ರಿಯಾದ್‌ನಲ್ಲಿ ಬಾಲಕಿ ಅಪಹರಣ! : ಪೊಲೀಸರಿಂದ ವ್ಯಾಪಕ ತನಿಖೆ

ರಿಯಾದ್,ಎಪ್ರಿಲ್ 24: ರಾಜಧಾನಿ ನಗರವಾದ ರಿಯಾದ್‌ನಿಂದ ಬಾಲಕಿಯನ್ನು ಅಪಹರಿಸಿದ ಘಟನೆ ಬೆಳಕಿಗೆ ಬಂದಿದ್ದು ಪೊಲೀಸರು ವ್ಯಾಪಕ ತನಿಖೆ ನಡೆಸುತ್ತಿದ್ದಾರೆ. ಕಳೆದ ಗುರುವಾರ ಸಂಜೆ ಪೂರ್ವ ರಿಯಾದ್‌ನ ನಸೀಂ ಡಿಸ್ಟ್ರಿಕ್ಟ್‌ನಲ್ಲಿ ಘಟನೆ ನಡೆದಿದೆ. ಸಲ್ಮಾ ದಖೀಲುಲ್ಲ ಮುರೈತಿರಿ ಎಂಬ ಹದಿಮೂರು ವರ್ಷದ ಬಾಲಕಿಯು ಕಾಣದಾಗಿದ್ದಾಳೆ. ಮನೆಯ ಮುಂದೆ ಆಟ ವಾಡುತ್ತಿದ್ದ ಬಾಲಕಿ ದಿಢೀರನೆ ಕಾಣೆಯಾಗಿದ್ದಳು ಎಂದು ವರದಿಗಳು ತಿಳಿಸಿವೆ.
ಮನೆಯವರು ಸುತ್ತಮುತ್ತ ಎಷ್ಟೇ ಹುಡುಕಾಡಿದರೂ ಬಾಲಕಿಯ ಸುಳಿವೇ ಪತ್ತೆಯಾಗಿರಲಿಲ್ಲ. ಆದ್ದರಿಂದ ಅವರು ಪೊಲೀಸರಿಗೆ ದೂರು ನೀಡಿದ್ದರು. . ಬಾಲಕಿಗೆ ಮಾನಸಿಕ ಸಮಸ್ಯೆ ಅಥವಾ ಕೌಟುಂಬಿಕ ಸಮಸ್ಯೆ ಇಲ್ಲ ಎಂದು ಮನೆಯವರು ಪೊಲೀಸರಿಗೆ ಹೇಳಿರುವುದಾಗಿ ವರದಿಯಾಗಿದೆ.
Next Story





