ಸೊಳ್ಳೆ ನಾಶಕ್ಕೆ ಹಳೆ ಟೈರ್ ಬಳಸಿ!
ಮುಳ್ಳನ್ನು ಮುಳ್ಳಿನಿಂದ ತೆಗೆಯುವ ಹೊಸ ಸಂಶೋಧನೆ
ರೋಗ ಹರಡುವ ಸೊಳ್ಳೆಯನ್ನು ಅಗ್ಗದ ವಿಧಾನದಲ್ಲಿ ನಿವಾರಿಸುವ ಹೆಚ್ಚು ಪರಿಣಾಮಕಾರಿ ಮತ್ತು ವಿಷಕಾರಿಯಲ್ಲದ ದಾರಿಯನ್ನು ಕೆನಡಾದ ಸಂಶೋಧಕರು ಕಂಡುಹಿಡಿದಿದ್ದಾರೆ. ನಮ್ಮ ವಿರುದ್ಧ ಸೊಳ್ಳೆಗಳು ಬಳಸುವ ಶಸ್ತ್ರವನ್ನೇ ಅದರ ವಿರುದ್ಧ ಬಳಸುವ ದಾರಿಯನ್ನು ಸಂಶೋಧಕರು ಕಂಡುಕೊಂಡಿದ್ದಾರೆ- ಅದೇ ಹಳೇ ಟೈರ್‌ಗಳು. ಒಂಟಾರಿಯೊದ ಸಡ್ಬರಿಯ ಲಾರೆಂಟೈನ್ ವಿಶ್ವವಿದ್ಯಾಲಯದ ಸಹಾಯಕ ಪ್ರೊಫೆಸರ್ ಆಗಿರುವ ಗೆರಾಡೊ ಯಲಿಬರ್ರಿ ಒವಿಲಾಂಟಾ ಎನ್ನುವ ಸಾಧನ ಕಂಡು ಹಿಡಿದಿದ್ದಾರೆ. ಅದರ ಮೂಲಕ ಸೊಳ್ಳೆಯ ಮೊಟ್ಟೆಯನ್ನು ನಾಶ ಮಾಡಲಾಗುತ್ತದೆ. ಈಗಿನ ಜಿಕಾ ವೈರಸ್ ಸೇರಿದಂತೆ ಚಿಕನ್ ಗುನ್ಯಾ, ಡೆಂಗ್ಯು ಮತ್ತು ಕಾಮಾಲೆ ಹರಡುವ ಸೊಳ್ಳೆಗಳಿಂದ ಮುಕ್ತಿ ಪಡೆಯಬಹುದು. ಈ ಸಾಧನವು ಪರಿಸರ ಹಾಳು ಮಾಡುವ ಕೀಟನಾಶಕ ಬಳಕೆಯ ಅಗತ್ಯವನ್ನು ಇಲ್ಲವಾಗಿಸಿದೆ. ಕೀಟನಾಶಕ ಬಳಸುವುದರಿಂದ ಸೊಳ್ಳೆಯನ್ನು ತಿನ್ನುವ ಇತರ ಕೀಟಗಳೂ ನಾಶವಾಗುತ್ತವೆ. ಅಲ್ಲದೆ ನಿಧಾನವಾಗಿ ಸೊಳ್ಳೆಗಳು ನಿರೋಧಕ ಶಕ್ತಿ ಬೆಳೆಸಿಕೊಳ್ಳಬಹುದು. ಹೀಗಾಗಿ ಕೀಟನಾಶಕಗಳು ದುರ್ಬಲವಾಗಬಹುದು. ಹೊಸ ಸಾಧನವು ಹಳೇ ಟೈರನ್ನು ಏನು ಮಾಡುವುದು ಎನ್ನುವ ಸಮಸ್ಯೆಗೂ ಪರಿಹಾರ ನೀಡಿದೆ. ಶೇ 30ರಷ್ಟು ಸೊಳ್ಳೆಗಳು ಟೈರಲ್ಲಿ ನಿಂತ ನೀರಿನಲ್ಲಿ ಬೆಳೆಯುತ್ತವೆ. ಉಲಿಬರಿ ಸೊಳ್ಳೆಗಳನ್ನು ಟ್ರಾಪ್ ಮಾಡುವ ಒಂದು ಸಾಧನವನ್ನು ನಿರ್ಮಿಸಿದ್ದಾರೆ. ಆರಂಭಿಕ ಪರೀಕ್ಷೆಗಳು ಯಶಸ್ವಿಯಾಗಿವೆ. ಗ್ವಾಟಿಮಾಲದಲ್ಲಿ 10 ತಿಂಗಳ ಅಧ್ಯಯನದಲ್ಲಿ ಸಂಶೋಧಕರು 84 ಒವಿಲಂಟಗಳನ್ನು ಸಾಕ್ಸಷೆನಲ್ಲಿ ಇಟ್ಟಿದ್ದಾರೆ ಮತ್ತು 18,000 ಸೊಳ್ಳೆಮೊಟ್ಟೆಗಳನ್ನು ತಿಂಗಳೊಳಗೆ ನಾಶಮಾಡಿದ್ದಾರೆ. ಸಾಮಾನ್ಯ ಟ್ರಾಪ್‌ಗಳಿಗೆ ಹೋಲಿಸಿದರೆ ಇದು ಏಳುಪಟ್ಟು ಅಧಿಕ. ಅಲ್ಲದೆ ಈ ಸ್ಥಳಗಳಲ್ಲಿ ಹೊಸ ಡೆಂಗ್ಯು ಪ್ರಕರಣವೂ ವರದಿಯಾಗಿಲ್ಲ. ಮೊದಲು ಎರಡರಿಂದ ಮೂರು ಡಜನ್ ಪ್ರಕರಣಗಳು ಇಲ್ಲಿಂದ ಸಿಗುತ್ತಿದ್ದವು.
ಒವಿಲಂಟಾದಲ್ಲಿ 20 ಇಂಚು ಉದ್ದನೆಯ ಟೈರ್ ಇರುತ್ತದೆ. ಅದರಲ್ಲಿ ಡ್ರೈನ್ ವಾಲ್ವ್ ಟ್ಯೂಬ್ ಇರುತ್ತದೆ. ಅದು ಸೊಳ್ಳೆಗಳ ಸಂತಾನೋತ್ಪತ್ತಿ ಜಾಗದ ಹಾಗಿದೆ. ಒಂದು ಟೈರಿನಿಂದ ಮೂರು ಸಾಧನಗಳನ್ನು ತಯಾರಿಸಬಹುದು. ಸಾಧನದ ಅಡಿಯಲ್ಲಿ 2 ಲೀಟರ್ ನೀರು ತುಂಬಲಾಗುತ್ತದೆ. ಅದರಲ್ಲೇ ಹೆಣ್ಣು ಸೊಳ್ಳೆಗಳು ಮೊಟ್ಟೆಗಳನ್ನಿಡುತ್ತವೆ. ಸೊಳ್ಳೆಗಳು ಒಣ ಹೊರಮೈನಲ್ಲಿ ಮೊಟ್ಟೆ ಇಡುವುದಿಲ್ಲ. ಅವುಗಳಿಗೆ ಮೊಟ್ಟೆ ಇಡಲು ತೇವಾಂಶ ಬೇಕು. ಬಿಸಿ ಪರಿಸರದಲ್ಲಿ ಕಾಲ ಕಾಲಕ್ಕೆ ನೀರು ಹಾಕಬೇಕು. ಏಕೆಂದರೆ ನೀರು ಬೇಗನೇ ಆವಿಯಾಗುತ್ತದೆ. ನೀರನ್ನು ಎರಡು ವಾರಕ್ಕೊಮ್ಮೆ ಬದಲಿಸಬೇಕು. ಫಿಲ್ಟರಿನ ಹಾಗೆ ಇರುವ ಬಿಳಿ ಬಟ್ಟೆಯಲ್ಲಿ ಮೊಟ್ಟೆಗಳು ಸ್ಪಷ್ಟವಾಗಿ ಕಾಣುತ್ತವೆ. ನಂತರ ಮೊಟ್ಟೆಗಳನ್ನು ನಾಶ ಮಾಡಿ ಮತ್ತೆ ನೀರು ಹಾಕಿ ಇಡಬೇಕು. ನೀರನ್ನು ಎರಡು ವಾರಕ್ಕೊಮ್ಮೆ ಬದಲಿಸುತ್ತಲೇ ಇರಬೇಕು. ಏಕೆಂದರೆ ಸೊಳ್ಳೆಗಳು ಒಮ್ಮೆ ಮೊಟ್ಟೆ ಬಲಿತ ಮೇಲೆ ಫಿರೊಮೊನ್ ಬಿಡುಗಡೆ ಮಾಡಿ ಸುರಕ್ಷಿತ ನೀರೆಂದು ಇತರ ಸೊಳ್ಳೆಗಳಿಗೆ ನೀರಿಗೆ ಆಹ್ವಾನಿಸುತ್ತವೆ. ಹೆಣ್ಣು ಸೊಳ್ಳೆಗಳ ಸಾಮಾನ್ಯ ಜೀವಿತಾವಧಿ ಒಂದು ತಿಂಗಳು ಎಕರೆಗೆ ಎರಡು ಒವಿಲಿಯಂಟಗಳನ್ನು ಇಡುವ ಮೂಲಕ ಸೊಳ್ಳೆಯ ಪ್ರಮಾಣವನ್ನು ಕಡಿಮೆ ಮಾಡಬಹುದು. ಈವರೆಗೆ ಸಾಧನಗಳನ್ನು ಗ್ವಾಟಿಮಾಲ ಮತು ಮೆಕ್ಸಿಕೊದಲ್ಲಿ ಪರೀಕ್ಷಿಸಲಾಗಿದೆ. ಬ್ರೆಜಿಲ್ ಮತ್ತು ಪೆರುಗ್ವೆಯಲ್ಲೂ ಪರೀಕ್ಷೆ ನಡೆಸಲಾಗುತ್ತದೆ.
ಕೃಪೆ: http://www.bbc.com