ವಿಮಾನದಲ್ಲಿ ಕನ್ಹಯ್ಯ ಕುಮಾರ್ ಮೇಲೆ ಹಲ್ಲೆಗೆ ಯತ್ನ

ಹೊಸದಿಲ್ಲಿ, ಎ.24: ಜೆಎನ್ ವಿವಿ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್ ವಿಮಾನದಲ್ಲಿ ಮುಂಬೈನಿಂದ ಪುಣೆಗೆ ಸಂಚರಿಸುವ ವೇಳೆ ಅವರ ಮೇಲೆ ಅಪರಿತನೊಬ್ಬ ಹಲ್ಲೆಗೆ ಯತ್ನ ನಡೆಸಿದ ಘಟನೆ ಇಂದು ಬೆಳಗ್ಗೆ ನಡೆದಿದೆ.
ಕನ್ಹಯ್ಯ ಕುಮಾರ್ ಮುಂಬೈನಿಂದ ಪುಣೆಗೆ ತೆರಳಲು ವಿಮಾನದಲ್ಲಿ ಕುಳಿತಿದ್ದಾಗ ಅವರ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಹಲ್ಲೆಗೆ ಯತ್ನ ನಡೆಸಿದ ಎಂದು ತಿಳಿದು ಬಂದಿದೆ.
ಕನ್ಹಯ್ಯ ಕುಮಾರ್ ಮೇಲೆ ಹಲ್ಲೆಗೆ ವಿಫಲ ಯತ್ನ ನಡೆಸಿದ ಆರೋಪಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
Next Story





