ಕುಸ್ತಿಪಟು ಸಂದೀಪ್ ತೋಮರ್ ಒಲಿಂಪಿಕ್ಸ್‌ಗೆ ತೇರ್ಗಡೆ
ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡ ಭಾರತದ ನಾಲ್ಕನೆ ಕುಸ್ತಿಪಟು

ಉಲಾನ್‌ಬಾಟರ್, ಎ.24: ಕುಸ್ತಿಪಟು ಸಂದೀಪ್ ತೋಮರ್ ಮುಂಬರುವ ರಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.
ವಿಶ್ವ ಒಲಿಂಪಿಕ್ಸ್ ಅರ್ಹತಾ ಸುತ್ತಿನ ಮೊದಲ ಟೂರ್ನಮೆಂಟ್‌ನ ಅಂತಿಮ ದಿನವಾಗಿರುವ ರವಿವಾರ ಪುರುಷರ 57 ಕೆ.ಜಿ. ಫ್ರಿಸ್ಟೈಲ್ ವಿಭಾಗದಲ್ಲಿ ಸಂದೀಪ್ ಮೂರನೆ ಸ್ಥಾನದೊಂದಿಗೆ ಕಂಚು ಪಡೆದರು.
25ರ ಸಂದೀಪ್ ತೋಮರ್ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡ ಭಾರತದ ನಾಲ್ಕನೆ ಕುಸ್ತಿಪಟು. ಈಗಾಗಲೇ ಯೋಗೀಶ್ವರ್ ದತ್(65ಕೆ.ಜಿ. ಫ್ರೀಸ್ಟೈಲ್), ನರಸಿಂಗ್ ಯಾದವ್(74 ಕೆ.ಜಿ ಫ್ರೀಸ್ಟೈಲ್) ಮತ್ತು ಹರ್‌ದೀಪ್ ಸಿಂಗ್(ಗ್ರೀಕೊ -ರೋಮನ್ 98 ಕೆ.ಜಿ) ಒಲಿಂಪಿಕ್ಸ್‌ಗೆ ತೇರ್ಗಡೆಯಾಗಿದ್ದಾರೆ.
ಸಂದೀಪ್ ತೋಮರ್ ಅವರು ಉಕ್ರೈನ್‌ನ ಕುಸ್ತಿಪಟು ಆ್ಯಂಡ್ರಿ ಯೆತ್ಸೆಂಕೊ ವಿರುದ್ಧ 11-0 ಅಂತರದಲ್ಲಿ ಜಯ ಗಳಿಸಿ ಕಂಚು ಪಡೆಯುವುದರೊಂದಿಗೆ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವ ಅವಕಾಶ ಗಿಟ್ಟಿಸಿಕೊಂಡರು.
Next Story





