ಉತ್ತರ ಕೊರಿಯ ಸಬ್‌ಮರೀನ್‌ನಿಂದ ಕ್ಷಿಪಣಿ ಹಾರಾಟ
ಸಿಯೋಲ್, ಎ. 24: ನಾಯಕ ಕಿಮ್ ಜಂಗ್ ಉನ್ ಉಸ್ತುವಾರಿಯಲ್ಲಿ ಸಬ್‌ಮರೀನ್‌ನಿಂದ ಹಾರಿಸುವ ಪ್ರಕ್ಷೇಪಕ ಕ್ಷಿಪಣಿಯ ಪರೀಕ್ಷೆಯನ್ನು ನಡೆಸಿರುವುದಾಗಿ ಉತ್ತರ ಕೊರಿಯ ರವಿವಾರ ಹೇಳಿತು. ಪರೀಕ್ಷೆಯು ‘‘ಭಾರೀ ಯಶಸ್ಸು’’ ಕಂಡಿದ್ದು, ಇದು ಶಕ್ತಿಶಾಲಿ ಪರಮಾಣು ದಾಳಿಗೆ ದೇಶಕ್ಕೆ ಇನ್ನೂ ಒಂದು ವಿಧಾನವನ್ನು ಒದಗಿಸಿದೆ ಎಂದಿತು.
ಉತ್ತರ ಕೊರಿಯ ತನ್ನ ಪೂರ್ವ ಕರಾವಳಿಯ ಸಮುದ್ರದಲ್ಲಿ ಶನಿವಾರ ಸಬ್‌ಮರೀನ್ ಒಂದರಿಂದ ಕ್ಷಿಪಣಿಯೊಂದನ್ನು ಉಡಾಯಿಸಿತು ಎಂದು ದಕ್ಷಿಣ ಕೊರಿಯದ ಸೇನೆ ಹೇಳಿದೆ. ಅದು ಇನ್ನೊಂದು ಪರಮಾಣು ಪರೀಕ್ಷೆ ಅಥವಾ ಕ್ಷಿಪಣಿ ಹಾರಾಟವನ್ನು ನಡೆಸಬಹುದು ಎಂಬ ಭೀತಿ ಇದೆ ಎಂದಿದೆ.
ಸಬ್‌ಮರೀನ್‌ನಿಂದ ಹಾರಿಸಲ್ಪಟ್ಟ ಕ್ಷಿಪಣಿ ಸುಮಾರು 30 ಕಿ.ಮೀ. ಹಾರಿತು ಎಂದು ದಕ್ಷಿಣ ಕೊರಿಯದ ರಕ್ಷಣಾ ಸಚಿವಾಲಯದ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದರು.
Next Story





