ಕಾಪು: ಮೊದಲ ಪುರಸಭಾ ಚುನಾವಣೆ ಶಾಂತಿಯುತ; ಶೆ. 38ಮತದಾನ
ಕಾಪು, ಎ. 24: ಕಾಪು ಪುರಸಭೆಯ 23 ಸ್ಥಾನಕ್ಕಾಗಿ ಇಂದು ನಡೆಯುತ್ತಿರುವ ಮತದಾನ ಬಿರುಸಿನಿಂದ ಕೂಡಿದ್ದು, ಸುಮಾರು 10:30ರ ವೇಳೆಗೆ ಶೇ. 38 ಮತದಾನವಾಗಿದೆ.
ಮೂಳೂರು ಹಾಗೂ ಮಲ್ಲಾರು ಗ್ರಾಮಗಳಲ್ಲಿ ಮತದಾರರು ಬೆಳಿಗ್ಗೆಯಿಂದಲೇ ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಳ್ಳುತಿದ್ದಾರೆ. ಪಡು, ಕೈಪುಂಜಾಲು, ಪೊಲಿಪು, ಉಳಿಯರಗೋಳಿಯಲ್ಲಿ ನಿಧಾನಗತಿಯಲ್ಲಿ ಮತದಾನ ನಡೆಯುತ್ತಿದೆ.
ಕಾಪು, ಉಳಿಯರಗೋಳಿ, ಮಲ್ಲಾರು ಗ್ರಾಮ ಪಂಚಾಯ್ತಿಯನ್ನೊಳಗೊಂಡ ಕಾಪು ಪುರಸೆಭೆಗೆ ಒಟ್ಟು 23 ವಾರ್ಡ್ಗಳಿವೆ. 11 ಸೂಕ್ಷ್ಮ ಹಾಗೂ 12 ಸಾಮಾನ್ಯ ಮತಗಟ್ಟೆಗಳಿರುವ ಇಲ್ಲಿ ಒಟ್ಟು 23 ಮತಗಟ್ಟೆಗಳು ಇವೆ.
ಕೆಲವೊಂದು ಕಡೆಗಳಲ್ಲಿ ಅಭ್ಯರ್ಥಿಗಳು ಮತದಾನ ಕೇಂದ್ರದ ಬಳಿ ಹೋದಾಗ ಮಾತಿನ ಚಕಮಕಿಯೂ ನಡೆದಿದೆ ಎಂದು ತಿಳಿದುಬಂದಿದೆ.
ಮತದಾನದ ವಿವರ:
ಕಾಪು ಪಡು ಮತಗಟ್ಟೆಯ 999 ಮತದಾರಿದ್ದು, 180 ಮತದಾನವಾಗಿದೆ.
ಕೈಪುಂಜಾಲು 729 (210), ಪೊಲಿಪು ಗುಡ್ಡೆ 663 (177), ಕೋತಲ್ಕಟ್ಟೆ 637 (193), ದಂಡತೀರ್ಥ 703(193, ಭಾರತ್ ನಗರ 847(261), ಕೊಂಬಗುಡ್ಡೆ 811 (232), ಬಡಗರಗುತ್ತು 755(225), ಜನರಲ್ ಶಾಲೆ 589 (282), ಕುಡ್ತಿಮಾರ್ 539 (232) ಮತದಾನವಾಗಿದೆ. ಕೆಲವೊಂದು ಮತಗಟ್ಟೆಯ ವಿವರ ಲಭ್ಯವಾಗಿಲ್ಲ.
ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ಎಲ್ಲಾ 23 ವಾರ್ಡ್ಗಳಲ್ಲಿ ಸ್ಪರ್ಧಿಸುತ್ತಿದ್ದಾರೆ. ಜೆಡಿಎಸ್ 4, ಎಸ್ಡಿಪಿಐ 4 ಮತ್ತು ಪಕ್ಷೇತರರು 4 ವಾರ್ಡ್ಗಳಲ್ಲಿ ಕಣದಲ್ಲಿದ್ದಾರೆ.
ಒಟ್ಟು 115 ಸಿಬ್ಬಂದಿ ಚುನಾಚಣಾ ಕರ್ತವ್ಯದಲ್ಲಿ ತೊಡಗಿದ್ದಾರೆ. ಮತದಾನ ಕೇಂದ್ರದ ಸುತ್ತ ಬಿಗು ಬಂದೋಬಸ್ತ್ ಮಾಡಲಾಗಿದೆ. 7,613 ಪುರುಷರು ಹಾಗೂ 8,599 ಮಹಿಳಾ ಮತದಾರರು ಸೇರಿ ಒಟ್ಟು 16, 212 ಮತದಾರರಿದ್ದಾರೆ.