ಮುಕ್ರಂಪಾಡಿ: ಮನೆ ಬಾಗಿಲು ಮುರಿದು ಕಳವು

ಪುತ್ತೂರು, ಎ. 24: ವೈದ್ಯರೊಬ್ಬರ ಮನೆಯಿಂದ ಕಳ್ಳತನ ನಡೆದ ಘಟನೆ ಪುತ್ತೂರು ನಗರದ ಹೊರವಲಯದ ಮುಕ್ರಂಪಾಡಿಯಲ್ಲಿ ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ.
ಡಾ.ಸುಬ್ರಹ್ಮಣ್ಯ ಭಟ್ ಎಂಬವರ ಮನೆಯೊಳಗಿದ್ದ 170 ಗ್ರಾಂ ಚಿನ್ನ, ಹಾಗೂ 5 ಸಾವಿರ ರೂ. ನಗದು ಕಳವಾಗಿದೆ.
ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಮನೆಯ ಮುಂಭಾಗದ ಬಾಗಿಲು ಮುರಿದು ಪ್ರವೇಶಿಸಿದ ಕಳ್ಳರು, ಒಳಗಿನ ಬಾಗಿಲುಗಳನ್ನೂ ಮುರಿದು ಕಪಾಟಿನಲ್ಲಿ ಇರಿಸಲಾಗಿದ್ದ ನಗ ನಗದು ಕಳವು ನಡೆಸಿದ್ದಾರೆ. ಇಂದು ಬೆಳಗ್ಗೆ ಮನೆ ಮಂದಿ ಮನೆಗೆ ಆಗಮಿಸುವಾಗ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿಗೆ ಸಮೀಪದ ಇನ್ನೆರಡು ಮನೆಗಳಲ್ಲೂ ಕಳ್ಳತನಕ್ಕೆ ವಿಫಲ ಯತ್ನ ನಡೆಸಲಾಗಿದೆ. ಒಂದು ಮನೆಗೆ ನುಗ್ಗಿದ ಕಳ್ಳರು ಬರಿಗೈಲಿ ವಾಪಾಸಾಗಿದ್ದಾರೆ. ಇನ್ನೊಂದು ಮನೆಯ ಬಾಗಿಲು ತೆರೆಯಲು ವಿಫಲ ಯತ್ನ ಮಾಡಿದ್ದಾರೆ.
Next Story





