ಬಂಟ್ವಾಳ: ನದಿಯಲ್ಲಿ ಮುಳುಗಿ ಯುವಕರಿಬ್ಬರು ಸಾವು

ಬಂಟ್ವಾಳ: ನದಿಯಲ್ಲಿ ಈಜಲೆಂದು ತೆರಳಿದ್ದ ಯುವಕರಿಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ತಾಲೂಕಿನ ಬಸ್ತಿಪಡ್ಪು ಎಂಬಲ್ಲಿ ರವಿವಾರ ಸಂಜೆ ನಡೆದಿದೆ.
ಮೃತರನ್ನು ದೆಹಲಿ ಮೂಲದ ಅನಸ್(18), ಅಸ್ಮಾನಿ(20) ಎಂದು ಗುರುತಿಸಲಾಗಿದೆ.
ಬಂಟ್ವಾಳ ಕೆಳಗಿನ ಪೇಟೆ ಸಮೀಪದ ಬಸ್ತಿಪಡ್ಪು ನೇತ್ರಾವತಿ ನದಿಯಲ್ಲಿ ರವಿವಾರ ಸಂಜೆ 8 ಮಂದಿಯ ತಂಡ ಈಜಲೆಂದು ತೆರಳಿದ್ದು ಸ್ನಾನ ಮಾಡುತ್ತಿದ್ದ ವೇಳೆ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಈ ಸಂದರ್ಭದಲ್ಲಿ ತಂಡದಲ್ಲಿದ್ದ ಉಳಿದ 6 ಮಂದಿ ಬೊಬ್ಬೆ ಹಾಕಿದ್ದರಿಂದ ಕೂಡಲೆ ಸ್ಥಳಕ್ಕೆ ಬಂದ ಸ್ಥಳೀಯರು ಮುಳುಗಿದವರನ್ನು ರಕ್ಷಿಸಲು ಪ್ರಯತ್ನಿಸಿದರೂ
ಯಶಸ್ವಿಯಾಗಿಲ್ಲ ಎಂದು ಸ್ಥಳೀಯರು ತಿಳಿಸಿದರು.
ಮೃತರು ವಲಸೆ ಕಾರ್ಮಿಕರಾಗಿದ್ದು ಕೆಳಗಿನ ಪೇಟೆ ಫರ್ನಿಚರ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.
Next Story





