ನೆರೆಹಾವಳಿ ಸಮಯದಲ್ಲಿ ಜಯಲಲಿತಾ ಹೆಲಿಕಾಪ್ಟರ್‌ನಿಂದ ಕೆಳಗಿಳಿಯಲಿಲ್ಲ: ಚುನಾವಣಾ ಪ್ರಚಾರ ಆರಂಭಿಸಿದ ಕರುಣಾನಿಧಿ

ಚೆನ್ನೈ, ಎಪ್ರಿಲ್ 24: ಚೆನ್ನೈ ನೆರೆ ಸಮಯದಲ್ಲಿ ತಮಿಳ್ನಾಡು ಮುಖ್ಯಮಂತ್ರಿ ಜಯಲಲಿತಾ ಮಲಗಿ ನಿದ್ರಿಸುತ್ತಿದ್ದರು ಎಂದು ಡಿಎಂಕೆ ಅಧ್ಯಕ್ಷ ಎಂ. ಕರುಣಾನಿಧಿ ಹೇಳಿರುವುದಾಗಿ ವರದಿಯಾಗಿದೆ. ತಾನು ವ್ಹೀಲ್ ಚೇರ್‌ನಲ್ಲಿ ಕುಳಿತು ಸಂಚರಿಸಿದ್ದೇನೆ. ಚೆನ್ನೈ ಭೀಕರ ನೆರೆಹಾವಳಿಸಮಯದಲ್ಲಿ ಕೂಡಾ ಜಯಲಲಿತಾ ಹೆಲಿಕಾಪ್ಟರ್‌ನಿಂದ ಕೆಳಗಿಳಿಯಲು ಸಿದ್ಧರಾಗಲಿಲ್ಲ ಎಂದು ಕರುಣಾನಿಧಿ ಆರೋಪಿಸಿದ್ದಾರೆ. ಚೆನ್ನೈಯ ಸೈದಾಪೇಟ್ಟದಲ್ಲಿ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಮಾತಾಡುತ್ತಾ ತೊಂಬತ್ತೆರಡು ವರ್ಷದ ಅವರು ಹೀಗೆ ಹೇಳಿದ್ದಾರೆ.
ನೆರೆಯ ಸಮಯದಲ್ಲಿ ಜಯಲಲಿತ ಜನರ ಕುರಿತಲ್ಲ ತನ್ನ ಸ್ವಂತ ಪ್ರಚಾರದತ್ತ ಗಮನಹರಿಸಿದ್ದು ಎಂದು ಟೀಕಿಸಿದ ಕರುಣಾನಿಧಿ ಹೇಳಿಕೆಗಳನ್ನು ನೋಡಿ ಓದುವ ಅಭ್ಯಾಸ ಇರುವ ಕರುಣಾನಿಧಿ ಇಲ್ಲಿ ನೇರವಾಗಿ ಮಾತಾಡಿದ್ದಾರೆ. ಅದೇವೇಳೆ ಅವರಿಂದ ಒಂದು ತಪ್ಪು ಸಂಭವಿಸಿತು. ಡಿಎಂಕೆ ಮಿತ್ರಪಕ್ಷವಾದ ಕಮ್ಯುನಿಸ್ಟ್ ಪಕ್ಷಕ್ಕೂ ಓಟು ಹಾಕಬೇಕೆಂದು ಮತದಾರರನ್ನು ವಿನಂತಿಸಿದರು. ಆದರೆ ವೇದಿಕೆಯಲ್ಲಿದ್ದ ಡಿಎಂಕೆ ನಾಯಕ ದಯಾನಿಧಿ ಮಾರನ್ ಕಾಂಗ್ರೆಸ್ ಡಿಎಂಕೆಯ ಮಿತ್ರಪಕ್ಷ ಎಂದು ತಿದ್ದಿದರು. ತನ್ನ ಹುಟ್ಟೂರಾದ ತಿರುವಾರೂರಿನಲ್ಲಿ ಈ ಬಾರಿ ವಿಧಾನಸಭೆಗೆ ಸ್ಪರ್ಧಿಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.







