ಇನ್ಶೂರೆನ್ಸ್,ಲೈಸೆನ್ಸ್ ಇಲ್ಲದ ಮೃತನ ಆಸ್ತಿ ಹರಾಜು ಹಾಕಿ 30ಲಕ್ಷ ನಷ್ಟ ಪರಿಹಾರ ನೀಡಲು ಕೋರ್ಟ ತೀರ್ಪು
ಬೈಕ್ ಅಪಘಾತ ಪ್ರಕರಣ

ತಳಿಪರಂಬ್, ಎಪ್ರಿಲ್ 24: ಲೈಸನ್ಸ್ ಇಲ್ಲದೆ, ಇನ್ಶೂರೆನ್ಸ್ ಇಲ್ಲದೆ ವಾಹನ ಚಲಾಯಿಸಿ ಅಪಘಾತ ಸಂಭವಿಸಿದರೆ ನೀವು ನಿಮ್ಮ ಮನೆಯವರನ್ನೇ ಕಷ್ಟಕ್ಕೆ ತಳ್ಳುವಿರಿ. ಇಂತಹ ದೊಂದು ನ್ಯಾಯಾಲಯದ ತೀರ್ಪು ಕೇರಳದಿಂದ ವರದಿಯಾಗಿದೆ. ಒಂದು ವಾಹನ ಅಪಘಾತ ಪ್ರಕರಣದಲ್ಲಿ ತಳಿಪರಂಬ್ ಕೋರ್ಟು ಹೊರಡಿಸಿದ ಆದೇಶ ಇದಕ್ಕೆ ನಿರ್ಣಾಯಕ ಎಂಬಂತಿದೆ.
ಡ್ರೈವಿಂಗ್ ಲೈಸೆನ್ಸ್ ಇನ್ಶೂರೆನ್ಸ್ ಇಲ್ಲದೆ ಬೈಕ್ ಚಲಾಯಿಸಿ ನಡೆದಿದ್ದ ಅಪಘಾತದಲ್ಲಿ ನಾಲ್ಕು ವರ್ಷದ ಬಾಲಕ ಸಹಿತ ಇಬ್ಬರಿಗೆ ಗಾಯಗೊಂಡಿದ್ದರು ಮತ್ತು ಬೈಕ್ ಚಲಾಯಿಸಿದ ವ್ಯಕ್ತಿ ಮೃತನಾಗಿದ್ದ. ಈಗ ತಳಿಪರಂಬ್ ಎಂಎಸಿಟಿ ನ್ಯಾಯಾಧೀಶ ಎಂ. ಮುಹಮ್ಮದ್ ಕೋಯ ಎಂಬವರು ಮೃತನಾದ ವ್ಯಕ್ತಿಯ ಸೊತ್ತು ವಿತ್ತಗಳನ್ನು ಹರಾಜು ಹಾಕಿ ಗಾಯಾಳುಗಳಿಗೆ 30 ಲಕ್ಷ ಪರಿಹಾರ ನೀಡಬೇಕೆಂದು ತೀರ್ಪು ನೀಡಿದ್ದಾರೆ.
ಇನ್ಶೂರೆನ್ಸ್ ಇಲ್ಲದ ಪರಿಣಾಮ ಕೋರ್ಟು ಇಂತಹ ತೀರ್ಮಾನಕ್ಕೆ ಬಂದಿದೆ. ಚೆಂಬೇರಿಯ ರೆಜಿ ಕೆ. ಮ್ಯಾಥ್ಯೂ ಮತ್ತು ನಾಲ್ಕು ವರ್ಷದ ಮಗ ಅಲೆಕ್ಸ್ ಸಂಚರಿಸಿದ ಬೈಕ್‌ಗೆ 2011ರ ಎಪ್ರಿಲ್ 14ಕ್ಕೆ ವೆಂಗನ್ನ್ ರಸ್ತೆಯಲ್ಲಿ ವೆಂಗನ್ನ್ ನಿವಾಸಿ ಅನಿಲ್ ಎಂಬಾತ ಓಡಿಸಿದ ಬೈಕ್ ಢಿಕ್ಕಿಯಾಗಿತ್ತು. ಈ ಪ್ರಕರಣದ ವಿಚಾರಣೆಯಲ್ಲಿ ಕೋರ್ಟ್ ಮೂವತ್ತು ಲಕ್ಷ ರೂಪಾಯಿ ನಷ್ಟ ಪರಿಹಾರ ನೀಡಬೇಕೆಂದು ತೀರ್ಪು ನೀಡಿದೆ. ಬೈಕ್ ಓಡಿಸಿ ಢಿಕ್ಕಿ ಹೊಡೆದು ಸ್ಥಳದಲ್ಲೇ ಮೃತನಾದ ಅನಿಲ್‌ನನ್ನು ನ್ಯಾಯಾಲಯ ತಪ್ಪಿತಸ್ಥ ಎಂದು ಗುರುತಿಸಿದೆ. ರೆಜಿ ವತ್ತು ಮಗ ಅಲೆಕ್ಸ್‌ಗೆ ಗಂಭೀರ ಗಾಯಗೊಂಡಿದ್ದರು. ಅಲೆಕ್ಸ್‌ಗೆ ಒಂದು ಕಣ್ಣು ನಷ್ಟವಾಗಿದೆ.
ಬೈಕ್ ಓಡಿಸಿ ಮೃತನಾದ ಅನಿಲ್‌ನ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಆರೋಪಿಯಾಗಿಸಿ ದೂರುದಾರ ಕೋರ್ಟ್‌ನ್ನು ಸಂಪರ್ಕಿಸಿದ್ದರು. ಆದ್ದರಿಂದ ಅನಿಲ್‌ನ ಐವತ್ತು ಸೆಂಟ್ಸ್ ಭೂಮಿಯನ್ನು ಜಫ್ತಿ ಮಾಡಿ ಏಲಂಗೆ ಇಡಲಾಗಿದೆ. ನಷ್ಟಪರಿಹಾರ ಕೇಳಿ ಅನಿಲ್‌ನ ಹಕ್ಕುದಾರರು ನೀಡಿದ ಅರ್ಜಿಯನ್ನು ಕೋರ್ಟು ತಳ್ಳಿಹಾಕಿದೆ. ವಾಹನ ಚಲಾಯಿಸಿದ ಸಮಯದಲ್ಲಿ ಲೈಸನ್ಸ್ ಕೂಡ ಇರಲಿಲ್ಲ ಎಂದು ಕೋರ್ಟು ಎತ್ತಿಹಿಡಿದಿದೆ.







