ಪೆರುವಾಜೆ ಬ್ರಹ್ಮ ಕಲಶ: ಕೃತಜ್ಞತಾ ಸಭೆ
ಸುಳ್ಯ, ಎ. 24: ದೇವಾಲಯಗಳು ಭಕ್ತರ ಭಕ್ತಿ, ನಂಬಿಕೆಯ ನೆಲೆಯಾದರೆ, ಅದರ ಜೀರ್ಣೋದ್ಧಾರ ಕಠಿಣ ಅಲ್ಲ ಎನ್ನುವುದಕ್ಕೆ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಳ ಉದಾಹರಣೆ ಎಂದು ಶ್ರೀ ಕ್ಷೇತ್ರದ ಬ್ರಹ್ಮಕಲಶ ಮತ್ತು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಸ್.ಎನ್ ಮನ್ಮಥ ಹೇಳಿದರು.
ಅವರು ಶ್ರೀ ಕ್ಷೇತ್ರ ಬ್ರಹ್ಮಕಲಶ, ನೂತನ ಧ್ವಜಪ್ರತಿಷ್ಠೆ ಮತ್ತು ಜಾತ್ರೆಯ ಸಂದರ್ಭದಲ್ಲಿ ವಿವಿಧ ರೂಪದಲ್ಲಿ ಕರಸೇವಕರಾಗಿ ದುಡಿದ ಭಕ್ತ ಸಮುದಾಯಕ್ಕೆ ಕೃತಜ್ಞತೆ ಸಲ್ಲಿಸಿ, ಮಾತನಾಡಿದರು.
ಕ್ಷೇತ್ರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಉಮೇಶ್ ಕೆ.ಎಂ.ಬಿ ಮಾತನಾಡಿ, ಶ್ರೀ ಕ್ಷೇತ್ರದ ಅಧಿದೇವತೆ ಜಲದುರ್ಗಾದೇವಿಯ ಇಚ್ಛೆ ಏನಿತ್ತೋ ಅದು ನೆರವೇರಿದೆ. ಕರಸೇವೆಯ ಮೂಲಕ ಸಾವಿರಾರು ಜನರು ದೇವರ ಸೇವೆ ಮಾಡಿದ್ದಾರೆ. ಅವರೆಲ್ಲರ ಸೇವೆಗೆ ಸಮಿತಿ ಆಭಾರಿಯಾಗಿದೆ ಎಂದರು. ಸಾಂಸ್ಕೃತಿಕ ಸಮಿತಿ ಸಂಚಾಲಕ ತಾರಾನಾಥ ಸವಣೂರು ಅಭಿನಂದನಾ ಭಾಷಣಗೈದರು. ಕಾರ್ಯಾಧ್ಯಕ್ಷ ಸತ್ಯನಾರಾಯಣ ಕೋಡಿಬೈಲು ಮಾತನಡಿದರು.
ಭಕ್ತ ಸಮುದಾಯದ ಪರವಾಗಿ ಸ್ಮರಣ ಸಂಚಿಕೆ ಸಮಿತಿ ಸದಸ್ಯ ಯು.ರಾಮ, ಅಲಂಕಾರ ಸಮಿತಿ ಸಹಸಂಚಾಲಕ ಬಾಬು ಎನ್, ಕಾರ್ಯಾಲಯ ಸಮಿತಿ ಸದಸ್ಯ ಪ್ರಸಾದ್ ಸೇವಿತ, ಆರ್ಥಿಕ ಸಮಿತಿ ಸಂಚಾಲಕ ಶ್ರೀರಾಮ ಪಾಟಾಜೆ ಮೊದಲಾದವರು ಅನಿಸಿಕೆ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶ ಸಮಿತಿ ಕಾರ್ಯದರ್ಶಿ ಎನ್.ಕುಶಾಲಪ್ಪ ಗೌಡ, ಕೋಶಾಧಿಕಾರಿ ಪಿ.ಮಂಜಪ್ಪ ರೈ, ಜತೆ ಕಾರ್ಯದರ್ಶಿ ರಾಮಕೃಷ್ಣ ರಾವ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪಿ.ವೆಂಕಟಕೃಷ್ಣ ರಾವ್, ರಾಮಣ್ಣ ರೈ ವೈಪಾಲ, ದಾಮೋದರ ನಾಯ್ಕ, ಸುಜಾತ ಪದ್ಮನಾಭ ಶೆಟ್ಟಿ, ಭಾಮಿನಿ ಜತ್ತಪ್ಪ ಗೌಡ, ಸ್ವಾಗತ ಸಮಿತಿಯ ರಾಜೀವಿ ಆರ್ ರೈ ಪುಡ್ಕಜೆ, ಸೀತಾ ಕೇಶವ ಭಟ್ ಮಠತ್ತಡ್ಕ, ವ್ಯವಸ್ಥಾಪಕ ವಸಂತ ಆಚಾರ್ಯ ಪೆರುವಾಜೆ, ಆಮಂತ್ರಣ ವಿತರಣಾ ಸಮಿತಿ ಸಹಸಂಚಾಲಕ ಸುರೇಶ್ ಕುಮಾರ್ ಪೆರುವಾಜೆ, ವಾಹನ ನಿಲುಗಡೆ ಸಮಿತಿ ಸಂಚಾಲಕ ಹೂವಪ್ಪ ಗೌಡ, ಸ್ವಯಂಸೇವಾ ಸಮಿತಿ ಸಂಚಾಲಕ ಜಯಪ್ರಕಾಶ್ ರೈ ಪೆರುವಾಜೆ, ಹೊರೆಕಾಣಿಕೆ ಸಮಿತಿ ಸಂಚಾಲಕ ಪದ್ಮನಾಭ ಶೆಟ್ಟಿ ಪೆರುವಾಜೆ, ಸಹ ಸಂಚಾಲಕ ಸದಾಶಿವ ಮಣಿಯಾಣಿ, ಆಸನ ಸಮಿತಿ ಸಂಚಾಲಕ ಕಿರಣ್ ಕೊಟ್ಟೆಕಾ, ಉಗ್ರಾಣ ಸಮಿತಿ ಸಂಚಾಲಕ ಲೋಕನಾಥ ಶೆಟ್ಟಿ ಪೆರುವಾಜೆ, ನೀರಾವರಿ ಸಮಿತಿ ಸಂಚಾಲಕ ಜಗನ್ನಾಥ ರೈ, ಕರಸೇವಾ ಸಮಿತಿ ಸಂಚಾಲಕ ಪ್ರೇಮನಾಥ ಶೆಟ್ಟಿ ಪೆರುವಾಜೆ, ಸಹಸಂಚಾಲಕ ವೆಂಕಟರಮಣ ಭಟ್, ಪ್ರಚಾರ ಸಮಿತಿ ಸಂಚಾಲಕ ಪ್ರೇಮಚಂದ್ರ ಬೆಳ್ಳಾರೆ, ಕಾರ್ಯಾಲಯ ಸಮಿತಿ ಸಹಸಂಚಾಲಕ ಹೊನ್ನಪ್ಪ ಗೌಡ ಚಾಮುಂಡಿಮೂಲೆ, ಚಪ್ಪರ ಸಮಿತಿ ಸಂಚಾಲಕ ಮೋನಪ್ಪ ಪೂಜಾರಿ ಪೆರುವಾಜೆ, ಸಹಸಂಚಾಲಕ ವಿಶ್ವನಾಥ ಗೌಡ, ಅಲಂಕಾರ ಸಮಿತಿ ಸಂಚಾಲಕ ಜಯಂತ ಮಡಪ್ಪಾಡಿ, ಸ್ಮರಣ ಸಂಚಿಕೆ ಸಮಿತಿ ಸಹಸಂಚಾಲಕ ರಜನೀಶ ಸವಣೂರು, ಮಹಿಳಾ ಸ್ವಯಂಸೇವಕಿಯರ ಸಮಿತಿ ಸಂಚಾಲಕಿ ಆಶಾ ಸತೀಶ್, ಸಹಸಂಚಾಲಕಿ ನಯನತಾರಾ ಕಾಯರ್‌ಮಾರ್, ಸಾಗಾಟ ಸಮಿತಿ ಸಂಚಾಲಕ ವಿಜಯ ಪೆರುವಾಜೆ, ಸಹ ಸಂಚಾಲಕ ನಾರಾಯಣ ಪೆರುವಾಜೆ ಸೇರಿದಂತೆ ವಿವಿಧ ಸಮಿತಿಯ ಸದಸ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರು.
ಸಭಾ ನಿರ್ವಹಣಾ ಸಮಿತಿ ಸಂಚಾಲಕ ವಾಸುದೇವ ಪೆರುವಾಜೆ ನಿರೂಪಿಸಿದರು.







