ನೀರಾವರಿ ಭೂಮಿಯ ಸಂಪೂರ್ಣ ಪಟ್ಟಿ ಒದಗಿಸುವಂತೆ ರಾಜ್ಯಗಳಿಗೆ ಎನ್‌ಜಿಟಿ ಆದೇಶ
ಹೊಸದಿಲ್ಲಿ, ಎ.24: ತಮ್ಮ ವ್ಯಾಪ್ತಿಯಲ್ಲಿರುವ ನೀರಾವರಿ ಭೂಮಿಯ ಸಂಪೂರ್ಣ ಪಟ್ಟಿಯೊಂದನ್ನು ಸಲ್ಲಿಸುವಂತೆ ಎಲ್ಲ ರಾಜ್ಯ ಸರಕಾರಗಳಿಗೆ ರಾಷ್ಟ್ರೀಯ ನ್ಯಾಯಾಧಿಕರಣವು ನಿರ್ದೇಶನ ನೀಡಿದೆ.
ಜೈವಿಕವಾಗಿ ಪ್ರಾಮುಖ್ಯ ಪಡೆದಿರುವ ವಿಶಾಲ ಭೂ ಪ್ರದೇಶಗಳು ಕಾನೂನಿನನ್ವಯ ರಕ್ಷಿತವೆಂದು ಅಧಿಸೂಚಿಸದಿರುವುದರಿಂದಾಗಿ ನಷ್ಟವಾಗುತ್ತಿವೆಯೆಂಬ ಮನವಿಯೊಂದರ ಹಿನ್ನೆಲೆಯಲ್ಲಿ ಈ ನಿರ್ದೇಶನ ನೀಡಲಾಗಿದೆ.
ನೀರಾವರಿ ಭೂಮಿಯ ಕುರಿತು ತಮ್ಮ ಯೋಜನೆಗಳನ್ನು ಸಲ್ಲಿಸಿದ ರಾಜ್ಯಗಳ ಕುರಿತು ಎರಡು ವಾರಗಳಲ್ಲಿ ದಾಖಲೆ ನೀಡುವಂತೆ ಪರಿಸರ ಸಚಿವಾಲಯಕ್ಕೆ ನ್ಯಾಯಮೂರ್ತಿ ಸ್ವತಂತ್ರ ಕುಮಾರ್ ನೇತೃತ್ವದ ಪೀಠವೊಂದು ಸೂಚಿಸಿದೆ.
ತಮ್ಮ ತಮ್ಮ ರಾಜ್ಯಗಳಲ್ಲಿರುವ ನೀರಾವರಿ ಭೂಮಿಯ ಕುರಿತು ಯಾವ ರಾಜ್ಯಗಳು ಯೋಜನೆಗಳನ್ನು ಸಲ್ಲಿಸಿವೆ ಹಾಗೂ ಯಾವ ರಾಜ್ಯಗಳು ಸಲ್ಲಿಸಿಲ್ಲವೆಂಬ ಕುರಿತು 2 ವಾರಗಳೊಳಗೆ ಯಥಾಸ್ಥಿತಿ ವರದಿ ನೀಡುವಂತೆ ಪರಿಸರ ಮತ್ತು ಅರಣ್ಯ ಸಚಿವಾಲಯದ ಪರ ಹಾಜರಿದ್ದ ವಕೀಲರಿಗೆ ನ್ಯಾಯಪೀಠ ತಿಳಿಸಿದೆ.
ಅಂತಹ ಪ್ರಸ್ತಾವಗಳನ್ನು ಸಲ್ಲಿಸಿರುವ, ಆದರೆ ಅವು ಅಪೂರ್ವವೆಂದು ಕಂಡು ಬಂದ ರಾಜ್ಯಗಳ ವಿವರವನ್ನೂ ಒದಗಿಸಲಾಗುವುದು. ಈ ಬಗ್ಗೆ ರಾಜ್ಯಗಳಿಗೆ ಮಾಹಿತಿ ನೀಡಲಾಗಿದೆ. ಈ ಯಥಾಸ್ಥಿತಿ ವರದಿ ಎರಡು ವಾರಗಳೊಳಗೆ ಸಲ್ಲಿಕೆಯಾಗಲಿ. ಇದೇ ವೇಳೆ, ಎಲ್ಲ ರಾಜ್ಯಗಳೂ ತಮ್ಮ ವ್ಯಾಪ್ತಿಯಲ್ಲಿರುವ ನೀರಾವರಿ ಭೂಮಿಯ ಸಂಪೂರ್ಣ ಪಟ್ಟಿಯನ್ನೂ ನೀಡಬೇಕೆಂದೂ ಅದು ಹೇಳಿದೆ.
ನೀರಾವರಿ ಭೂಮಿ (ಸಂರಕ್ಷಣೆ ಹಾಗೂ ಪ್ರಬಂಧನ) ಕಾಯ್ದೆ-2010ರನ್ವಯ ರಾಜ್ಯದಲ್ಲಿರುವ ಎಲ್ಲ ನೀರಾವರಿ ಭೂಮಿಯನ್ನು ಗುರುತಿಸುವಂತೆ ಕೇಂದ್ರ ಹಾಗೂ ಉತ್ತರ ಪ್ರದೇಶ ಸರಕಾರಗಳಿಗೆ ನಿರ್ದೇಶನ ನೀಡುವಂತೆ ಕೋರಿ, ಆನಂದ ಆರ್ಯ ಎಂಬವರು ಸಲ್ಲಿಸಿದ್ದ ಮನವಿಯ ಮೇರೆಗೆ ನ್ಯಾಯಾಧಿಕರಣವು ಈ ನಿರ್ದೇಶನ ನೀಡಿದೆ.
ಪೀಠವು ಮುಂದಿನ ವಿಚಾರಣೆಯನ್ನು ಮೇ19ಕ್ಕೆ ನಿಗದಿಗೊಳಿಸಿದೆ.





