ಆರ್‌ಎಸ್‌ಎಸ್‌ನಿಂದ ನನಗೂ ಸ್ವಾತಂತ್ರ್ಯ ಬೇಕು
ಮಾಜಿ ಪ್ರಧಾನಿ ವಾಜಪೇಯಿ ಸೊಸೆಯ ಮನದಾಳದ ಮಾತು

ಹೊಸದಿಲ್ಲಿ, ಎ. 24: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಸೊಸೆ ಕರುಣಾ ಶುಕ್ಲಾ, ಮೋದಿ ಸರ್ಕಾರದ ಕಾರ್ಯ ವೈಖರಿಯನ್ನು ಕಟುವಾಗಿ ಟೀಕಿಸಿದ್ದಾರೆ.
ಬಿಜೆಪಿ ಜತೆಗಿನ 32 ವರ್ಷಗಳ ಸಂಬಂಧವನ್ನು 2014ರಲ್ಲಿ ಕಡಿದುಕೊಂಡಿದ್ದ ಶುಕ್ಲಾ, ಶನಿವಾರ ಹೇಳಿಕೆ ನೀಡಿ, "ನಾನು ಹಲವು ಸರ್ಕಾರಗಳು ಆಡಳಿತಕ್ಕೆ ಬಂದಿರುವುದನ್ನು ನೋಡಿದ್ದೇನೆ. ಆದರೆ ಸಂಪೂರ್ಣ ಸುಳ್ಳಿನ ಕಂತೆಯ ಆಧಾರದಲ್ಲಿ ಚುನಾವಣೆ ಗೆದ್ದ ಮೊಟ್ಟಮೊದಲ ವ್ಯಕ್ತಿ ಮೋದಿ" ಎಂದು ಕಿಡಿ ಕಾರಿದ್ದಾರೆ.
ರಾಷ್ಟ್ರದ್ರೋಹ ಆರೋಪದಲ್ಲಿ ಬಂಧಿತನಾಗಿ ದೇಶಾದ್ಯಂತ ಸುದ್ದಿ ಮಾಡಿದ್ದ ಜೆಎನ್‌ಯು ವಿದ್ಯಾರ್ಥಿ ಮುಖಂಡ ಕನ್ಹಯ್ಯಾ ಕುಮಾರ್‌ಗೆ ಸಂಪೂರ್ಣ ಬೆಂಬಲ ಸೂಚಿಸಿದ ಕರುಣಾ, "ನನಗೆ ಕೂಡಾ ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ಉಗ್ರವಾದಿ ಹಿಂದುತ್ವದಿಂದ ಸ್ವಾತಂತ್ರ್ಯ ಬೇಕಾಗಿದೆ" ಎಂದು ಬಣ್ಣಿಸಿದ್ದಾರೆ.
ಛತ್ತೀಸ್‌ಗಢದ ಜಂಗ್‌ಜೀರ್ ಕ್ಷೇತ್ರದ ಮಾಜಿ ಸಂಸದೆಯಾಗಿರುವ ಶುಕ್ಲಾ, 2009ರ ಚುನಾವಣೆಯಲ್ಲಿ ಕೋರ್ಬಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಚರಣ್‌ದಾಸ್ ಮಹಾಂತ್ ವಿರುದ್ಧ ಸೋಲು ಅನುಭವಿಸಿದ್ದರು.





