ಬಾರ್ಸಿಲೋನ ಓಪನ್: ನಡಾಲ್-ನಿಶಿಕೊರಿ ಫೈನಲ್‌ಗೆ
ಬಾರ್ಸಿಲೋನ, ಎ.23: ಅಗ್ರ ಶ್ರೇಯಾಂಕದ ಆಟಗಾರರಾದ ರಫೆಲ್ ನಡಾಲ್ ಹಾಗೂ ಕೀ ನಿಶಿಕೊರಿ ಬಾರ್ಸಿಲೋನ ಓಪನ್‌ನಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.
ಶನಿವಾರ ಇಲ್ಲಿ ನಡೆದ ಪುರುಷರ ಸಿಂಗಲ್ಸ್‌ನ ಸೆಮಿ ಫೈನಲ್‌ನಲ್ಲಿ ಸ್ಪೇನ್‌ನ ನಡಾಲ್ ಜರ್ಮನಿಯ ಫಿಲಿಪ್ ಕೊರ್ಲ್ಸ್‌ಕ್ರೈಬರ್‌ರನ್ನು 6-3, 6-3 ಸೆಟ್‌ಗಳ ಅಂತರದಿಂದ ಮಣಿಸಿದರು.
ಮತ್ತೊಂದು ಸೆಮಿಫೈನಲ್‌ನಲ್ಲಿ ಜಪಾನ್‌ನ ನಿಶಿಕೊರಿ ಅವರು ಫ್ರೆಂಚ್‌ನ ಆರನೆ ಶ್ರೇಯಾಂಕದ ಬೆನಾಟ್ ಪೈರ್‌ರನ್ನು 6-3, 6-2 ಸೆಟ್‌ಗಳ ಅಂತರದಿಂದ ಮಣಿಸಿದ್ದಾರೆ.
14 ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ನಡಾಲ್ ಇನ್ನೊಂದು ಪಂದ್ಯ ಜಯಿಸಿದರೆ ಅರ್ಜೆಂಟೀನದ ಲೆಜೆಂಡ್ ಗುಲೆರ್ಮೊ ವಿಲಾಸ್ ಆವೆ ಮಣ್ಣಿನಲ್ಲಿ ಜಯಿಸಿದ್ದ 49 ಪ್ರಶಸ್ತಿಗಳ ದಾಖಲೆಯನ್ನು ಸರಿಗಟ್ಟಲಿದ್ದಾರೆ.
ಸ್ಟಟ್‌ಗರ್ಟ್ ಓಪನ್: ಸಾನಿಯಾ-ಹಿಂಗಿಸ್ ಫೈನಲ್‌ಗೆ
ಹೊಸದಿಲ್ಲಿ, ಎ.24: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಝಾ ಹಾಗೂ ಅವರ ಡಬಲ್ಸ್ ಜೊತೆಗಾರ್ತಿ ಮಾರ್ಟಿನಾ ಹಿಂಗಿಸ್ ಸ್ಟಟ್‌ಗರ್ಟ್ ಓಪನ್ ಟೆನಿಸ್ ಟೂರ್ನಿಯಲ್ಲಿ ಫೈನಲ್‌ಗೆ ತಲುಪಿದ್ದಾರೆ.
ಇಲ್ಲಿ ಶನಿವಾರ ನಡೆದ ಮಹಿಳೆಯರ ಡಬಲ್ಸ್ ಸೆಮಿಫೈನಲ್‌ನಲ್ಲಿ ಸಾನಿಯಾ-ಹಿಂಗಿಸ್ ಜೋಡಿ ಶ್ರೇಯಾಂಕರಹಿತ ಸಬಿನ್ ಲಿಸಿಕಿ ಹಾಗೂ ಲೂಸಿ ಸಫರೋವಾರನ್ನು 6-4, 7-5 ನೇರ ಸೆಟ್‌ಗಳಿಂದ ಮಣಿಸಿದೆ.







