳ ಕಾಲ ಕಾಸರಗೋಡು ನಗರ ಮತ್ತು ಹೊರವಲಯದಲ್ಲಿ ಸತತ ವಿದ್ಯುತ್ ಮೊಟಕುಗೊಳ್ಳಲಿದೆ.
ಆದರೆ ಯಾವ ಸಮಯದಲ್ಲಿ ವಿದ್ಯುತ್ ಮೊಟಕು ಗೊಳ್ಳಲಿದೆ ಎಂಬ ಬಗ್ಗೆ ವಿದ್ಯುತ್ ಮಂಡಲಿ ಸ್ಪಷ್ಟಪಡಿಸಿಲ್ಲ. ಎಪ್ರಿಲ್ 30 ರ ತನಕ ಆರು ದಿನ ಹಗಲು - ರಾತ್ರಿ ವಿದ್ಯುತ್ ಮೊಟಕು ಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.
ಸತತ ವಿದ್ಯುತ್ ಮೊಟಕು ಬಿಸಿಲ ಝಳದಿಂದ ಬಳಲುತ್ತಿರುವ ಜನ ಸಾಮಾನ್ಯರು ಮತ್ತಷ್ಟು ಸ೦ಕಷ್ಟಕ್ಕೆ ಸಿಲುಕುವಂತಾಗಲಿದೆ. ಉದ್ಯಮಗಳು ಮುಚ್ಚುವ ಸ್ಥಿತಿ ಬರಲಿದೆ . ಸರಕಾರಿ ಕಛೇರಿಗಳಲ್ಲಿ ಕೆಲಸ ನಿಶ್ಚಲವಾಗಲಿದೆ.
Next Story