ಪ್ರೀತಿಯ ಬಗ್ಗೆ ರಾಣಿ ಬರೆದ ಪತ್ರ 14,000 ಪೌಂಡ್‌ಗೆ ಹರಾಜು

ಲಂಡನ್, ಎ. 24: ತಾನು ಮತ್ತು ರಾಜಕುಮಾರ ಫಿಲಿಪ್ ನಡುವೆ ಹೇಗೆ ಪ್ರೇಮಾಂಕುರವಾಯಿತು ಎಂಬ ಬಗ್ಗೆ ಬ್ರಿಟನ್ ರಾಣಿ ಬರೆದಿರುವ ಎರಡು ಪುಟಗಳ ಪತ್ರವೊಂದು ಬರೋಬ್ಬರಿ 14,000 ಪೌಂಡ್ (13.18 ಲಕ್ಷ ರೂಪಾಯಿ)ಗಳಿಗೆ ಹರಾಜಾಗಿದೆ. ಇದು ಅದರ ಮೂಲ ಅಂದಾಜು ಬೆಲೆಗಿಂತ 18 ಪಟ್ಟು ಅಧಿಕವಾಗಿದೆ.
ಈ ಪತ್ರವನ್ನು 1947ರಲ್ಲಿ 21 ವರ್ಷದ ರಾಜಕುಮಾರಿ ತನ್ನ ಮದುವೆಗೆ ಕೆಲವು ತಿಂಗಳು ಇದ್ದಾಗ ಲೇಖಕ ಬೆಟ್ಟಿ ಶ್ಯೂ ಎಂಬವರಿಗೆ ಬರೆದಿದ್ದರು. ತಾವು ಹೇಗೆ ಭೇಟಿಯಾದೆವು, ರಾಜಕುಮಾರ ಫಿಲಿಪ್‌ರ ಸ್ಪೋರ್ಟ್ಸ್ ಕಾರ್‌ನಲ್ಲಿ ಫೋಟೊಗ್ರಾಫರ್ ಒಬ್ಬ ತಮ್ಮನ್ನು ಹೇಗೆ ಹಿಂಬಾಲಿಸುತ್ತಿದ್ದನು ಹಾಗೂ ಲಂಡನ್‌ನ ನೈಟ್‌ಕ್ಲಬ್‌ಗಳಲ್ಲಿ ತಾವು ಹೇಗೆ ನರ್ತಿಸಿದೆವು ಎಂಬ ಸಂಗತಿಗಳನ್ನು ಪತ್ರದಲ್ಲಿ ವಿವರಿಸಲಾಗಿದೆ.
Next Story





